Breaking: ಚಾಕುವಿನಿಂದ ಚುಚ್ಚಿ ತಾಯಿಯನ್ನು ಕೊಂದ ಮಗ
ಗುರ್‌ಗಾಂವ್, ಆಗಸ್ಟ್ 12: 21 ವರ್ಷದ ಯುವಕನೊಬ್ಬ ತನ್ನ ವಿಧವೆ ತಾಯಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಹಲವು ಬಾರಿ ಚಾಕುವಿನಿಂದ ಇರಿದು, ಕತ್ತು ಹಿಸುಕಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಹರ್ಯಾಣದ ಗುರ್‌ಗಾಂವ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರವೇಶ್ ನನ್ನು ಬಂಧಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯ ಮರಣದ ನಂತರ ಸೋನಾ ದೇವಿ (40) ತನ್ನ ತಾಯಿಯ ಗ್ರಾಮವಾದ ಹಿಸಾರ್‌ನ ಗರ್ಹಿಗೆ ಹಿಂತಿರುಗಿ ಖಾಸಗಿ ಶಾಲೆಯೊಂದರಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಅದೇ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಅವರ ಮಗ ಆರೋಪಿ ಪ್ರವೇಶ್ ಸೋನೆಪತ್‌ನ ಜಟ್ವಾಡ ಮೊಹಲ್ಲಾದಲ್ಲಿ ವಾಸವಾಗಿದ್ದು, ಆಗ್ಗಾಗ್ಗೆ ತನ್ನ ತಾಯಿಯನ್ನು ಭೇಟಿಯಾಗುತ್ತಿದ್ದರು. ಆಗಸ್ಟ್ 6 ರಂದು ಬಂದು ಭೇಟಿಯಾದ ಸಮಯದಲ್ಲಿ, ತಾಯಿಯನ್ನು ಕೊಲೆ ಮಾಡಿದ್ದಾನೆ.
ಚಾಕುವಿನಿಂದ ಹಲವು ಬಾರಿ ಇರಿದಿರುವ ಆರೋಪಿ, ಆಕೆ ಮೃತಪಟ್ಟಿದಾಳೆ ಎಂದು ಖಚಿತಪಡಿಸಿಕೊಳ್ಳಲು ಕತ್ತು ಹಿಸುಕಿದ್ದಾನೆ. ನಂತರ ಆಕೆಯ ಶವವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕೈದು ದಿನಗಳ ನಂತರ ದುರ್ವಾಸನೆ ಗಮನಿಸಿದ ಮನೆ ಮಾಲೀಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ ಸೋನಾ ದೇವಿಯ ಶವ ಪತ್ತೆಯಾಗಿದೆ.
ತನಿಖೆಯ ಸಮಯದಲ್ಲಿ, ಸೋನಾ ದೇವಿ ಸಹೋದರ ಪರ್ವಿಂದರ್, ಪ್ರವೇಶ್ ಆಕೆಯನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದು, ಅವರನ್ನು ರೋಹ್ಟಕ್‌ನಲ್ಲಿ ಬಂಧಿಸಲಾಗಿದೆ ಎಂದು ಸೆಕ್ಟರ್ 10 ಎ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋಲೀಸ್ ಅಧಿಕಾರಿಯ ಪ್ರಕಾರ, ತನ್ನ ತಾಯಿಯು ಹಲವಾರು ಬಾರಿ ಫೋನ್‌ನಲ್ಲಿ ಮಾತನಾಡುವುದನ್ನು ನೋಡಿದ್ದರಿಂದ ಆಕೆ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ ಎಂದು ಪ್ರವೇಶ್ ಶಂಕಿಸಿದ್ದಾನೆ. ಬಳಿಕ ಹತ್ಯೆ ಮಾಡಿದ್ದಾನೆ ಎಂದಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ಅಡಗಿಸಿಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications