Fact Check: ಭೂಪೇಶ್ ಬಘೇಲ್ ಗೆಲ್ಲಿಸುವಂತೆ ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಮನವಿ?
ಕಾಂಗ್ರೆಸ್ ಮುಖಂಡ ಭೂಪೇಶ್ ಬಘೆಲ್ ಅವರನ್ನು ಗೆಲ್ಲಿಸುವಂತೆ ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಮನವಿ ಮಾಡಿದ್ದಾರೆನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ವಿರೋಧ ಪಕ್ಷದವರನ್ನು ಗೆಲ್ಲಿಸದೇ ಇರಲು ಮನವಿ ಮಾಡುವುದಿದೆ. ಆದರೆ ಇಲ್ಲಿ ಬಿಜೆಪಿ ಪಕ್ಷದ ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಅವರು ಕಾಂಗ್ರೆಸ್ ಮುಖಂಡ ಭೂಪೇಶ್ ಬಘೆಲ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆನ್ನುವ ವಿಡಿಯೋ ವೈರಲ್ ಆಗಿದೆ.
ಲೋಕಸಭೆ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಬಲ ಪಕ್ಷಗಳ ಆರೋಪ ಪ್ರತ್ಯಾರೋಪದ ನಡುವೆ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಿಎಂ ಸಾಯಿ ಅವರು ಮಾಜಿ ಸಿಎಂ ಭೂಪೇಶ್ ಬಘೆಲ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಡಿಯೋದಲ್ಲಿ ಏನಿದೆ?
ಏಪ್ರಿಲ್ 19 ರಂದು ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜ್ಯದ ಸಿಎಂ ವಿಷ್ಣು ದೇವ್ ಸಾಯಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರಾಜ್‌ನಂದಗಾಂವ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೂಪೇಶ್ ಬಾಘೇಲ್ ಅವರು ಸ್ಪರ್ಧಿಸುತ್ತಿದ್ದಾರೆ. ಅವರನ್ನು ಗೆಲ್ಲಿಸುವಂತೆ ಸಿಎಂ ವಿಷ್ಣು ದೇವ್ ಸಾಯಿ ಮನವಿ ಮಾಡಿದ್ದಾರೆ ಎಂದು ವೀಡಿಯೋದ ಶೀರ್ಷಿಕೆ ಹೇಳುತ್ತದೆ. ಹಾಗಾದರೆ ವೈರಲ್ ವಿಡಿಯೋದ ಹಿಂದಿರುವ ಸತ್ಯವೇನು ಎಂದು ತಿಳಿಯೋಣ.
ರಾಜ್‌ನಂದಗಾಂವ್‌ನಿಂದ ಸ್ಪರ್ಧಿಸುತ್ತಿರುವ ಭೂಪೇಶ್ ಬಾಘೇಲ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ವಿಡಿಯೋ ವೈರಲ್ ಆಗಿದ್ದು ಭಾರೀ ಆಶ್ಚರ್ಯ ಮೂಡಿಸಿದೆ. ಇಬ್ಬರು ಒಂದೇ ಪಕ್ಷದವರಲ್ಲ. ಆದರೂ ಬೇರೆ ಪಕ್ಷ ಅದರಲ್ಲೂ ಪ್ರಬಲ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಲು ಹೇಗೆ ಸಾಧ್ಯ ಎಂದು ಜನ ಆಶ್ಚರ್ಯಗೊಂಡಿದ್ದಾರೆ. ಆದರೆ ಈ ವಿಡಿಯೋ ಹಿಂದಿರುವ ಸತ್ಯವೇ ಬೇರೆ.
ವಿಡಿಯೋ ಯಾರು ಹಂಚಿಕೊಂಡರು?
tukaram_iyc ಹೆಸರಿನ Instagram ಬಳಕೆದಾರರು ಈ ವೀಡಿಯೊವನ್ನು ಶೀರ್ಷಿಕೆಯನ್ನು ಹೀಗೆ ಬರೆದಿದ್ದಾರೆ- "ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಜಿ ಅವರು ರಾಜನಂದಗಾಂವ್ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಭೂಪೇಶ್ ಬಾಘೇಲ್ ಜಿ ಪರ ಮುಕ್ತ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ!"
ಆದಾಗ್ಯೂ ಈ ವೀಡಿಯೊವನ್ನು ತನಿಖೆ ಮಾಡಿದಾಗ, ವಿಷಯ ಸಂಪೂರ್ಣವಾಗಿ ತಪ್ಪುದಾರಿಗೆಳೆಯುವಂತಿದೆ. Vishvas News ನ ವರದಿ ಪ್ರಕಾರ, ವೈರಲ್ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ವಿಡಿಯೋದ ಬಗ್ಗೆ ಬಿಜೆಪಿ ಛತ್ತೀಸ್‌ಗಢ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ವರದಿಯ ಪ್ರಕಾರ, ವೈರಲ್ ವೀಡಿಯೊ ಕ್ಲಿಪ್ ಏಪ್ರಿಲ್ 3 ರಂದು ಮಹಾಸಮುಂಡ್‌ನಲ್ಲಿ ನಡೆದ ರ್‍ಯಾಲಿಯಾಗಿದ್ದು, ಅಲ್ಲಿ ವಿಷ್ಣು ದೇವ್ ಸಾಯಿ ಭಾಷಣ ಮಾಡಿದರು, ಅದನ್ನು ಕ್ರಾಪ್ ಮಾಡಿ ವೈರಲ್ ಮಾಡಲಾಗಿದೆ.
ವೈರಲ್ ಆಗಿರುವ ವಿಡಿಯೋ ನಕಲಿ
ಸಿಎಂ ವಿಷ್ಣು ದೇವ್ ಸಾಯಿ ಅವರ ಭಾಷಣದ ವೀಡಿಯೊವನ್ನು 'News24 MP & Chhattisgarh' ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಅಪ್‌ಲೋಡ್ ಮಾಡಲಾಗಿದೆ. ಮೂರು ನಿಮಿಷ 11 ಸೆಕೆಂಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೂಪೇಶ್ ಬಘೇಲ್ ಗೆಲುವಿಗೆ ಸಿಎಂ ಸೈ ಎನ್ನುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕೇಳಿಬರುತ್ತದೆ. ಹೀಗಾಗಿ ವೈರಲ್ ವಿಡಿಯೋವನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.

Fact Check
ಕ್ಲೇಮು
ಭೂಪೇಶ್ ಬಘೇಲ್ ಅವರನ್ನು ಗೆಲ್ಲಿಸುವಂತೆ ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಮನವಿ ಮಾಡಿದ್ದಾರೆ.
ಪರಿಸಮಾಪ್ತಿ
ಭೂಪೇಶ್ ಬಘೇಲ್ ಅವರನ್ನು ಗೆಲ್ಲಿಸುವಂತೆ ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಮನವಿ ಮಾಡಿದ್ದಾರೆನ್ನುವ ವಿಡಿಯೋವನ್ನು ಎಡಿಟ್ ಮಾಡಲಾಗಿದೆ.
Rating
-
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications