ಶಬರಿಮಲೆಗೆ ಭೇಟಿ ನೀಡಿದ ಎರಡನೇ ಕಮ್ಯೂನಿಸ್ಟ್ ಸಿಎಂ

Posted By:
Subscribe to Oneindia Kannada

   ಮೊಟ್ಟಮೊದಲ ಬಾರಿಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಶಬರಿಮಲೈಗೆ ಭೇಟಿ | Oneindia Kannada

   ತಿರುವನಂತಪುರಂ, ಅ 19: ಕಮ್ಯೂನಿಸ್ಟ್ (ಸಿಪಿಐ-ಎಂ) ಮುಖ್ಯಮಂತ್ರಿಯೊಬ್ಬರು ಪುರಾಣಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಯಲಕ್ಕೆ ಭೇಟಿ ನೀಡಿ, ಪ್ರಸಾದ ಸ್ವೀಕರಿಸಿದ್ದಾರೆ.ಮಾಜಿ ಸಿಎಂ ವಿ ಎಸ್ ಅಚ್ಯುತಾನಂದನ್ ನಂತರ ಪಿಣರಾಯಿ, ಶಬರಿಮಲೆಗೆ ಭೇಟಿ ನೀಡಿದ ಎರಡನೇ ಮಾರ್ಕಿಸ್ಟ್ ಸಿಎಂ ಆಗಿದ್ದಾರೆ.

   ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಅ 17) ದೇವಸ್ಥಾನಕ್ಕೆ ಭೇಟಿ ನೀಡಿ, ಮೂರು ತಿಂಗಳುಗಳ ಕಾಲ ನಡೆಯುವ 'ಮಂಡಲ ಮಕರವಿಳಕ್ಕು' ಕಾರ್ಯಕ್ರಮದ ಪೂರ್ವತಯಾರಿಯನ್ನು ವೀಕ್ಷಿಸಿದರು.

   First ever communist CM visited Sabarimala temple in Kerala

   ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರ ಗ್ರೀನ್ ಸಿಗ್ನಲ್

   ತುಂತುರು ಮಳೆಯಲ್ಲಿ ಎಂಟು ಕಿಲೋಮೀಟರ್ ದೂರವನ್ನು ನಡೆದುಕೊಂಡೇ ಕ್ರಮಿಸಿದ ವಿಜಯನ್, ತೊಂಬತ್ತು ನಿಮಿಷ ಬೆಟ್ಟ ಹತ್ತಿ ದೇವಾಲಯಕ್ಕೆ ಬಂದಿದ್ದೇನೆ. ಇದೊಂದು ಉತ್ತಮ ಅನುಭವ, ದೇವಾಲಯದ ಸರ್ವತೋಮುಖ ಅಭಿವೃದ್ದಿಗೆ ನಮ್ಮ ಸರಕಾರ ಬದ್ದವಾಗಿದೆ ಎಂದಿದ್ದಾರೆ.

   ನವೆಂಬರ್ ನಿಂದ ಜನವರಿ ತಿಂಗಳವರೆಗೆ ನಡೆಯುವ ಮಕರವಿಳಕ್ಕು ಧಾರ್ಮಿಕ ಕಾರ್ಯಕ್ರಮಕ್ಕೆ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಈ ವೇಳೆ ಸೂಕ್ತ ಸೌಲಭ್ಯ ನೀಡಬೇಕಾಗುತ್ತದೆ. ಭಕ್ತಾದಿಗಳಿಗೆ ಯಾವ ರೀತಿಯ ತೊಂದರೆಯಾಗಬಾರದೆಂದು ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆಗೆ ಸೂಚಿಸಿದ್ದೇನೆಂದು ವಿಜಯನ್ ಹೇಳಿದ್ದಾರೆ.

   ಮುಖ್ಯಮಂತ್ರಿಗಳ ಜೊತೆ ಮುಜರಾಯಿ ಖಾತೆಯ ಸಚಿವ ಕಡಕಂಪಲ್ಲಿ ಸುರೇಂದ್ರನ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದರು.

   ನೂತನ ಪ್ರಧಾನ ಅರ್ಚಕ: ತ್ರಿಶೂರ್ ಜಿಲ್ಲೆಯ ಕೊಡಕಾರದ ಎ.ವಿ.ಉನ್ನಿಕೃಷ್ಣನ್ ನಂಬೂದಿರಿ ಮುಂದಿನ ಒಂದು ವರ್ಷದ ಅವಧಿಗೆ ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕರಾಗಿ (ತಂತ್ರಿ) ನೇಮಕಗೊಂಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Kerala Chief Minister Pinarayi Vijayan on Tuesday (Oct 17) visited the famed Sabarimala temple to review arrangements for the 3 month ‘Mandalam-Makaravilakku’ pilgrimage season of Lord Ayyappa.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ