Umbrella-Cap Fan: ಉರಿ ಬಿಸಿಲಿಗೆ ತಂಪೆರೆದ ಕ್ಯಾಪಣ್ಣ ಹಾಗೂ ಛತ್ರಿರಾಯ- ವಿಡಿಯೋ ವೈರಲ್

ಮಳೆ ಬೇಕು... ಮಳೆ ಬರಲಿ... ಅಂತ ಕರುನಾಡಿನ ಜನ ಆಕಾಶ ನೋಡುತ್ತಿದ್ದಾರೆ. ಆದರೆ ಸೂರ್ಯದೇವ ಮಾತ್ರ ಜನರನ್ನು ಆಕಾಶದತ್ತ ಮುಖ ಮಾಡಲು ಬಿಡುತ್ತಿಲ್ಲ. ಕಣ್ಣು ಕುಕ್ಕುತ್ತಾ, ನೆತ್ತಿ ಸುಡುತ್ತಾ ಜನರನ್ನು ಹೈರಾಣಾಗಿಸಿಬಿಟ್ಟಿದ್ದಾನೆ. ಬಿಸಿಲಿನ ಝಳಕ್ಕೆ ಜನ ಮನೆ ಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಅದಾಗ್ಯೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನ ಹೊಸ ಹೊಸ ಯೋಜನೆಗಳನ್ನು ಮಾಡುತ್ತಿದ್ದಾರೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಹೌದು... ಸಾಮಾನ್ಯವಾಗಿ ಮಳೆ ಬಂದರೆ ಬಿಸಿಲು ಹೆಚ್ಚಾದರೆ ಜನ ಛತ್ರಿಯನ್ನು ಹಿಡಿದುಕೊಳ್ಳುತ್ತಾರೆ. ಕೆಲವರು ಕ್ಯಾಪ್ ಹಾಕಿಕೊಂಡು ಸ್ಕಾರ್ಫ್ ಕಟ್ಟಿಕೊಳ್ಳುತ್ತಾರೆ. ಆದರೀಗ ಛತ್ರಿಯಿಂದ ಮಾತ್ರ ಬಿಸಿಲಿನ ಝಳದಿಂದ ರಕ್ಷಣೆ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಛತ್ರಿರಾಯ ಜನರ ಪಾಲಿಗೆ ಮಿನಿ ಮಳೆರಾಯನಾಗಿದೆ. ಆಶ್ಚರ್ಯಗೊಂಡ್ರಾ? ಹೌದು.. ಛತ್ರಿ ಹಾಗೂ ಕ್ಯಾಪ್‌ಗಳೇ ಜನರ ಪಾಲಿಗೆ ಮಳೆ ತರಿಸುವ ಹಾಗೂ ತಂಪೆರೆಯುವ ಮಿನಿ ಎಸಿಗಳಾಗಿ ಮಾರ್ಪಟ್ಟಿವೆ.

Wind blowing umbrella cap with fan video viral

ಫ್ಯಾನ್ ಇರುವ ಕ್ಯಾಪ್

ಬಿಸಿಲು ಹೆಚ್ಚಾದಂತೆ ಕ್ಯಾಪ್‌ಗಳಲ್ಲಿ ವಿಭಿನ್ನ ಶೈಲಿಯ ಹಾಗೂ ಸಾಕಷ್ಟು ಸೌಲಭ್ಯವಿರುವ ಕ್ಯಾಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವುಗಳನ್ನು ಕೊಂಡು ಜನ ಬೇಸಿಗೆ ಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ನೂತನ ಕ್ಯಾಪ್‌ನಲ್ಲಿ ಫ್ಯಾನ್‌ಗಳಿರುವ ಕ್ಯಾಪ್‌ಗಳು ಇತ್ತೀಚೆಗೆ ಲಭ್ಯವಿದೆ. ಅವುಗಳನ್ನು ಹಾಕಿಕೊಂಡರೆ ಮುಖಕ್ಕೆ ಗಾಳಿ ಬಡೆಯುತ್ತದೆ. ಇದರಿಂದ ಅರಾಮದಾಯಕವಾಗಿ ಜನ ಬಿಸಿಲಿನಲ್ಲಿ ಸುತ್ತಾಡಬಹುದಾಗಿದೆ.

ಕ್ಯಾಪ್‌ನ ಮುಂಭಾಗದಲ್ಲಿ ಪುಟ್ಟದೊಂದು ಫ್ಯಾನ್ ಅಳವಡಿಸಲಾಗಿದೆ. ಇದು ಹೊರಬರುತ್ತಿದ್ದಂತೆ ತಂತಾನೆ ತಿರುಗಲು ಆರಂಭಿಸುತ್ತದೆ. ಇದರಿಂದ ಮುಖಕ್ಕೆ ಬಿಸಿಲ ಬಿಸಿ ಹೆಚ್ಚಾಗಿ ತಾಗುವುದಿಲ್ಲ. ಗಾಳಿ ಮುಖಕ್ಕೆ ತಾಗುವುದರಿಂದ ಬೆವರು ಕೂಡ ಹೆಚ್ಚಾಗಿ ಬರುವುದಿಲ್ಲ. ಹೀಗಾಗಿ ಇದನ್ನು ಹಾಕಿಕೊಂಡು ಅರಾಮದಾಯಕವಾಗಿ ಜನ ಸುತ್ತಾಡಬಹುದು.

ತಣ್ಣನೆಯ ಗಾಳಿ ಬೀಸುವ ಛತ್ರಿ

ಇನ್ನೂ ಛತ್ರಿ ವಿಚಾರಕ್ಕೆ ಬರೋಣ. ಸಾಮಾನ್ಯವಾಗಿ ನೀವೆಲ್ಲಾ ಛತ್ರಿಯನ್ನು ಹೊಂದಿರುತ್ತೀರಿ. ಅದನ್ನು ಮಳೆ ಬಂದಾಗ ಹಾಗೂ ಬಿಸಿಲಿಗೂ ಬಳಕೆ ಮಾಡಿರುತ್ತೀರಿ. ಆದರೆ ತಣ್ಣನೆಯ ಗಾಳಿ ಬೀಸುವ ಛತ್ರಿಯನ್ನು ನೋಡಿದ್ದೀರಾ? ನೋಡಿರಲು ಸಾಧ್ಯವೇ ಇಲ್ಲ ಬಿಡಿ. ಯಾಕೆಂದರೆ ಈ ಛತ್ರಿ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಿಸಿಲಿನ ಶಾಖ ತಪ್ಪಿಸಲು ಹಾಗೂ ತಣ್ಣನೆಯ ಗಾಳಿಯೊಂದಿಗೆ ಸಾಗಲು ಇದೊಂದು ಉತ್ತಮ ಆಯ್ಕೆಯಾಗಿದೆ.

Wind blowing umbrella cap with fan video viral

ನೂತನ ಛತ್ರಿಯ ಹಿಡಿಕೆಯಲ್ಲಿ ನೀರು ತುಂಬಿಸಿ, ಅದನ್ನು ಮೊಬೈಲ್‌ನಂತೆ ಚಾರ್ಜ್‌ ಮಾಡಬೇಕು. ಹೀಗೆ ಮಾಡಿದರೆ ನೀವು ಸುಲಭವಾಗಿ ಈ ಛತ್ರಯನ್ನು ಬಿಸಿಲಿಗೆ ತೆಗೆದುಕೊಂಡು ಹೋಗಬಹುದು. ಇದರಲ್ಲಿರು ಬಟನ್ ಪ್ರೆಸ್ ಮಾಡಿದರೆ ಏರ್‌ ಕೂಲರ್‌ನಂತೆ ತಣ್ಣನೆಯ ಗಾಳಿ ಬರುತ್ತದೆ. ಇದರಿಂದ ಬಿಸಿಲ ಬಿಸಿ ತಾಗುವುದಿಲ್ಲ. ತಣ್ಣನೆಯ ಗಾಳಿಯೊಂದಿಗೆ ಎಲ್ಲಂದರಲ್ಲಿ ನೀವು ಬಿಸಿನಲ್ಲೇ ಸುತ್ತಾಡಬಹುದು.

ಫ್ಯಾನ್ ಇರುವ ಏರ್‌ಫೋನ್

ಮತ್ತೊಂದು ವಿಚಾರ ಅಂದರೆ ನೀವು ಅಡುಗೆ ಮಾಡುತ್ತಿದ್ದಾರೆ, ಅಂಥಹ ಸಂದರ್ಭದಲ್ಲಿ ಫ್ಯಾನ್ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಫ್ಯಾನ್ ಉರಿಯುವ ಗ್ಯಾಸ್‌ಗೆ ತೊಂದರೆಯಾಗುತ್ತದೆ. ಆಗಲೂ ಈ ಕ್ಯಾಪ್ ಅನ್ನು ಬಳಸಬಹುದು. ಮಾತ್ರವಲ್ಲದೆ ಮಾರುಕಟ್ಟೆಯಲ್ಲಿರುವ ಏರ್‌ಫೋನ್‌ನಂತಹ ಫ್ಯಾನ್‌ ಕೂಡ ಬಳಕೆ ಮಾಡಬಹುದು.

ಇಂತಹ ನೂತನ ಕ್ಯಾಪ್ ಹಾಗೂ ಛತ್ರಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಜನ ಸಾಕಷ್ಟು ಖುಷಿ ಪಟ್ಟಿದ್ದಾರೆ. ತಾವು ಕೂಡ ಇವುಗಳನ್ನು ಖರೀದಿಯ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+