ಗುರ್‌ಗಾಂವ್: 14 ವರ್ಷದ ಬಾಲಕಿಯನ್ನು ಬೆದರಿಸಿ, ಹಲವರಿಂದ ಅತ್ಯಾಚಾರ

ಗುರ್‌ಗಾಂವ್, ಸೆ.16: ಗುರ್‌ಗಾಂವ್‌ನ ಸ್ಥಳೀಯ ಸ್ಪಾವೊಂದರಲ್ಲಿ 14 ವರ್ಷದ ಬಾಲಕಿಯನ್ನು ಗ್ರಾಹಕರ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ, ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಕೆಲಸ ಮಾಡುತ್ತಿದ್ದ ಸ್ಪಾನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದಕ್ಕೆ ಆಕೆಗೆ ಕೆಲಸ ನೀಡಿದವರೆ ಒತ್ತಡ ಹಾಕಿದ್ದಾರೆ ಎಂದು ಬಾಲಕಿ ದೂರು ದಾಖಲಿಸಿದ್ದಾರೆ.

ಅಪ್ರಾಪ್ತೆ ದೂರಿನ ಬೆನ್ನಲ್ಲೇ ಮಹಿಳಾ ಪೊಲೀಸ್ ಠಾಣೆ ಸೆಕ್ಟರ್ 51ರಲ್ಲಿ ಸ್ಪಾ ಆಪರೇಟರ್, ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರಿಗೆ ಇದು ಎರಡನೇ ದೂರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮದುವೆಯ ಭರವಸೆ ನೀಡಿ ತಪ್ಪಿಸಿಕೊಂಡಿದ್ದ ಆರೋಪಿಗಳು

ಮದುವೆಯ ಭರವಸೆ ನೀಡಿ ತಪ್ಪಿಸಿಕೊಂಡಿದ್ದ ಆರೋಪಿಗಳು

ಮೊದಲ ಬಾರಿಗೆ ಪೊಲೀಸರ ಬಳಿಗೆ ಹೋದಾಗ, ಆರೋಪಿಗಳಲ್ಲಿ ಒಬ್ಬನಾದ ರುಬೆಲ್ ಅನ್ನು ಪ್ರೀತಿಸುತ್ತಿರುವುದಾಗಿ ಸುಳ್ಳು ಹೇಳಲು ಬಾಲಕಿ ಮೇಲೆ ಒತ್ತಡ ಹೇರಲಾಗಿದೆ. ಆತ ಮದುವೆಯಾಗುವುದಾಗಿ ಭರವಸೆ ಕೂಡ ನೀಡಿದ್ದನು. ಆ ಕಾರಣ ವಿಷಯವನ್ನು ಕೈಬಿಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆರೋಪಿ ಬಾಲಕಿಯನ್ನು ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಆಕೆ ಹಾಗೂ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆಕೆ ಆರೋಪಿಸಿದ್ದಾರೆ.

ಪೊಲೀಸರಿಗೆ ತನ್ನ ವಯಸ್ಸನ್ನು ಸರಿಯಾಗಿ ತಿಳಿಸದ ಸಂತ್ರಸ್ತೆ

ಪೊಲೀಸರಿಗೆ ತನ್ನ ವಯಸ್ಸನ್ನು ಸರಿಯಾಗಿ ತಿಳಿಸದ ಸಂತ್ರಸ್ತೆ

ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ನಿಜವಾದ ವಯಸ್ಸಿನ ಪುರಾವೆಗಳನ್ನು ಇನ್ನೂ ಹಂಚಿಕೊಂಡಿಲ್ಲ. ದೂರು ನೀಡಿರುವ ಆಕೆ ಅಪ್ರಾಪ್ತಳೇ ಎಂದು ಇನ್ನೂ ಪರಿಶೀಲಿಸಬೇಕಾಗಿದೆ ಎಂದಿದ್ದಾರೆ. ಘಟನೆಯ ಹಿನ್ನೆಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಾಲಕಿಗೆ ಸ್ಪಾನಲ್ಲಿ ಕೆಲಸ ಕೊಡಿಸಿದ್ದ ಆರೋಪಿಗಳು

ಬಾಲಕಿಗೆ ಸ್ಪಾನಲ್ಲಿ ಕೆಲಸ ಕೊಡಿಸಿದ್ದ ಆರೋಪಿಗಳು

ಬಾಲಕಿ ನೀಡಿರುವ ದೂರಿನ ಪ್ರಕಾರ, ಸೆಕ್ಟರ್ 49 ಪ್ರದೇಶದಲ್ಲಿ ವಾಸಿಸುತ್ತಿದ್ದ ಆಕೆ ಕೆಲಸ ಹುಡುಕುತ್ತಿದ್ದಳು, ಸುಮಾರು ಒಂದು ತಿಂಗಳ ಹಿಂದೆ ಆಕೆ ಪೂಜಾ ಎಂಬ ಮಹಿಳೆಯನ್ನು ಭೇಟಿಯಾಗಿದ್ದರು. ಪೂಜಾ ಬಾಲಕಿಗೆ ವೈದ್ಯರ ಕ್ಲಿನಿಕ್‌ನಲ್ಲಿ ಕೆಲಸ ಕೊಡಿಸಿದ್ದರು. ಆದರೆ ಕೇವಲ ಎರಡು ದಿನಗಳ ನಂತರ ಕೆಲಸದಿಂದ ತೆಗೆದು ಹಾಕಲಾಯಿತು ಎಂದು ಹೇಳಿದ್ದಾರೆ.

ಸುಮಾರು 15 ದಿನಗಳ ನಂತರ, ಪೂಜಾ ಬಾಲಕಿಯನ್ನು ಮತ್ತೆ ಭೇಟಿಯಾದಳು. ಈ ಬಾರಿ ಒಮ್ಯಾಕ್ಸ್ ಗುರುಗ್ರಾಮ್ ಮಾಲ್‌ನ ಮೊದಲ ಮಹಡಿಯಲ್ಲಿರುವ ಕಿಂಗ್ ಸ್ಪಾದಲ್ಲಿ ಕೆಲಸವನ್ನು ನೀಡಿದ್ದರು. ಸ್ಪಾ ಓನರ್ ತನ್ನ ಚಿಕ್ಕಮ್ಮ ಎಂದು ಪೂಜಾ ಹೇಳಿದ್ದರು ಎಂದಿದ್ದಾರೆ.

"ನನ್ನ ಕೆಲಸದ ಮೊದಲ ದಿನವೇ ನನ್ನ ಅಗ್ನಿಪರೀಕ್ಷೆ ಪ್ರಾರಂಭವಾಯಿತು. ನನ್ನನ್ನು ಅತ್ಯಾಚಾರ ಮಾಡಿದ ವ್ಯಕ್ತಿಯೊಂದಿಗೆ ಅವರು ನನ್ನನ್ನು ಬಲವಂತವಾಗಿ ಸ್ಪಾದ ಕೊಠಡಿಯೊಳಗೆ ಕಳುಹಿಸಿದ್ದರು. ಕೆಲಸ ಬಿಡುವುದಾಗಿ ತಿಳಿಸಿದಾಗ, ಅತ್ಯಾಚಾರದ ವಿಡಿಯೋವನ್ನು ತೋರಿಸಿ ಹೆದರಿಸಲಾಯಿತು. ಅದೇ ಕೆಲಸವನ್ನು ಮುಂದುವರೆಸುವಂತೆ ಬಲವಂತ ಮಾಡಲಾಯಿತು" ಎಂದು ಹುಡುಗಿ ತನ್ನ ದೂರಿನಲ್ಲಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸ ಬಿಟ್ಟರು ಆರೋಪಿಗಳ ಕಿರುಕುಳ ತಪ್ಪಲಿಲ್ಲ!

ಕೆಲಸ ಬಿಟ್ಟರು ಆರೋಪಿಗಳ ಕಿರುಕುಳ ತಪ್ಪಲಿಲ್ಲ!

"ನನ್ನನ್ನು ಇನ್ನೂ ಸ್ವಲ್ಪ ದಿನಗಳ ಕಾಲ ಸ್ಪಾಗೆ ಹೋಗುವಂತೆ ಒತ್ತಾಯಿಸಲಾಯಿತು. ಈ ಸಮಯದಲ್ಲಿ ಪ್ರತಿದಿನ 10 ರಿಂದ 15 ಪುರುಷರು ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು" ಎಂದು ಹುಡುಗಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಎಫ್ಐಆರ್ ಪ್ರಕಾರ, ಸಂತ್ರಸ್ತೆ ತನ್ನ ತಾಯಿಯ ಬೆಂಬಲದೊಂದಿಗೆ ಕೆಲಸವನ್ನು ಬಿಟ್ಟರು. ಆದರೆ ಆರೋಪಿಗಳಾದ - ಜುಮಾ, ಪೂಜಾ, ರುಬೆಲ್ ಮತ್ತು ಸದ್ದಾಂ ಆಕೆಗೆ ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಹೀಗಾಗಿ ಎರಡು ವಾರಗಳ ಹಿಂದೆ ಬಾಲಕಿ ಎರಡನೇ ಬಾರಿಗೆ ಪೊಲೀಸರ ಮೊರೆ ಹೋಗಿದ್ದಳು.

"ನನ್ನ ಹೆತ್ತವರು ಮತ್ತು ನನ್ನ ಜೀವಕ್ಕೆ ಅಪಾಯವಿರುವುದರಿಂದ ನಾನು ಈಗ ದೂರು ನೀಡುತ್ತಿದ್ದೇನೆ. ಇದು ಅಮಾಯಕ ಹುಡುಗಿಯರನ್ನು ಬಲೆಗೆ ಬೀಳಿಸುವ ಮೂಲಕ ಅವರನ್ನು ಶೋಷಿಸುವ ಗ್ಯಾಂಗ್" ಎಂದು ಬಾಲಕಿ ದೂರು ನೀಡಿದ್ದಾರೆ.

ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376-ಡಿ (ಸಾಮೂಹಿಕ ಅತ್ಯಾಚಾರ), 323 (ಗಾಯ ಉಂಟುಮಾಡುವುದು), 506 (ಅಪರಾಧದ ಬೆದರಿಕೆ), ಮತ್ತು 34 , ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 6, 13, 14, 17 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+