• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Video: ಈ ವಿಡಿಯೋದಿಂದ ಜಗತ್ತಿನಾದ್ಯಂತ ಭಾರತದ ರೈತರದ್ದೇ ಸುದ್ದಿ!

|

ನವದೆಹಲಿ, ಫೆಬ್ರವರಿ.09: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟದ ಬಗ್ಗೆ ಹಾಲಿವುಡ್, ಬಾಲಿವುಡ್ ಮತ್ತು ಕ್ರಿಕೆಟ್ ಸ್ಟಾರ್ಸ್ ಟ್ವೀಟ್ ಮಾಡುತ್ತಿದ್ದಂತೆ ಈ ವಿಷಯವು ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಪ್ರತಿವರ್ಷ ಜಗತ್ತಿನ ಪ್ರಮುಖ ಜಾಹೀರಾತುಗಳು ಪ್ರಸಾರವಾಗುವ ಅಮೆರಿಕಾದ ನ್ಯಾಷನಲ್ ಫುಟ್ ಬಾಲ್ ಲೀಗ್ ಆಗಿರುವ ಸೂಪರ್ ಬೌಲ್ ವೇದಿಕೆಯಲ್ಲಿ ಭಾರತೀಯ ರೈತರ ಪ್ರತಿಭಟನೆಯ ವಿಡಿಯೋ ತುಣುಕು ಪ್ರಸಾರವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟದ ಕೂಗನ್ನು ಇಡೀ ಜಗತ್ತು ಅಚ್ಚರಿಯ ಕಣ್ಣುಗಳಿಂದ ವೀಕ್ಷಿಸಿದೆ.

ಹಸಿವಿನ ಮೇಲೆ ವ್ಯಾಪಾರ ಮಾಡಲು ಬಿಡುವುದಿಲ್ಲ: ಮೋದಿಗೆ ಟಿಕಾಯತ್ ತಿರುಗೇಟು

ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಸಾರಿ ಹೇಳುವ 31 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.

ರೈತರ ಹೋರಾಟದ ಬಗ್ಗೆ 40 ಸೆಕೆಂಡ್ ಗಳ ವಿಡಿಯೋ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ 40 ಸೆಕೆಂಡ್ ಗಳ ವಿಡಿಯೋದಲ್ಲಿ ತೋರಿಸಲಾಗಿದೆ. "ಎಲ್ಲಿಯಾದರೂ ಅನ್ಯಾಯವಾಗುತ್ತಿದ್ದರೆ, ಎಲ್ಲೆಡೆ ಅದರಿಂದ ನ್ಯಾಯಕ್ಕೆ ಅಪಾಯವಿರುತ್ತದೆ" ಎಂಬ ಮಾರ್ಟಿನ್ ಲೂಥರ್ ಕಿಂಗ್ ವಾಕ್ಯವನ್ನು ಆರಂಭದಲ್ಲೇ ಉಲ್ಲೇಖಿಸಲಾಗಿದೆ. ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಹೋರಾಟ, ಜಗತ್ತಿನಾದ್ಯಂತ 250 ಮಿಲಿಯನ್ ಜನರ ಪ್ರತಿಭಟನೆ, 2 ಲಕ್ಷ ಟ್ರ್ಯಾಕ್ಟರ್ ಗಳಿಂದ ಜಾಥಾ, 160 ಮಂದಿ ಸಾವು, 6 ತಿಂಗಳ ಸುದೀರ್ಘ ಹೋರಾಟ, 7 ಮಾನವ ಹಕ್ಕುಗಳ ಉಲ್ಲಂಘನೆ, ಇಂಟರ್ ನೆಟ್ ಸಂಪರ್ಕ ಕಡಿತ, ನಾವೆಲ್ಲ ರೈತರು, ರೈತರು ಇಲ್ಲದೇ ಆಹಾರವಿಲ್ಲ, ರೈತರಿಲ್ಲದೇ ಭವಿಷ್ಯವಿಲ್ಲ" ಎಂಬ ಘೋಷವಾಕ್ಯಗಳನ್ನು ವಿಡಿಯೋದಲ್ಲಿ ಬರೆಯಲಾಗಿದೆ.

ಸೂಪರ್ ಬೌಲ್ ಎಂದ ಜಾಗತಿಕ ಜಾಹೀರಾತು ವೇದಿಕೆ

ಸೂಪರ್ ಬೌಲ್ ಎಂದ ಜಾಗತಿಕ ಜಾಹೀರಾತು ವೇದಿಕೆ

ಅಮೆರಿಕಾದ ಕ್ಯಾಲಿಫೋರ್ನಿಯಾ ನಗರಲ್ಲಿ ಪ್ರತಿವರ್ಷ ಸೂಪರ್ ಬೌಲ್ ಎಂಬ ನ್ಯಾಷನಲ್ ಫುಟ್ ಬಾಲ್ ಲೀಗ್ ನ್ನು ನಡೆಸಲಾಗುತ್ತದೆ. ಈ ಫುಟ್ ಬಾಲ್ ಪಂದ್ಯವನ್ನು ವೀಕ್ಷಿಸುವುದಕ್ಕೆ ಜಗತ್ತಿನ ಮೂಲ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಈ ವೇಳೆ ದೊಡ್ಡ ದೊಡ್ಡ ಜಾಗತಿಕ ಕಂಪನಿಗಳು ತಮ್ಮ ಬ್ರಾಂಡ್ ಗಳನ್ನು ಪರಿಚಯಿಸುವುದಕ್ಕೆ ಜಾಹೀರಾತು ನೀಡುತ್ತವೆ. ಸೂಪರ್ ಬೌಲ್ ಲೀಗ್ ಪಂದ್ಯಾವಳಿಗಳು ಜಾಗತಿಕ ಮಟ್ಟದಲ್ಲಿ ಜಾಹೀರಾತು ವೇದಿಕೆಯಂತೆ ಗುರುತಿಸಿಕೊಂಡಿದೆ.

ಎಲ್ಲಿ ರೈತರ ಹೋರಾಟದ ವಿಡಿಯೋ ಪ್ರಸಾರವಾಗಿದ್ದು?

ಎಲ್ಲಿ ರೈತರ ಹೋರಾಟದ ವಿಡಿಯೋ ಪ್ರಸಾರವಾಗಿದ್ದು?

ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ನ್ಯಾಷನಲ್ ಫುಟ್ ಬಾಲ್ ಲೀಗ್ ನಲ್ಲಿ ಟ್ಯಾಂಪಾ ಬೇ ಬುಕಾನಿಯರ್ಸ್ ಮತ್ತು ಕಾನ್ಸಾಸ್ ಸಿಟಿ ಚೀಫ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಪಂದ್ಯ ವೀಕ್ಷಣೆಗೆ ನೆರದಿದ್ದ ಲಕ್ಷಾಂತರ ಕ್ರೀಡಾಭಿಮಾನಿಗಳ ಕಣ್ಣು ಒಂದು ಕ್ಷಣ ಜಾಹೀರಾತು ಬೋರ್ಡ್ ಮೇಲೆ ನೆಟ್ಟಿತ್ತು. ಜಾಗತಿಕ ಕಂಪನಿಗಳ ಬ್ರಾಂಡ್ ಗಳ ಬಗ್ಗೆ ಜಾಹೀರಾತು ಪ್ರಸಾರವಾಗುವ ಬದಲಿಗೆ ಭಾರತದಲ್ಲಿ ರೈತರು ನಡೆಯುತ್ತಿರುವ ಹೋರಾಟದ ಬಗೆಗಿನ ವಿಡಿಯೋ ಎಲ್ಲರ ಲಕ್ಷ್ಯವನ್ನು ಸೆಳೆಯಿತು.

ರೈತರ ಹೋರಾಟದ ವಿಡಿಯೋ ಸಖತ್ ವೈರಲ್

ರೈತರ ಹೋರಾಟದ ವಿಡಿಯೋ ಸಖತ್ ವೈರಲ್

ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ 77 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟದ ಕುರಿತು ರಚಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ವೈರಲ್ ಆಗುತ್ತಿದೆ. ರೈತರ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

English summary
Super Bowl Features 30-Second Ad on Farmers’ Stir, Calls it Largest Protest in History. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X