Sugar Export Ban: ಭಾರತದಿಂದ ಸಕ್ಕರೆ ರಫ್ತು ಮೇಲಿನ ನಿರ್ಬಂಧ ವಿಸ್ತರಣೆ, ಎಲ್ಲಿಯವರೆಗೆ?
ಬೆಂಗಳೂರು, ಅಕ್ಟೋಬರ್ 18: ದೇಶಿಯ ಉತ್ಪಾದನೆ ಮತ್ತು ಪೂರೈಕೆ ಖಚಿತತೆಗಾಗಿ ಭಾರತ ಸರ್ಕಾರ ಸಕ್ಕರೆ ಮೇಲಿನ ರಫ್ತು ನಿರ್ಬಂಧಗಳನ್ನು ಮುಂದಿನ ಆದೇಶವರೆಗೆ ವಿಸ್ತರಣೆ ಮಾಡಿ ಆದೇಶಿಸಿದೆ.
ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಇತ್ತೀಚಿಗೆ ಹೊರಡಿಸಿದ ಆದೇಶ ನೋಡುವುದಾದರೆ, ಇದೇ ತಿಂಗಳ ಅಕ್ಟೋಬರ್ 31ರ ನಂತರ ಸಕ್ಕರೆ ರಫ್ತಿನ ಮೇಲಿನ ನಿರ್ಬಂಧಗಳು ಮುಂದುವರಿಯಲಿವೆ. ಇದು ಮುಂದಿನ ಆದೇಶದವರೆಗೆ ವಿಸ್ತರಣೆ ಮಾಡಲಾಗಿದೆ. ಜೊತೆಗೆ ಈ ನಿರ್ಬಂಧಗಳು ಒಂದೆರಡು ದೇಶಗಳಿಗೆ ಮಾಡುವ ರಫ್ತಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ಈ ನಿರ್ಬಂಧವು ಮೂಲಭೂತ ಸೌಲಭ್ಯಗಳ ಸರಕು ವರ್ಗದ ವ್ಯಾಪ್ತಿಗೆ ಬರುತ್ತದೆ. ರಫ್ತಿಗೆ ಯಾವುದೇ ಕೋಟಾ ಇನ್ನೂವರೆಗೆ ಘೋಷಿಸದ ಕಾರಣ ಸದ್ಯಕ್ಕೆ ಸಕ್ಕರೆ ರಫ್ತು ರದ್ದು ಎನ್ನಬಹುದಾಗಿದೆ. ಪರಿಸ್ಥಿತಿ ಸುಧಾರಿಸಿದರೆ ಕೇಂದ್ರ ಸರ್ಕಾರ ಮತ್ತೆ ಅವಲೋಕಿಸಿ, ತಜ್ಞರ ಜತೆ ಚರ್ಚಿಸಿ ಒಂದಷ್ಟು ಪ್ರಮಾಣದ ಸಕ್ಕರೆ ರಫ್ತಿಗೆ ಅವಕಾಶ ಕೊಡುವ ಸಾಧ್ಯತೆಗಳು ಇವೆ.
ಭಾರತ ಸಕ್ಕರೆ ರಫ್ತಿನ ಎರಡನೇ ದೊಡ್ಡ ದೇಶ
ಭಾರತ ಪ್ರಪಂಚದಲ್ಲಿ ಸಕ್ಕರೆ ರಫ್ತುದಾರ ದೊಡ್ಡ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕಳೆದ ಒಂದು ವರ್ಷದಿಂದ ಹಿಡಿದು ಪ್ರಸಕ್ತ 2023ರ ಅಕ್ಟೋಬರ್ 31ರ ವರೆಗೆ ಸಕ್ಕರೆ ನಿರ್ಬಂಧ ವಿಧಿಸಲಾಗಿತ್ತು. ಈ ಮೂಲಕ ಅನಿಯಂತ್ರಣವಾಗಿ ಸಕ್ಕರೆ ಬೇರೆ ದೇಶಗಳಿಗೆ ಹರಿದು ದೇಶಿಯವಾಗಿ ಕೊರತೆ ಆಗದಿರಲಿ ಎಂದು ಕೇಂದ್ರ ರಫ್ತು ನಿಷೇಧಕ್ಕೆ ನಿರ್ಧರಿಸಿತ್ತು. ಈ ಮೂಲಕ ದೇಶಿಯವಾಗಿ ಮೊದಲು ಲಭ್ಯವಾಗುವಂತೆ ಮಾಡಿತು.
ಭಾರತದಲ್ಲಿ ಈ ಹಿಂದಿನ ಋತುವಿನಲ್ಲಿ ದಾಖಲೆಯ 11.1 ಮಿಲಿಯನ್ ಟನ್‌ಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಸೆಪ್ಟೆಂಬರ್ 30 ರಂದು ಕೊನೆಗೊಳ್ಳುವ ಪ್ರಸಕ್ತ ಋತುವಿನಲ್ಲಿ ಕೇವಲ 6.1 ಮಿಲಿಯನ್ ಟನ್ ಸಕ್ಕರೆ ರಫ್ತು ಮಾಡಲು ಗಿರಣಿಗಳಿಗೆ ಅವಕಾಶ ಮಾಡಿಕೊಡಲಾಯಿತು.












Click it and Unblock the Notifications