ಮುಸ್ಲಿಮರು ಹಿಂದುಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರಲಿಲ್ಲ: ಹರಿಯಾಣ ಗೃಹ ಸಚಿವರ ಹೇಳಿಕೆ ಸುಳ್ಳು ಎಂದ ನುಹ್ ದೇವಾಲಯದ ಅರ್ಚಕ
ನುಹ್, ಆಗಸ್ಟ್ 02: ಸೋಮವಾರ ನುಹ್‌ನಲ್ಲಿ ನಡೆದ ಕೋಮು ಘರ್ಷಣೆಯ ಸಂದರ್ಭದಲ್ಲಿ ಮುಸ್ಲಿಂ ಗಲಭೆಕೋರರು ಹಿಂದುಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿಕೆ ನೀಡಿದ್ದಾರೆ. ಈ ಕುರಿತು 'ದಿ ವೈರ್' ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನುಹ್ ದೇವಾಲಯದ ಅರ್ಚಕ ಗೃಹ ಸಚಿವರ ಹೇಳಿಕೆ ಸುಳ್ಳು ಎಂದು ತಿಳಿಸಿದ್ದಾರೆ.
'ದೇವಸ್ಥಾನವೊಂದರಲ್ಲಿ ಸುಮಾರು 3000-4000 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ' ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಹೇಳಿಕೆ ನೀಡಿದ್ದಾರೆ. ಇದಾದ ಒಂದು ದಿನದ ಬಳಿಕ, ಅದೇ ದೇವಾಲಯದ ಅರ್ಚಕ ಗೃಹ ಸಚಿವರ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ದಿ ವೈರ್‌ನೊಂದಿಗೆ ಮಾತನಾಡಿದ ನಲ್ಹಾರ್ ಮಹಾದೇವ್ ದೇವಸ್ಥಾನದ ಅರ್ಚಕ ದೀಪಕ್ ಶರ್ಮಾ, 'ಮುಸ್ಲಿಂ ಗಲಭೆಕೋರರು ಹಿಂದುಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ವಿಜ್ ಹೇಳಿದ್ದಾರೆ. ದೇವಾಲಯದಲ್ಲಿ ಸಾಮಾನ್ಯವಾಗಿ ಸಾವನ್ ಮಾಸದಲ್ಲಿ ಯಾತ್ರಿಕರ ಸಂಖ್ಯೆ ಅಧಿಕವಾಗಿರುತ್ತದೆ. ಸೋಮವಾರ ಶೋಭಾ ಯಾತ್ರೆಯ ಕಾರಣ ಭಕ್ತರ ಸಂಖ್ಯೆ ತುಂಬಾ ಹೆಚ್ಚಿತ್ತು. ಅವರು ಶೋಭಾ ಯಾತ್ರೆಯ ಸಮಯದಲ್ಲಿ ಒಳಗೆ ಬರುತ್ತಿದ್ದರು ಮತ್ತು ಹೋಗುತ್ತಿದ್ದರು' ಎಂದು ತಿಳಿಸಿದ್ದಾರೆ.
ಪರಮಾತ್ಮನ ಆಶ್ರಯದಲ್ಲಿರುವ ಭಕ್ತರನ್ನು ಒತ್ತೆಯಾಳಾಗಿ ಇಡುವುದು ಹೇಗೆ? ಹೊರಗೆ ಸಂಘರ್ಷ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ದೇವಾಲಯದ ಒಳಗೆ ಸಿಕ್ಕಿಹಾಕಿಕೊಂಡರು. ಯಾರೂ ಸಹ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿರಲಿಲ್ಲ ಎಂದು ಅರ್ಚಕ ತಿಳಿಸಿದ್ದಾರೆ.
ಘರ್ಷಣೆಗಳು ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯ ಗೃಹ ಸಚಿವರ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸುವಂತೆ ಮಾಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನಲ್ಹಾರ್ ಮಹಾದೇವ ದೇವಾಲಯವು ನುಹ್ ನಗರದಿಂದ ಸ್ಪಲ್ಪ ದೂರದಲ್ಲಿದೆ. ಇದು ಬೆಟ್ಟಗಳಿಂದ ಆವೃತವಾಗಿದೆ. ಇದು ಮಹಾಭಾರತದ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಜನರು ನಂಬುತ್ತಾರೆ.
ಸೋಮವಾರ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಿಜ್ಮಂಡಲ್ ಜಲಾಭಿಷೇಕ ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಧಾರ್ಮಿಕ ಮೆರವಣಿಗೆಯು ನುಹ್ ಮೂಲಕ ಹಾದು ಹೋಗುತ್ತಿದ್ದಾಗ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಸಂಘರ್ಷ ಏರ್ಪಟ್ಟಿದೆ.
ಯಾತ್ರೆಯ ಸಂದರ್ಭದಲ್ಲಿ ಹಿಂದುತ್ವವಾದಿಗಳ ಹಲವಾರು ದ್ವೇಷಪೂರಿತ ವಿಡಿಯೊಗಳನ್ನು ಪ್ರಸಾರ ಮಾಡಲಾಗಿದೆ. ಇದು ಮುಸ್ಲಿಮರನ್ನು ಕೆರಳಿಸಿದೆ ಎಂದು 'ದಿ ವೈರ್' ವರದಿ ಮಾಡಿದೆ.

ಕೆಲವು ಮುಸ್ಲಿಂ ಯುವಕರು ಮೋನು ಮನೇಸರ್‌ನಂತಹ ಹಿಂದುತ್ವವಾದಿಗಳನ್ನು ನುಹ್‌ಗೆ ಪ್ರವೇಶಿಸದಂತೆ ತಡೆಯೊಡ್ಡಿದ್ದಾರೆ. ಮೋನು ಮನೇಸರ್ ಈ ಹಿಂದೆ ಇಬ್ಬರು ಮುಸ್ಲಿಮರ ಹತ್ಯೆಯಲ್ಲಿ ಆರೋಪಿಯಾಗಿದ್ದಾನೆ.
ನುಹ್‌ನಲ್ಲಿ ಭುಗಿಲೆದ್ದ ಹಿಂಸಾಚಾರವು ಗುರುಗ್ರಾಮಕ್ಕೆ ಹರಡಿದೆ. ಗುರುಗ್ರಾಮದ ಮಸೀದಿಯೊಂದರ ಧರ್ಮಗುರುವನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಸೋಮವಾರ ತಡರಾತ್ರಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ.
ಘರ್ಷಣೆಗಳು ಪ್ರಾರಂಭವಾದಾಗಿನಿಂದ ಕೆಲ ನಾಯಕರು ಈ ಪ್ರದೇಶದಲ್ಲಿ ಕೋಮು ದ್ವೇಷವನ್ನು ಹರಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಹರಿಯಾಣ ಗೃಹ ಸಚಿವ ವಿಜ್ ಈ ಪ್ರದೇಶದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಪ್ರದೇಶದ ಕಾಂಗ್ರೆಸ್ ನಾಯಕರು ಶಾಂತಿಗಾಗಿ ಮನವಿ ಮಾಡುತ್ತಿದ್ದಾರೆ ಎಂದು 'ದಿ ವೈರ್' ವರದಿ ಮಾಡಿದೆ.
ನುಹ್, ಮೇವಾತ್ ಹಾಗೂ ಗುರುಗ್ರಾಮದ ಕೆಲ ಪ್ರದೇಶಗಳು ಕಳೆದ ಕೆಲ ವರ್ಷಗಳಿಂದ ಕೋಮು ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಟ್ಟಿವೆ. ಗೋ ರಕ್ಷಣೆ ಸಂಬಂಧ ಮುಸ್ಲಿಮರ ಹತ್ಯೆ, ಮಸೀದಿಗಳ ಮೇಲಿನ ದಾಳಿಗಳು, ನಮಾಜ್ ವೇಳೆ ಮೈಕ್‌ಗೆ ನಿರ್ಬಂಧದಂತಹ ವಿವಾದಗಳು ಈ ಪ್ರದೇಶದಲ್ಲಿ ಕೋಮ ಸಂಘರ್ಷವನ್ನು ಹುಟ್ಟುಹಾಕಿವೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications