ಇರಾನ್ ನೂತನ ಸರ್ವಾಧಿಕಾರಿ ಮೇಲೆ ಅಮೆರಿಕ ಕಣ್ಣು, ಖಮೇನಿ ಪುತ್ರನ ಬಗ್ಗೆ ಚರ್ಚೆ ಶುರು | Operation Roaring Lion

ಇರಾನ್ ಯುದ್ಧ ಎಲ್ಲವನ್ನೂ ಸರ್ವನಾಶ ಮಾಡಿ ಹಾಕುತ್ತಿದ್ದು, ನೋಡ ನೋಡುತ್ತಲೇ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿ ತುಂಡು ತುಂಡಾಗಿ ಹೋಗುತ್ತಿದೆ. ಎಲ್ಲಿ ನೋಡಿದರೂ ಬರೀ ಯುದ್ಧದ ಮಾತು & ಭಯ ಕಾಡುತ್ತಾ ಇದೆ ಈಗ. ಅದರಲ್ಲೂ 3ನೇ ಮಹಾಯುದ್ಧದ ಭೀತಿ ಕೂಡ ಕಾಡುತ್ತಿದ್ದು, ಈ ಬಾರಿ ಯುರೋಪ್ ಬದಲು ಮಧ್ಯಪ್ರಾಚ್ಯ ಭಾಗದಲ್ಲೇ 3ನೇ ಮಹಾಯುದ್ಧಕ್ಕೆ ಮುನ್ನುಡಿ ಶುರುವಾಗಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಇರಾನ್ ಸರ್ವಾಧಿಕಾರಿ ಆಗಿದ್ದ ಖಮೇನಿ ಹತ್ಯೆ ನಂತರ ಅಮೆರಿಕ & ಇಸ್ರೇಲ್ ಸೇನೆಗಳು ಶತ್ರು ದೇಶಗಳ ಮೇಲೆ ಮತ್ತಷ್ಟು ದಾಳಿಗೆ ಸಜ್ಜಾಗಿವೆ. ಇಂತಹ ಸಮಯದಲ್ಲೇ ದಿಢೀರ್ ಇರಾನ್ ನೂತನ ಸರ್ವಾಧಿಕಾರಿ ಹಾಗೂ ಖಮೇನಿ ಪುತ್ರನ ಬಗ್ಗೆ ಚರ್ಚೆ ಜೋರಾಗಿದೆ.

ಇರಾನ್ ಸರ್ವಾಧಿಕಾರಿಗೆ ಈ ಬಾರಿ ಹೇಗಾದರೂ ಒಂದು ಗತಿ ಕಾಣಿಸಬೇಕು, ಎಂದು ಕಳೆದ ಹಲವು ವರ್ಷ ಸತತವಾಗಿ ಪ್ಲಾನ್ ಮಾಡಿತ್ತು ಇಸ್ರೇಲ್. ಇಸ್ರೇಲ್‌ ಗುಪ್ತಚರ ಸಂಸ್ಥೆ ವರ್ಷಗಟ್ಟಲೇ ಖಮೇನಿ ಮೇಲೆ ಕಣ್ಣು ಇಟ್ಟು ಕಾಯುತ್ತಾ, ಹತ್ಯೆಗೆ ತಂತ್ರ ರೂಪಿಸಿತ್ತು. ಪ್ರಮುಖವಾಗಿ ಇರಾನ್‌ ದೇಶದಲ್ಲಿ ಇರುವ ಟ್ರಾಫಿಕ್‌ ಕ್ಯಾಮೆರಾ ಹ್ಯಾಕ್‌ ಮಾಡಿದ್ದ ಇಸ್ರೇಲ್, ಖಮೇನಿ ಇರುವುದೆಲ್ಲಿ? ಖಮೇನಿ ಹೋಗುವುದು ಎಲ್ಲಿಗೆ? ಎಂಬ ಮಾಹಿತಿ ಕಲೆ ಹಾಕಿತ್ತು. ಇಷ್ಟೇ ಅಲ್ಲದೆ ಖಮೇನಿಯ ಭದ್ರತಾ ವಿವರ ಪಡೆಯಲು ಮೊಬೈಲ್‌ ನೆಟ್‌ವರ್ಕ್‌ ಟ್ರ್ಯಾಕ್ ಕೂಡ ಮಾಡಲಾಗಿತ್ತು. ಅಲ್ಲದೆ ಖುದ್ದು ಇಸ್ರೇಲ್ ದೇಶದ ಹಾಗೂ ಅಮೆರಿಕದ ಏಜೆಂಟ್‌ಗಳು ವೇಷ ಮರೆಸಿಕೊಂಡು ಇರಾನ್ ದೇಶದಲ್ಲೇ ವಾಸ ಇದ್ದರು.

Operation Roaring Lion

ಖಮೇನಿ ಪುತ್ರ ದಿಢೀರ್ ಶಿಫ್ಟ್?

ಇಷ್ಟೆಲ್ಲಾ ಮಾಹಿತಿಯ ಮೂಲಕ ಖಮೇನಿಯ ಪ್ರತಿ ಹೆಜ್ಜೆಯನ್ನೂ ಇಸ್ರೇಲ್ ಗಮನಿಸುತ್ತಾ ಇತ್ತು, ಕೊನೆಗೆ ನೇರವಾಗಿ ಇರಾನ್ ಮೇಲೆ ದಾಳಿ ಮಾಡಿ ಖಮೇನಿ ಹತ್ಯೆ ಮಾಡಲಾಗಿತ್ತು. ಈಗ ಹೊಸ ಸರ್ವಾಧಿಕಾರಿ ಹಾಗೂ ಖುದ್ದು ಖಮೇನಿಯ ಪುತ್ರನ ಹತ್ಯೆಗೂ ಪ್ಲಾನ್ ಆಗಿದೆಯಂತೆ. ಈಗಾಗಲೇ ಅಮೆರಿಕ ಬಹಿರಂಗ ಘೋಷಣೆ ಮಾಡುತ್ತಿದ್ದು, ಹೇಗಾದರೂ ಮಾಡಿ ಇರಾನ್ ಹೊಸ ಸರ್ವಾಧಿಕಾರಿಯ ಕಥೆ ಮುಗಿಸುವೆವು ಎನ್ನುತ್ತಿದೆ. ಇಷ್ಟೇ ಅಲ್ಲದೆ ಯಾರೇ ಇರಾನ್ ದೇಶದ ಸರ್ವಾಧಿಕಾರಿ ಆಗಿ ಆಯ್ಕೆ ಆದರೂ ಅವರನ್ನು ನಾವು ಬಿಡುವುದಿಲ್ಲ ಎನ್ನುತ್ತಿದೆ ಅಮೆರಿಕ. ಇಂತಹ ಸಮಯದಲ್ಲೇ ದಿಢೀರ್ ಮೊಜ್ತಬಾ ಖಮೇನಿ ಅಂದ್ರೆ ಇರಾನ್‌ನ ನೂತನ ಸರ್ವಾಧಿಕಾರಿ ಅತ್ಯಂತ ಗುಟ್ಟಾದ ಜಾಗಕ್ಕೆ ಶಿಫ್ಟ್ ಆಗಿರುವುದು ಕನ್ಫರ್ಮ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+