ಈರುಳ್ಳಿ ರಫ್ತು ಸುಂಕ ಶೇ.40 ಹೇರಿಕೆ ವಿರುದ್ಧ ರೈತರು ಕೆಂಡ, ಪ್ರತಿಭಟನೆ
ನಾಸಿಕ್, ಆಗಸ್ಟ್ 21: ಈರುಳ್ಳಿಗೆ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರೈತ ಸಂಘದ ಶೇತ್ಕಾರಿ ಸಘಟನಾ ನೇತೃತ್ವದಲ್ಲಿ ರೈತರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸೋಮವಾರ 'ರಸ್ತಾ ತಡೆ' ನಡೆಸಿ ಪ್ರತಿಭಟಿಸಿದರು.
ಉತ್ತಮ ಬೆಳೆ, ಬೆಲೆ ಇಲ್ಲದೇ ರೈತರು ಆತ್ಮಹತ್ಯೆಯಿಂದ ಸಾವಿಗೀಡಾಗುತ್ತಿದ್ದಾರೆ. ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿದೆ. ಇತ್ತ ಬೆಲೆ ಏರಿಕೆಯೂ ಆಗಿದೆ. ಆದ್ದರಿಂದ ಸರ್ಕಾರ ರೈತರನ್ನು ಗಮನಿಸಬೇಕು. ರೈತರ ಆತ್ಮಹತ್ಯೆಯನ್ನು ತಡೆಯಬೇಕು ಎಂದು ಪ್ರತಿಭಟನೆಯಲ್ಲಿ ರೈತ ಮುಖಂಡರು ಆಗ್ರಹಿಸಿದರು.

2023ರ ಡಿಸೆಂಬರ್ 31 ರವರೆಗೆ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ತಡೆಗೆ ಹಾಗೂ ಸರಬರಾಜು ಸುಧಾರಣೆಗೆ ಈರುಳ್ಳಿ ರಫ್ತಿನ ಮೇಲೆ ಸರ್ಕಾರ ಶನಿವಾರ 40 ರಷ್ಟು ಸುಂಕ ವಿಧಿಸಿದೆ. ಈ ಕುರಿತು ಆಗಸ್ಟ್ 19 ರಂದು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಈರಳ್ಳಿ ರಫ್ತಿನ ಮೇಲೆ ಶೇಕಡಾ 40 ಅನ್ನು ವಿಧಿಸಿದ್ದು ಬಿಹಿರಂಗಗೊಂಡಿದೆ.
ಆ.11ರಂದು ಬಫರ್ ಸ್ಟಾಕ್ ಬಿಡುಗಡೆ ಆಗಿತ್ತು
ಈ ವರ್ಷಾಂತ್ಯ ಡಿಸೆಂಬರ್ 31 ರವರೆಗೆ ಈರುಳ್ಳಿ ರಫ್ತಿನ ಮೇಲೆ ಈ ಶೇಕಡಾ 40 ರಷ್ಟು ಸುಂಕ ಇರಲಿದೆ. ಇನ್ನೂ ಸೆಪ್ಟೆಂಬರ್‌ನಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಆಗಸ್ಟ್ 11 ರಂದು ಕೇಂದ್ರ ಸರ್ಕಾರವು ದಾಸ್ತಾನು ಮಾಡಿಟ್ಟಿದ್ದ (ಬಫರ್ ಸ್ಟಾಕ್) ಸಂಗ್ರಹದಿಂದ ಈರುಳ್ಳಿ ಬಿಡುಗಡೆ ಮಾಡಲು ಆರಂಭಿಸಿತು.

2023-24ರ ಋತುವಿನಲ್ಲಿ 3 ಲಕ್ಷ ಟನ್ ಈರುಳ್ಳಿಯನ್ನು ಸದರಿ ವರ್ಷದಲ್ಲಿ ಮಾರುಕಟ್ಟೆಗಳಿಗೆ ಅಗತ್ಯ ಪೂರೈಕೆ ಮಾಡಲು ನಿರ್ವಹಿಸುವುದಾಗಿ ಈ ಹಿಂದೆ ಕೇಂದ್ರ ಸರ್ಕಾರ ತಿಳಿಸಿತ್ತು. ಕಳೆದ ವರ್ಷ 2022-23ರಲ್ಲಿ ಕೇಂದ್ರವು 2.51 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಅನ್ನು ಸೂಕ್ತ ಸಮಯದಲ್ಲಿ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿತ್ತು.
ಕೇಂದ್ರ ಸರ್ಕಾರ ಈ ಬಫರ್ ಸ್ಟಾಕ್ ಈರುಳ್ಳಿ ಅನ್ನು ಯಾವುದೇ ಪೂರ್ಣ ಅಗತ್ಯತೆಗಳನ್ನು ಪೂರೈಸಲು ಮತ್ತು ಬೆಲೆ ಏರಿಕೆ ಆಗದಂತೆ ಸ್ಥಿರತೆ ಸಾಧಿಸಲು ಮುಖ್ಯವಾಗಿ ಉತ್ಪಾದನೆ ಕಡಿಮೆಯಾಗಿ ಬೆಲೆಗಳು ಗಣನೀಯವಾಗಿ ಏರಿಕೆ ಆದಾಗಿ ಈ ಬಫರ್ ಸ್ಟಾಕ್ ಅನ್ನು ಬಿಡುಗಡೆ ಮಾಡುತ್ತದೆ.












Click it and Unblock the Notifications