Automobile: 2029ರ ವೇಳೆಗೆ ಭಾರತಕ್ಕೆ ವಿಶ್ವದ ಬೃಹತ್ 'ಆಟೋಮೊಬೈಲ್ ಉತ್ಪಾದನಾ ಹಬ್' ಸ್ಥಾನ: ಹೇಗೆ? ಮಾಹಿತಿ
ಬೆಂಗಳೂರು, ಫೆಬ್ರವರಿ 14: ಆಟೋಮೊಬೈಲ್ ಕ್ಷೇತ್ರದಲ್ಲಿ ಚೀನಾ, ಅಮೆರಿಕಾ ಬಿಟ್ಟರೆ ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಮಹತ್ವದ ಸ್ಥಾನ ತಲುಪಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತದ ಯೋಜನೆಗಳು, ಗುರಿ ಉದ್ದೇಶಗಳನ್ನು ವಿವರಿಸಿದ್ದಾರೆಂದು.
ಭಾರತವು ಮುಂದಿನ ಭವಿಷ್ಯಕ್ಕಾಗಿ ದೊಡ್ಡ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ 2029 ರ ವೇಳೆಗೆ ವಿಶ್ವದ ಅತಿದೊಡ್ಡ ಆಟೋಮೊಬೈಲ್ ತಯಾರಕ ದೇಶವಾಗಿ ಹೊರ ಹೊಮ್ಮುವುದು ಒಂದಾಗಿದೆ. ಭಾರತದ ಆಟೋಮೊಬೈಲ್ ಕ್ಷೇತ್ರವು ನ್ಯೂಮೆರೋ ಯುನೊ ಸ್ಥಾನಕ್ಕೆ ಏರುವ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಕುದೆ ಎಂದು ಅವರು ಹೇಳಿದರು.

2023 ಭಾರತದ ಆಟೋಮೊಬೈಲ್ ಉದ್ಯಮಕ್ಕೆ ವಿಶೇಷ
ಪ್ರಸ್ತುತದಲ್ಲಿ ಭಾರತ ದೇಶ ಜಾಗತಿಕವಾಗಿ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯ ತಾಣವಾಗಿದೆ. ಇದರಲ್ಲಿ ಸ್ವದೇಶಿ ನಿರ್ಮಿತ 'ಮೇಡ್ ಇನ್ ಇಂಡಿಯಾ' ಕಾರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ 2023 ವರ್ಷವು ಭಾರತದ ಆಟೋಮೊಬೈಲ್ ಉದ್ಯಮಕ್ಕೆ ವಿಶೇಷ ವರ್ಷವಾಗಿದೆ. ಕಾರಣ ಈ ವರ್ಷ ಆಟೋಮೊಬೈಲ್ ರಫ್ತು ಪ್ರಮಾಣ ಶೇಕಡಾ 4 ಪ್ರತಿಶತದಷ್ಟು ಬೆಳವಣಿಗೆ ದಾಖಲಿಸಿವೆ. ಇದರ ಪರಿಣಾಮವಾಗಿ ಈ ವರ್ಷ ಭಾರತದ ಕಾರು ರಫ್ತು 6,71,384 ಯುನಿಟ್‌ಗೆ ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.
"ದೇಗುಲ ಕಟ್ಟಿಸಿ, ದೇಗುಲದ ಶಿಲ್ಪಿಯ ಕೈ ಕತ್ತರಿಸಿ.."; ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಕಿಶೋರ್ ಪೋಸ್ಟ್ ವೈರಲ್!
ಭಾರತ ಸರ್ಕಾರದ ಆಟೋಮೊಬೈಲ್ ಯೋಜನೆ
ನಮ್ಮ ಭಾರತವನ್ನು ವಿಶ್ವದ ಅತಿ ದೊಡ್ಡ ವಾಹನ ತಯಾರಕ ರಾಷ್ಟ್ರವನ್ನಾಗಿ ಮಾಡುವ ಗುರಿಯು ಕೈಗೆಟಕುವ ಹಂತದಲ್ಲಿದೆ. ಮುಖ್ಯವಾಗಿ ಭಾರತ ಸದ್ಯ ವಿಶ್ವ ದರ್ಜೆಯ ರಸ್ತೆ ಜಾಲವನ್ನು ನಿರ್ಮಿಸಲು, ಪರ್ಯಾಯ ಇಂಧನಗಳಿಗೆ ಬದಲಾಯಿಸಲು ಮತ್ತು ರಫ್ತುಗಳನ್ನು ಹೆಚ್ಚಿಸಲು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡವತ್ತ ಗಮನ ನೆಟ್ಟಿದೆ.
ಪರ್ಯಾಯ ಮತ್ತು ಶುದ್ಧ ಇಂಧನದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮವ ಹೆಬ್ಬಯಕೆಯನ್ನು ಭಾರತ ಹೊಂದಿದೆ. ಕೇಂದ್ರ ಸರ್ಕಾರವು ಪಳೆಯುಳಿಕೆ ಇಂಧನಗಳಿಂದ ವೈವಿಧ್ಯಗೊಳಿಸಲಿದೆ. ಇದರ ಆಮದಿನ ವೆಚ್ಚವು ಅತ್ಯಧಿಕ ಪ್ರಮಾಣದಲ್ಲಿದೆ.

ಈ ಉದ್ಯಮದ ವಿಫುಲ ಅವಕಾಶ: ಪ್ರಧಾನಿ ಕರೆ
ಪಾಣಿಪತ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯವರು ಎಥೆನಾಲ್ ಮತ್ತು ಜೈವಿಕ ಬಿಟುಮೆನ್ ತಯಾರಿಸಲು ಅಕ್ಕಿ ಹುಲ್ಲನ್ನು ಬಳಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಆಟೋಮೊಬೈಲ್ ಕ್ಷೇತ್ರಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಕರೆ ನೀಡಿದ್ದಾರೆ.
ಆಟೋ ಮೊಬೈಲ್ ಉದ್ಯಮವು ಉತ್ಪಾದನಾ ಒಟ್ಟು ದೇಶಿಯು ಉತ್ಪನ್ನ (GDP) ವು ಶೇಕಡಾ 46 ಹಾಗೂ ರಾಷ್ಟ್ರೀಯ GDPಯ ಶೇಕಡಾ 7ರಷ್ಟು ಕೊಡುಗೆ ನೀಡುತ್ತದೆ. ಅಲ್ಲದೇ ಈ ಕ್ಷೇತ್ರವು ಸುಮಾರು 1.5 ಮಿಲಿಯನ್ ಜನರಿಗೆ ನೇರ ಉದ್ಯೋಗವನ್ನು ಒದಗಿಸುತ್ತಿದೆ. ಈ ವಲಯ ವಿಸ್ತರಣೆ ಮಾಡುವ ಮೂಲಕ ಭಾರತವು ವಿಶ್ವಮಟ್ಟದಲ್ಲಿ ಪ್ರಬಲವಾಗಿ ಬೆಳೆಯಲು ಸಜ್ಜಾಗಿದೆ.
2035 ರ ವೇಳೆಗೆ ಅತ್ಯಧಿಕ ಆದಾಯ?
ಈ ಉದ್ಯಮ ವಿಸ್ತರಣೆ, ವಿದೇಶಗಳಿಗೆ ಆಟೋಮೊಬೈಲ್ ರಫ್ತು ಕುರಿತು ಇತ್ತೀಚೆಗೆ ಸಕಾರಣದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದರು. ಜಾಗತಿಕ ಪೂರೈಕೆ ಸರಪಳಿಯಲ್ಲಿ ಚೀನಾ ಮೀರಿಸುವ ಹಂತದಲ್ಲಿ ಉತ್ಪಾದನೆ, ರಫ್ತಿಗೆ ಭಾರತ ಯೋಜಿಸಿದೆ. ಸಲಹಾ ಸಂಸ್ಥೆ ಆರ್ಥರ್ ಡಿ ಲಿಟಲ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದ ಆಟೋ ವಲಯವು ತನ್ನ ರಫ್ತುಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಮೂಲಕ 2035 ರ ವೇಳೆಗೆ ಹೆಚ್ಚುತ್ತಿರುವ ಆದಾಯದಲ್ಲಿ $400 ಬಿಲಿಯನ್ ಗಡಿ ದಾಟಬಹುದು ಎಂದು ತಿಳಿಸಿದೆ ಎಂದು ಗಡ್ಕರಿ ಮಾಹಿತಿ ನೀಡಿದರು.












Click it and Unblock the Notifications