ಆಟೋದಲ್ಲಿ ಧೂಮಪಾನ: ಪ್ರಯಾಣಿಕನೊಂದಿಗೆ ಬೆಂಗಳೂರಿನ ಬೈಕ್ ಸವಾರ ವಾಗ್ವಾದ- ವಿಡಿಯೋ ವೈರಲ್
ಬೆಂಗಳೂರು ಏಪ್ರಿಲ್ 10: ಬೆಂಗಳೂರಿನಲ್ಲಿ ಸಿಗರೇಟಿನ ವಿಚಾರವಾಗಿ ಬೈಕ್ ಸವಾರ ಹಾಗೂ ಆಟೋ ರಿಕ್ಷಾ ಪ್ರಯಾಣಿಕನ ನಡುವೆ ಮಾತಿನ ಚಕಮಕಿ ನಡೆದಿದೆ. ಜೆ.ಪಿ.ನಗರ 5ನೇ ಹಂತದಲ್ಲಿ ಆಟೋವೊಂದು ದ್ವಿಚಕ್ರ ವಾಹನದಿಂದ ಹಾದು ಹೋಗುತ್ತಿದ್ದಾಗ ಆಟೋದಲ್ಲಿ ಕುಳಿತ ಪ್ರಯಾಣಿಕನ ಕೈಯಲ್ಲಿದ್ದ ಸಿಗರೇಟ್ ಬೈಕ್ ಸವಾರನ ಕಾಲಿಗೆ ತಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಾಹನಗಳಲ್ಲಿ ಧೂಮಪಾನ ಮಾಡುವುದನ್ನು ಕಾನೂನಿನ ಪ್ರಕಾರ ನಿಷೇಧಿಸಲಾಗಿದೆ. ಆದರೆ ಇಲ್ಲೊಬ್ಬ ಆಟೋ ಪ್ರಯಾಣಿಕ ತನ್ನ ಕೈಯಲ್ಲಿ ಸಿಗರೇಟ್ ಹಿಡಿದು ಆ ಕೈಯನ್ನು ಆಟೋದಿಂದ ಹೊರಗಡೆ ಇಟ್ಟಿದ್ದಾನೆ. ಅದು ತಾಗಲೆಂದೇ ಆಟೋ ಚಾಲಕ ಬೈಕ್ ಸವಾರನ ಪಕ್ಕದಿಂದ ಹಾದು ಹೋಗಿದ್ದಾನೆ ಎನ್ನುವುದು ಬೈಕ್ ಸವಾರ ಶೇಖ್ ಮೊಯಿನ್ ಅವರ ಆರೋಪವಾಗಿದೆ.

ಪ್ರಯಾಣಿಕನನ್ನು ಪ್ರಶ್ನಿಸಲು ಬೈಕ್ ಸವಾರ ಶೇಖ್ ಮೊಯಿನ್ ಆಟೋ ನಿಲ್ಲಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಘಟನೆಯ ವಿಡಿಯೋವನ್ನು ಶೇಖ್ ಮೊಯಿನ್ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
''ಆಟೋದಲ್ಲಿದ್ದ ಈ ಪ್ರಯಾಣಿಕನು ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಾ ಸಿಗರೇಟ್ ಹಿಡಿದ ಕೈ ಅನ್ನು ಆಟೋದಿಂದ ಹೊರಗೆ ಇಟ್ಟು ಬೈಕ್ ಸವಾರನ ಕಾಲಿಗೆ ತಗುಲಿಸಿದ್ದಾನೆ. ಇದನ್ನು ತಿಳಿದೂ ಆಟೋ ಚಾಲಕ ಬೈಕ್ ಸವಾರನ ಪಕ್ಕದಲ್ಲಿ ಹಾದು ಹೋಗಿದ್ದಾನೆ. ಇದನ್ನು ಪ್ರಶ್ನಿಸಿದಾಗ ನನ್ನನ್ನು ಫುಟ್‌ಪಾತ್‌ಗೆ ತಳ್ಳಲಾಯಿತು,'' ಎಂದು ಮೋಯಿನ್ ಎಕ್ಸ್‌ನಲ್ಲಿ ಬರೆದು ಪ್ರಯಾಣಿಕರೊಂದಿಗೆ ತನ್ನ ವಾಗ್ವಾದದ ಎರಡು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಟೋ ಪ್ರಯಾಣಿಕ ತನ್ನ ಬಾಡಿಗೆ ವಾಹನದ ಮಿತಿಯಲ್ಲಿ ಧೂಮಪಾನ ಮಾಡುವ ಹಕ್ಕು ನನಗಿದೆ ಎಂದು ವಾದಿಸಿದ್ದಾನೆ. ವಿಡಿಯೋದಲ್ಲಿ ಬೈಕ್ ಸವಾರ, ಆಟೋ ಚಾಲಕ ತಮ್ಮ ಬೈಕ್ಗೆ ಡಿಕ್ಕಿ ಹೊಡೆಯಲು ಮುಂದಾಗಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಪ್ರಯಾಣಿಕರಿಗೆ ವಾಹನದಲ್ಲಿ ಧೂಮಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಛೀಮಾರಿ ಹಾಕಿದ್ದಾರೆ.
ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
5:59pm 7th Apr - Jp nagar 5th phase
— Sheikh moin (@sheikhenfield) April 7, 2024
This passenger in auto was chilling out smoking in public while his hand was out of the auto which touch my leg while the auto driver passed by me.
When questioned I was pushed aside almost crashed me to footpath. @BlrCityPolice pic.twitter.com/aXm0iHdSQa
ವಿಡಿಯೋಕ್ಕೆ ಪೊಲೀಸರ ಪ್ರತಿಕ್ರಿಯೆ:
ಈ ವಿಡಿಯೋಕ್ಕೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ಪೊಲೀಸರು ಮೊಯಿನ್ ಅವರ ಮೊಬೈಲ್ ಸಂಖ್ಯೆಯನ್ನು ಕೇಳಿದ್ದಾರೆ. ನಂತರ ಅವರು ಈ ವಿಷಯವನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ವಿಡಿಯೋಕ್ಕೆ ವಿಭಿನ್ನ ಕಾಮೆಂಟ್:
Noted, we have informed to concerned Police officers.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) April 8, 2024
ವಿಡಿಯೊ ಇಂಟರ್ನೆಟ್ ಅಲ್ಲಿ ಭಾರೀ ವೈರಲ್ ಆಗಿದೆ. ಜನರು ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬೈಕ್ ಸವಾರರು ಕ್ಷುಲ್ಲಕವಾಗಿ ಕಾಣುವ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಬ್ಬ ಬಳಕೆದಾರ ಹೀಗೆ ಬರೆದಿದ್ದಾನೆ, ''ಬೈಕರ್ ತನ್ನ ವ್ಯವಹಾರವನ್ನು ನೋಡಿಕೊಳ್ಳಬೇಕು ... ಅವನು ಏಕೆ ಪ್ರಯಾಣಿಕರೊಂದಿಗೆ ಜಗಳವಾಡುತ್ತಿದ್ದಾನೆ .ಅವನು ತಪ್ಪು ಮಾಡಿದರೆ ದಂಡ ಪಾವತಿಸಲಿ. ಇವರಿಗೇನು ಸಮಸ್ಯೆ'' ಎಂದು ಬರೆದಿದ್ದಾರೆ.
ಮತ್ತೊಬ್ಬರು, ''ಇದೊಂದು ಪ್ರಚಾರದ ಸ್ಟಂಟ್, ಅವರು ಹೆಲ್ಮೆಟ್ ಕ್ಯಾಮೆರಾವನ್ನು ಹೊಂದಿದ್ದಾರೆ ಎಂದು ತೋರಿಸುತ್ತಿದ್ದಾರೆ. ಬೈಕ್ ಸವಾರನೊಂದಿಗೆ ವಾಗ್ವಾದವನ್ನು ಮಾಡಲು ಯಾರೂ ಸಿಕ್ಕಿಲ್ಲ. ಆದ್ದರಿಂದ ಅವರು ಒಬ್ಬ ಬಡ ರಿಕ್ಷಾ ಚಾಲಕ ಮತ್ತು ಒಬ್ಬನೇ ಪ್ರಯಾಣಿಕನನ್ನು ಸಿಗರೇಟ್ ಕಾರಣ ಹಿಡಿದು ಜಗಳವಾಡಿದ್ದಾನೆ'' ಎಂದು ಬರೆದಿದ್ದಾರೆ.
ಮೂರನೆಯವರು '' ಕ್ಷಮೆ ಮತ್ತು ಧನ್ಯವಾದಗಳು ಹೇಳುವ ಮೂಲಕ ಈ ಪರಿಸ್ಥಿತಿಯನ್ನು ಪರಿಹರಿಸಬಹುದು. ಎಲ್ಲಿ ನೋಡಿದರೂ ಅದೊಂದು ಅಹಂಕಾರದ ಘರ್ಷಣೆ ಕಂಡು ಬರುತ್ತದೆ'' ಎಂದಿದ್ದಾರೆ.
-
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
Nepal: ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗದ ನೇಪಾಳದ ಹೊಸ ಜೆನ್ ಜೀ ಸರ್ಕಾರ: ಗೋಪಾಲಕೃಷ್ಣ ಕುಂಟಿನಿ ಬರಹ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Kiara Advani: ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಕ್ರಶ್: ರಾಣಾ ಶೋನಲ್ಲಿ ಬಹಿರಂಗವಾದ ಹಳೆಯ ರಹಸ್ಯ, ವೈರಲ್ -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
Amruthadhare Serial: ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲ್ಲಿ ಮದುವೆ ಬಳಿಕ ಹೊಸ ತಿರುವು, ಜೆಡಿ ಪ್ಲ್ಯಾನ್ಗೆ ಸುನೀಲ್ ವಿಲನ್ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ











Click it and Unblock the Notifications