ಕೆಎಸ್‌ಆರ್‌ಟಿಸಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚನೆ: ಸಾರ್ವಜನಿಕರಿಗೆ ನಿಗಮದ ಎಚ್ಚರಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಕೆಲವು ಮಂದಿ ಉದ್ಯೋಗಾಕಾಂಕ್ಷಿಗಳಿಗೆ ವಂಚನೆ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ನಿಗಮದಲ್ಲಿ ಉನ್ನತ ಹುದ್ದೆಯ ಅಧಿಕಾರಿಗಳೆಂದು ಸುಳ್ಳು ಹೇಳಿಕೊಂಡು ನಕಲಿ ಲೆಟರ್ ಹೆಡ್‌ಗಳನ್ನು ತೋರಿಸಿ ನಂಬಿಕೆ ಮೂಡಿಸಿ ಹಣ ಪಡೆದುಕೊಳ್ಳುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿರುವುದು ನಿಗಮದ ಗಮನಕ್ಕೆ ಬಂದಿದೆ.
ಈ ಸಂಬಂಧ ಕೆಸ್ಅರ್‌ಟಿಸಿ ಸ್ಪಷ್ಟನೆ ನೀಡಿದ್ದು ನೀಗಮದಲ್ಲಿ ನಡೆಯುವ ಎಲ್ಲಾ ನೇಮಕಾತಿ ಪ್ರಕ್ರಿಯಗಳು ಸಂರ್ಫೊರ್ಣವಾಗಿ ಪಾರದರ್ಶಕ ಹಾಗೂ ನಿಯಮಬದ್ಧವಾದ ರೀತಿಯಲ್ಲಿ ನಡೆಯುತ್ತಿವೆ ಎಂದು ತಿಳಿಸಿದೆ. ನಿಗಮದಲ್ಲಿ ಯವುದೇ ರೀತಿಯ ನೇರ ನೇಮಕಾತಿ ಅಥವಾ ಶಫಾರಸ್ಸಿನ ಆಧಾರದ ಮೇಲೆ ಉದ್ಯೋಗ ನೀಡುವ ವ್ಯವಸ್ಠೆ ಇರುವುದಿಲ್ಲಾ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಸ್ಅರ್‌ಟಿಸಿಯಲ್ಲಿ ನಡೆಯುವ ನೇಮಕಾತಿಗಳಿಗಾಗಿ ಅರ್ಹ ಅಭ್ಯರ್ಥಿಳಿಂದ ಕೇವಲ ಆನ್‌ಲೈನ್ ಮೊಲಕವೇ ಅರ್ಜಿಗಳನ್ನು ಸ್ವೀಕರಸಿಲಾಗುತ್ತದೆ. ನಂತರ ಅಭ್ಯರ್ಥಿಗಳ ಅರ್ಹತೆ, ಮೇರಿಟ್ ಮತ್ತು ಸರ್ಕಾರದ ಮೀಸಲಾತಿ ಆಧಾರದ ಮೇಲೆ ಗಣಕಿಕೃತ ವ್ಯವಸ್ಥೆಯ ಮೂಲಕ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕಿಯೆಯಲ್ಲಿ ಮಾನವನ ಯವುದೇ ರೀತಿಯ ಹಸ್ತಕ್ಷೇಪ ಅವಕಾಶವಿಲ್ಲದಂತೆ ವ್ಯವಸ್ಥೆ ರೂಪಿಸಲಾಗಿದೆ. ಹೀಗಾಗಿ ಯಾರೂ ಮಧ್ಯವರ್ತಿಗಳ ಮೂಲಕ ಉದ್ಯೋಗ ಕಲ್ಪಿಸಲು ಸಾಧ್ಯವಿಲ್ಲ ಎಂದು ನಿಗಮ ತಿಳಿಸಿದೆ.
ಈ ಹಿನ್ನಲೆ ಯಲ್ಲಿ ಸಾರ್ವಜನಿಕರು ಮತ್ತು ಉದ್ಯೋಗಾಂಕ್ಷಿಗಳು ಜಾಗರೂಕತೆಯಿಂದ ಇರಬೇಕು ಎಂದು ಕೆಸ್ಅರ್‌ಟಿಸಿ ಮನವಿ ಮಾಡಿದೆ. ನಿಗಮದಲ್ಲಿ ಉದ್ಯೋಗ ಕೊಡಿಸುವಿದಾಗಿ ಹೇಳಿ ಹಣ ಕೇಳಿದರೆ ಕೊಡಬಾರದು ಮತ್ತು ಅಂತವರನ್ನು ನಂಬಬಾರದು. ಇಂತಹವರು ನಕಲಿ ದಾಖಲೆ ಅಥವಾ ನಕಲಿ ಲೆಟರ್ ಹೆಡ್‌ಗಳನ್ನು ತೋರಿಸಿ ವಂಚಿಸಲು ಪ್ರಯತ್ನಿಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಸಲಾಗಿದೆ.
ಯಾರಾದರೂ ಕೆಎಸ್‌ಆರ್‌ಟಿಸಿ ಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಅಥವಾ ಬೇರೆ ಯಾವುದೇ ರೀತಿಯ ಆಮಿಷ ನೀಡಿದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಯಲ್ಲಿನ ಯಾವುದೇ ನೇಮಕಾತಿ ಸಂಬಂಧಿತ ಮಾಹಿತಿ ಅಧಿಕೃತ ಪ್ರಕಟಣೆಗಳು ಹಾಗೂ ಜಾಹೀರಾತುಗಳನ್ನು ksrtcjobs.gov.in ಎಂಬ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ನಿಗಮದ ಅಧಿಕೃತ ವೆಬ್‌ಸೈಟ್ ಹಾಗೂ ಪ್ರಕಟಣೆಗಳನ್ನು ಮಾತ್ರ ಗಮನಿಸಿ ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications