ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆಗಿಳಿಯಿತು ಊಬರ್ ಬಸ್; ಸೀಟು ಬುಕ್ ಮಾಡಿ ಬಸ್ ಹತ್ತಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ದೇಶದ ವಿವಿಧ ನಗರಗಳಲ್ಲಿ ಟ್ಯಾಕ್ಸಿ ಸೇವೆ ನೀಡುತ್ತಿರುವ ಊಬರ್ ಈಗ ಬಸ್ ಸೇವೆ ಆರಂಭಿಸಿದೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಗುರುಗ್ರಾಮದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ವಿದೇಶದಲ್ಲಿ ಯಶಸ್ವಿಯಾದ ಪ್ರಯೋಗವನ್ನು ಭಾರತದ ರಸ್ತೆಯಲ್ಲೂ ಜಾರಿಗೊಳಿಸಿದೆ.

ಹರ್ಯಾಣ ರಾಜ್ಯದ ಗುರುಗ್ರಾಮ ಮಹಾನಗರ ಸಾರಿಗೆ ಬಸ್ ಲಿಮಿಟೆಡ್ ಮತ್ತು ಊಬರ್ ಗುರುವಾರ ಒಪ್ಪಂದ ಮಾಡಿಕೊಂಡಿವೆ. ದೇಶದಲ್ಲೇ ಮೊದಲ ಬಾರಿಗೆ ಊಬರ್ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಜನರು ಊಬರ್‌ ಬಸ್‌ನಲ್ಲಿ ಸಂಚಾರ ನಡೆಸಲು ಟ್ಯಾಕ್ಸಿ ಬುಕ್ ಮಾಡುವಂತೆ ಬಸ್‌ಗಳ ಸೀಟುಗಳನ್ನು ಬುಕ್ ಮಾಡಬಹುದಾಗಿದೆ.

ಮೈಸೂರಿನಿಂದ ನಗರ, ಪಟ್ಟಣಕ್ಕೂ ಎಸಿ ಬಸ್ ಸೇವೆ; ಮಾರ್ಗಗಳು ಮತ್ತು ದರಮೈಸೂರಿನಿಂದ ನಗರ, ಪಟ್ಟಣಕ್ಕೂ ಎಸಿ ಬಸ್ ಸೇವೆ; ಮಾರ್ಗಗಳು ಮತ್ತು ದರ

ಪ್ರಾಯೋಗಿಕವಾಗಿ ಸಿಎನ್‌ಜಿ ಹವಾನಿಯಂತ್ರಿತ ಬಸ್‌ಗಳಲ್ಲಿ ಊಬರ್ ಸೇವೆ ಆರಂಭವಾಗಿದೆ. ಎರಡು ಪ್ರಮುಖ ಮಾರ್ಗದಲ್ಲಿ ಊಬರ್ ಬಸ್‌ ಸೇವೆ ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ ಪೀಕ್ ಅವರ್‌ನಲ್ಲಿ ಮಾತ್ರ ಈ ಬಸ್ ಸೇವೆ ಲಭ್ಯವಿದೆ. ಅಪ್ಲಿಕೇಶನ್‌ಗಳ ಮೂಲಕ ಊಬರ್ ಕ್ಯಾಬ್ ಮಾದರಿಯಲ್ಲಿ ಬಸ್‌ನಲ್ಲಿ ಸೀಟುಗಳನ್ನು ಬುಕ್ ಮಾಡಬಹುದಾಗಿದೆ.

ಊಬರ್ ಕ್ಯಾಬಿನಲ್ಲೇ ನಾ ನಿನ್ನ ಮರೆತಿರುವೆ: ಮುಂಬೈನಲ್ಲಿ ಹೀಗೂ ಒಂದು ಸಮೀಕ್ಷೆ!?ಊಬರ್ ಕ್ಯಾಬಿನಲ್ಲೇ ನಾ ನಿನ್ನ ಮರೆತಿರುವೆ: ಮುಂಬೈನಲ್ಲಿ ಹೀಗೂ ಒಂದು ಸಮೀಕ್ಷೆ!?

ಊಬರ್‌ ಬಸ್‌ನಲ್ಲಿನ ಸೀಟುಗಳನ್ನು ಜನರು ಬುಕ್ ಮಾಡಿದ ಬಳಿಕ ಬಸ್ ಎಲ್ಲಿದೆ?, ಯಾವ ಸಮಯಕ್ಕೆ ಆಗಮಿಸಲಿದೆ? ಎಂಬ ಮಾಹಿತಿ ಮೊಬೈಲ್‌ನಲ್ಲಿ ರಿಯಲ್‌ ಟೈಂನಲ್ಲಿ ಜನರಿಗೆ ಲಭ್ಯವಾಗಲಿದೆ. ಟ್ಯಾಕ್ಸಿ ಮಾದರಿಯಲ್ಲೇ ಈ ಸೇವೆ ಲಭ್ಯವಿರಲಿದೆ. ಆದರೆ, ಕಾರುಗಳ ಬದಲು ಬಸ್ ಇರಲಿದೆ.

ಬೆಂಗಳೂರು; ಓಲಾ, ಊಬರ್ ಟ್ಯಾಕ್ಸಿಗಳ ದರ ಏರಿಕೆ ಬೆಂಗಳೂರು; ಓಲಾ, ಊಬರ್ ಟ್ಯಾಕ್ಸಿಗಳ ದರ ಏರಿಕೆ

ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಪ್ರೋತ್ಸಾಹ

ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಪ್ರೋತ್ಸಾಹ

ಊಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕಾರ್ಯ ನಿರ್ವಾಹಕ ಮುಖ್ಯಸ್ಥ ನಿತೀಶ್ ಭೂಷಣ್ ಈ ಸೇವೆ ಬಗ್ಗೆ ಮಾತನಾಡಿದ್ದಾರೆ. "ಇದು ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಪ್ರೋತ್ಸಾಹ ನೀಡಲಿದೆ ಅಲ್ಲದೇ ಜನರು ಖಾಸಗಿ ವಾಹನ ಬಿಟ್ಟು ಬಸ್‌ಗಳಲ್ಲಿ ಸಂಚಾರ ನಡೆಸಲು ಸಹಕಾರ ನೀಡಲಿದೆ. ಪ್ರಾಯೋಗಿಕವಾಗಿ ನಾವು ಇದನ್ನು ಆರಂಭಿಸಿದ್ದೇವೆ. ದೇಶದ ಬೇರೆ-ಬೇರೆ ನಗರಗಳಿಗೂ ಸೇವೆ ವಿಸ್ತರಣೆ ಮಾಡುವ ನಿರೀಕ್ಷೆಯಲ್ಲಿದ್ದೇವೆ" ಎಂದು ಹೇಳಿದ್ದಾರೆ.

ಬೇರೆ ರಾಜ್ಯಗಳಲ್ಲೂ ಸೇವೆ ಆರಂಭ

ಬೇರೆ ರಾಜ್ಯಗಳಲ್ಲೂ ಸೇವೆ ಆರಂಭ

ಈ ಸೇವೆಯ ಅನ್ವಯ ಹೆಚ್ಚು ಬೇಡಿಕೆ ಇರುವ ಮಾರ್ಗದಲ್ಲಿ ಬಸ್‌ಗಳನ್ನು ಓಡಿಸಲು ಸಾಧ್ಯವಾಗುತ್ತದೆ. ಗುರುಗ್ರಾಮದಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ರಾಜ್ಯದಲ್ಲಿಯೂ ಈ ಸೇವೆ ಆರಂಭಿಸಲು ಊಬರ್ ಮಾತುಕತೆಯನ್ನು ನಡೆಸುತ್ತಿದೆ. ಈಗಾಗಲೇ ಹಲವು ನಗರಗಳಲ್ಲಿ ಊಬರ್ ಟ್ಯಾಕ್ಸಿ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ. ಊಬರ್ ಬಸ್ ಸೇವೆಗೂ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡಲಾಗಿದೆ.

ಎರಡು ಮಾರ್ಗದಲ್ಲಿ ಊಬರ್ ಬಸ್ ಸಂಚಾರ

ಎರಡು ಮಾರ್ಗದಲ್ಲಿ ಊಬರ್ ಬಸ್ ಸಂಚಾರ

ಗುರುಗ್ರಾಮದ ಒಟ್ಟು 2 ಮಾರ್ಗದಲ್ಲಿ ಪ್ರಾಯೋಗಿಕವಾಗಿ ಊಬರ್ ಬಸ್ ಸಂಚಾರ ನಡೆಸುತ್ತಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ. ಮಧ್ಯಾಹ್ನ 3 ರಿಂದ ರಾತ್ರಿ 8ರ ತನಕ ಊಬರ್ ಬಸ್ ಸಂಚಾರ ನಡೆಸಲಿದೆ. ಜನರು ಟಿಕೆಟ್ ಬುಕ್ ಮಾಡಲು ಪ್ರತಿ ಕಿ. ಮೀ.ಗೆ 7 ರೂ. ದರವನ್ನು ನಿಗದಿ ಮಾಡಲಾಗಿದೆ. ಟಿಕೆಟ್ ಬುಕ್‌ ಮಾಡಿರುವ ಜನರು ಬಸ್ ಹತ್ತಿದಾಗ ನಿರ್ವಾಹಕನಿಗೆ ಕೋಡ್ ತೋರಿಸಿದರೆ ಸಾಕು. ಬಸ್ ಪ್ರಯಾಣ ಸುರಕ್ಷಿತವೂ ಆಗಿರುವುದರಿಂದ ಜನರು ಈ ಸೇವೆಯನ್ನು ಹೆಚ್ಚಾಗಿ ಬಳಕೆ ಮಾಡುವ ನಿರೀಕ್ಷೆ ಇದೆ.

ವಿದೇಶಗಳಲ್ಲೂ ಪ್ರಯೋಗ

ವಿದೇಶಗಳಲ್ಲೂ ಪ್ರಯೋಗ

ಊಬರ್ ಇದೇ ಮಾದರಿ ಪ್ರಯೋಗವನ್ನು ಈಜಿಪ್ಟ್, ಕೈರೋದಲ್ಲಿ ಮಾಡಿ ಯಶಸ್ವಿಯಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಗುರುಗ್ರಾಮದಲ್ಲಿ ಊಬರ್ ಬಸ್ ಸೇವೆ ರಾಜ್ಯ ಸರ್ಕಾರದ ಜೊತೆ ಜಂಟಿಯಾಗಿ ಜಾರಿಗೊಳಿಸಲಾಗಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ 24*7 ಈ ಸೇವೆ ಆರಂಭಿಸಲು ಊಬರ್ ಚಿಂತನೆ ನಡೆಸಿದೆ.

ಗುರುಗ್ರಾಮ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸುಧೀರ್ ರಾಜ್‌ಪಾಲ್ ಜನರ ಸುರಕ್ಷತೆಗೆ ನಾವು ಒತ್ತು ನೀಡಲಿದ್ದೇವೆ. ಐಷಾರಾಮಿ ಬಸ್‌ಗಳಲ್ಲಿ ಜನರು ಸಂಚಾರ ನಡೆಸಲು ಈ ಸೇವೆ ಸಹಾಯಕವಾಗಿದೆ. ನಾವು ಊಬರ್ ಜೊತೆಗಿನ ಒಪ್ಪಂದ ಮಾಡಿಕೊಂಡು ಈ ಯೋಜನೆ ಜಾರಿಗೆ ತಂದಿದ್ದೇವೆ. ಜನರು ಸಹ ಈ ಯೋಜನೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

English summary
Gurugram Metropolitan City Bus Limited (GMCBL) started bus service in partnership with UBER. Now public can book seat in public transport and get bus with the help of aggregator's applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X