Bengaluru PG: ಬೆಂಗಳೂರಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ: ಪಿಜಿಗಳಲ್ಲಿ ಊಟ ಬಂದ್, ವೈರಲ್ ಪೋಸ್ಟ್‌

Bengaluru PG: ಇರಾನ್ vs ಅಮೆರಿಕಾ, ಇಸ್ರೇಲ್ ದೇಶಗಳ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬಿಸಿಯು ಇದೀಗ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಆಗುತ್ತಿದೆ. ವಾಣಿಜ್ಯ ಸಿಲಿಂಡರ್‌ನ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿ ಹೋಟೆಲ್ ಬಂದ್ ಆಗುತ್ತಿವೆ. ಇದೀಗ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಬೆಂಗಳೂರು ಪಿಜಿಗಳಲ್ಲಿ ಊಟದ ಇಲ್ಲದಂತಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆ ಆಗುತ್ತಿರುವುದರಿಂದ ಅಡುಗೆ ಇರುವುದಿಲ್ಲ ಎಂದು ಪಿಜಿಗಳ ಮಾಲೀಕರು ಹೇಳುತ್ತಿರುವ ಪೋಸ್ಟ್‌ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪಿ.ಜಿವೊಂದರಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಊಟದ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಪೋಸ್ಟ್‌ ವೈರಲ್ ಆಗುತ್ತಿದೆ. ವೈಟ್‌ಫೀಲ್ಡ್ ಪಿಜಿ ಮಾಲೀಕರ ಕಲ್ಯಾಣ ಸಂಘ (Whitefield PG Owners Welfare Association)ನಿಂದ ಹಂಚಿಕೊಳ್ಳಲಾಗಿದೆ ಎನ್ನಲಾದ ಪೋಸ್ಟ್‌ವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆತ್ಮೀಯ ನಿವಾಸಿಗಳೇ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಮಾರ್ಚ್‌ 13 ರಿಂದ ಕೆಲವು ದಿನಗಳವರೆಗೆ ಮಧ್ಯಾಹ್ನದ ಊಟ ಲಭ್ಯವಿರುವುದಿಲ್ಲ. ಸ್ವಯಂ ಅಡುಗೆ / ನೀವೇ ಅಡುಗೆ ಮಾಡಿಕೊಳ್ಳುವ ವ್ಯವಸ್ಥೆಯೂ ಇರುವುದಿಲ್ಲ. ಎದುರಾಗಿರುವ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಪರಿಸ್ಥಿತಿ ತಿಳಿದುಕೊಂಡಿದ್ದಕ್ಕಾಗಿ ಧನ್ಯವಾದಗಳು ಎನ್ನುವ ಪೋಸ್ಟ್‌ ಇದೀಗ ವೈರಲ್ ಆಗುತ್ತಿದೆ.

Bengaluru PG

ಬೆಂಗಳೂರಿನಲ್ಲಿ ಪಿಜಿಗಳಲ್ಲಿ ಆತಂಕ

ಬೆಂಗಳೂರಿನಲ್ಲಿ ಕರ್ನಾಟಕದ ವಿವಿಧ ಭಾಗದಿಂದ ಬಂದಿರುವವರು, ಬೇರೆ ರಾಜ್ಯದವರು ಹಾಗೂ ಬೇರೆ ಬೇರೆ ದೇಶಗಳಿಂದ ಬಂದಿರುವವರು ಸಹ ಇದ್ದಾರೆ. ಈಗಾಗಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಕೊರತೆಯಿಂದಾಗಿ ಬೆಂಗಳೂರಿನ ವಿವಿಧ ಭಾಗದ ಹೋಟೆಲ್‌ಗಳಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ವಿವಿಧ ಭಾಗದ ಹೋಟೆಲ್‌ಗಳು ಮುಚ್ಚುತ್ತಿವೆ. ಈ ರೀತಿ ಇರುವಾಗಲೇ ಪಿಜಿಗಳಲ್ಲೂ ಸಂಕಷ್ಟ ಎದುರಾಗಿದೆ. ಪಿಜಿಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಪಿಜಿಗಳಲ್ಲಿ ಇರುವವರು ಹೋಟೆಲ್‌ಗಳಿಗೆ ತಡಕಾಡುವಂತೆ ಆಗಿದೆ. ಬೆಂಗಳೂರಿನ ಕೆಲವು ಪಿಜಿಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬೆಂಗಳೂರಿನ ವಿವಿಧ ಭಾಗಗಳಲ್ಲೂ ಇದೇ ಸಮಸ್ಯೆ ಸೃಷ್ಟಿ ಆಗುವ ಆತಂಕ ಇದೆ.

ನೆಟ್ಟಿಗರು ಹೇಳಿದ್ದೇನು

ಇನ್ನು ಈ ಪೋಸ್ಟ್‌ಗಳಿಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಿಕ್‌ ಸ್ಟೌವ್‌ಗಳನ್ನು ಖರೀದಿ ಮಾಡುವುದಕ್ಕೆ ಹೇಳಿ, ಈ ರೀತಿ ನೆಪ ಹೇಳಿದರೆ ಪಿಜಿಗಳನ್ನೇ ನಂಬಿಕೊಂಡಿರುವವರು ಏನು ಮಾಡಬೇಕು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದೆಲ್ಲವೂ ಕೇವಲ ವದಂತಿಗಳು, ವಾಸ್ತವದಲ್ಲಿ ಏನೂ ಇಲ್ಲ. ಬೆಂಗಳೂರಿನ ನಮ್ಮ ಪಿಜಿಗಳಲ್ಲಿ ಊಟದ ಸೌಲಭ್ಯ ಎಂದಿನಂತೆ ಇದೆ ಎಂದು ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+