Get Updates
Get notified of breaking news, exclusive insights, and must-see stories!

ಜುಲೈ 31ರ ಒಳಗೆ CBSE 12ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ, ಜುಲೈ 26: ಸಿಬಿಎಸ್‌ಇ 10 ಹಾಗೂ 12ನೇ ತರಗತಿ ಫಲಿತಾಂಶ ಜುಲೈ 31ರ ಒಳಗೆ ಪ್ರಕಟವಾಗಲಿದೆ. ಇದುವರೆಗೂ ಅಧಿಕೃತ ದಿನಾಂಕ ನಿಗದಿಯಾಗಿಲ್ಲ, ಜುಲೈ 31ರೊಳಗೆ ಬರಬಹುದು ಎನ್ನಲಾಗುತ್ತಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಶಾಲೆಗಳ 12 ನೇ ತರಗತಿಯ ಫಲಿತಾಂಶವನ್ನು ಅಂತಿಮಗೊಳಿಸುವ ಗಡುವನ್ನು ಜುಲೈ 25 ರವರೆಗೆ ವಿಸ್ತರಿಸಿತ್ತು.

ಒತ್ತಡಕ್ಕೆ ಒಳಗಾಗುತ್ತಿರುವ ಶಿಕ್ಷಕರು: ಫಲಿತಾಂಶದ ಕೆಲಸದಲ್ಲಿ ತೊಡಗಿರುವ ಶಿಕ್ಷಕರು ಒತ್ತಡದಲ್ಲಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ.

CBSE 2021 Results For Class 12 Likely By July 31

ಫಲಿತಾಂಶಗಳನ್ನು ಅಂತಿಮಗೊಳಿಸುವ ದಿನಾಂಕ ಸಮೀಪಿಸುತ್ತಿರುವುದರಿಂದ, ಶಿಕ್ಷಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಕಾರಣಗಳಿಂದ ತಪ್ಪುಗಳಾಗುತ್ತಿವೆ. ಈ ತಪ್ಪುಗಳನ್ನು ಸರಿಪಡಿಸುವ ಸಲುವಾಗಿ ಸಿಬಿಎಸ್‌ಇಗೆ ಮನವಿ ಕಳುಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಲೆಗಳು ಮತ್ತು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಿಬಿಎಸ್‌ಇ ಅರ್ಥ ಮಾಡಿಕೊಳ್ಳುತ್ತಿದೆ ಎಂದವರು ಹೇಳಿದ್ದಾರೆ. .

ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಸಿಬಿಎಸ್‌ಇ ಕೊನೆಯ ದಿನಾಂಕವನ್ನು ಜುಲೈ 22 ರಿಂದ ಜುಲೈ 25 ರವರೆಗೆ ವಿಸ್ತರಿಸಲು ನಿರ್ಧರಿಸಿತ್ತು. ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಪರೀಕ್ಷೆಗಳನ್ನು ರದ್ದು ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ alternative evaluation policy ಆಧಾರದ ಮೇಲೆ ಫಲಿತಾಂಶವನ್ನು ನೀಡುವಂತೆ ಸೂಚಿಸಲಾಗಿತ್ತು.

ಇದೀಗ ಫಲಿತಾಂಶ ಅಂತಿಮಗೊಳಿಸುವ ಗಡುವನ್ನು ವಿಸ್ತರಿಸಿರುವ ಕಾರಣದಿಂದ ಫಲಿತಾಂಶ ಪ್ರಕಟಗೊಳ್ಳುವುದು ವಿಳಂಬವಾಗಲಿದೆಯೇ ಎನ್ನುವುದನ್ನು ಸಿಬಿಎಸ್‌ಇ ಸ್ಪಷ್ಟಪಡಿಸಿಲ್ಲ. ಜುಲೈ 31 ರೊಳಗೆ ಫಲಿತಾಂಶ ಘೋಷಿಸಲಾಗುವುದು ಎನ್ನಲಾಗಿದೆ.

ಸಿಬಿಎಸ್‌ಇ'ಯು ವಿದ್ಯಾರ್ಥಿಗಳ ಫಲಿತಾಂಶದೊಂದಿಗೆ, ಅಂಕಪಟ್ಟಿಯನ್ನು ಡಿಜಿಲಾಕರ್‌ನಲ್ಲಿ ಬಿಡುಗಡೆ ಮಾಡಲಿದೆ. ಇದನ್ನು ಚೆಕ್‌ ಮಾಡಲು ಸಿಬಿಎಸ್‌ಇ ರೋಲ್‌ ನಂಬರ್ ಅಗತ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಮತ್ತು ಸಿಬಿಎಸ್‌ಇ'ಯೊಂದಿಗೆ ರಿಜಿಸ್ಟರ್ ಆದ ಮೊಬೈಲ್ ನಂಬರ್ ಬಳಸಿ ಫಲಿತಾಂಶವನ್ನು ಡಿಜಿಲಾಕರ್‌ನಲ್ಲಿ ಪಡೆಯಬಹುದು.
ಅಂದಹಾಗೆ ಸಿಬಿಎಸ್ಇ‌ ಫಲಿತಾಂಶವನ್ನು ಮೂರು ಮಾದರಿಯಲ್ಲಿ ಚೆಕ್‌ ಮಾಡಬಹುದು. ಸಿಬಿಎಸ್‌ಇ ಪಠ್ಯಕ್ರಮ ಶಿಕ್ಷಣ ಸಂಸ್ಥೆಗಳು ಒಂದು ವೇಳೆ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ನೀಡಿದರೆ ಇದರ ಮೂಲಕ ರಿಸಲ್ಟ್‌ ಚೆಕ್‌ ಮಾಡಬಹುದು. ಅಥವಾ ಡಿಜಿಲಾಕರ್‌ ಮೂಲಕ ಚೆಕ್‌ ಮಾಡಬಹುದು. ಅಥವಾ ಸಿಬಿಎಸ್‌ಇ'ಯು ವಿದ್ಯಾರ್ಥಿಗಳ ರಿಜಿಸ್ಟರ್ ಮೊಬೈಲ್‌ ನಂಬರ್‌ಗೆ ನೇರವಾಗಿ ಫಲಿತಾಂಶ ಕಳುಹಿಸುವ ಅವಕಾಶವು ಇದೆ.

ಸಿಬಿಎಸ್​ಇ -10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಆನ್​​ಲೈನ್​ನಲ್ಲಿ ಬಿಡುಗಡೆ ಮಾಡುವ ಜತೆಗೆ, ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ, ವಿದ್ಯಾರ್ಥಿಗಳ ಅಂಕಪಟ್ಟಿ ಯನ್ನು ಡಿಜಿಲಾಕರ್​ನಲ್ಲೂ ಹಂಚಿಕೊಂಡಿದೆ.

ಇಲ್ಲಿ ವೀಕ್ಷಿಸಲು ವಿದ್ಯಾರ್ಥಿಗಳಿಗೆ ರೋಲ್​ನಂಬರ್​ ಅಗತ್ಯವಿರುವುದಿಲ್ಲ. ಆಧಾರ್​ ಕಾರ್ಡ್​ ನಂಬರ್​ ಮತ್ತು ಫೋನ್​ ನಂಬರ್​ ಉಪಯೋಗಿಸಿಯೇ ಫಲಿತಾಂಶ ನೋಡಬಹುದು.

ಇನ್ನು ಕಳೆದ ವರ್ಷ ಈ ಶಿಕ್ಷಣ ಮಂಡಳಿ Facial Recognition (ಮುಖ ಗುರುತು) ವ್ಯವಸ್ಥೆಯನ್ನೂ ಪರಿಚಯಿಸಿದ್ದು, ವಿದ್ಯಾರ್ಥಿಗಳು ತಮ್ಮ ಮುಖವನ್ನು ಬಳಸಿಯೂ ಪರೀಕ್ಷೆ ಫಲಿತಾಂಶ ಪಡೆಯಬಹುದು.

ಆಧಾರ್​ ಕಾರ್ಡ್​​ ಇಲ್ಲದ ವಿದ್ಯಾರ್ಥಿಗಳು ಡಿಜಿಲಾಕರ್​​ನಲ್ಲಿ ಗುರುತಿಗೆ ತಮ್ಮ ಮುಖ ತೋರಿಸಿ ಫಲಿತಾಂಶ ಪಡೆಯಬಹುದಾಗಿದೆ. ಇದರೊಂದಿಗೆ ಇನ್ನಷ್ಟು ವ್ಯವಸ್ಥೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಜಾರಿಗೊಳಿಸುವ ಸಾಧ್ಯತೆಗಳು ಹೆಚ್ಚಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+