ಪ್ರದ್ಯುಮ್ನ ಹತ್ಯೆ: ಶಾಲಾ ಬಸ್ ಕಂಡಕ್ಟರ್ ಗೆ ಜಾಮೀನು

Posted By:
Subscribe to Oneindia Kannada

ಗುರ್ಗಾಂವ್ (ಹರಿಯಾಣ), ನವೆಂಬರ್ 21: ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಗುರ್ಗಾಂವ್ ನಗರದ ರಯನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಬಸ್ ಕಂಡಕ್ಟರ್ ಗೆ ಜಾಮೀನು ಸಿಕ್ಕಿದೆ. ಅಶೋಕ್ ಗೆ ಜಾಮೀನು ಸಿಕ್ಕಿರುವುದಕ್ಕೆ ಅವರ ತಂದೆ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರದ್ಯುಮ್ನ ಹತ್ಯೆ : ಮತ್ತೆ ಕಗ್ಗಂಟಾಗಿರುವ ಪ್ರಕರಣ

ಪ್ರದ್ಯುಮ್ನ ಹತ್ಯೆಯಲ್ಲಿ ಶಾಲಾ ಬಸ್ ಕಂಡಕ್ಟರ್ ಅಶೋಕ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸಿಬಿಐ ತನಿಖೆಯಲ್ಲಿ ಕೊಲೆಯನ್ನು ಅದೇ ಶಾಲೆಯ ವಿದ್ಯಾರ್ಥಿ ಮಾಡಿದ್ದ ಎಂಬುದು ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ ಮಂಗಳವಾರ ಗುರ್ಗಾಂವ್ ಜಿಲ್ಲಾ ನ್ಯಾಯಾಲಯ ರಯನ್ ಶಾಲಾ ವಾಹನದ ನಿರ್ವಾಹಕ ಅಶೋಕ್ ಗೆ ಜಾಮೀನು ನೀಡಿದೆ.

Gurugram District Court grants bail to accused bus conductor Ashok in Pradyuman Murder Case

ಸೆಪ್ಟೆಂಬರ್ 8ರಂದು ಶಾಲೆಯ ಶೌಚಾಲಯದಲ್ಲಿ ಪ್ರದ್ಯುಮ್ನನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಬಾಲಕ ಪ್ರದ್ಯುಮ್ನನ ಶವ ಪತ್ತೆಯಾದ ಕೆಲವೇ ದಿನದಲ್ಲಿ ಪೊಲೀಸರು ಅದೇ ಶಾಲೆಯ ಬಸ್ ನಿರ್ವಾಹಕ ಆಶೋಕ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gurugram District Court on Tuesday granted bail to accused Ryan International School bus conductor Ashok in Pradyuman Murder Case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ