• search
For chennai Updates
Allow Notification  

  ರಾಜಕೀಯಕ್ಕಾಗಿ ನಟನೆಯನ್ನು ತೊರೆಯಲು ನಿರ್ಧರಿಸಿದ ಕಮಲ್ ಹಾಸನ್

  By Sachhidananda Acharya
  |

  ಚೆನ್ನೈ, ಫೆಬ್ರವರಿ 14: ಜಗತ್ತಿನಾದ್ಯಂತ ಹರಡಿಕೊಂಡಿರುವ ಅಸಂಖ್ಯಾತ ಕಮಲ್ ಹಾಸನ್ ಅಭಿಮಾನಿಗಳು ಇನ್ನು ಮುಂದೆ ಅವರನ್ನು ಬೆಳ್ಳಿ ತೆರೆ ಮೇಲೆ ಮಿಸ್ ಮಾಡಿಕೊಳ್ಳಲಿದ್ದಾರೆ. ರಾಜಕೀಯಕ್ಕಾಗಿ ಕಮಲ್ ಹಾಸನ್ ಸಿನಿಮಾ ನಟನೆ ತೊರೆಯಲು ನಿರ್ಧರಿಸಿದ್ದಾರೆ.

  "ಇನ್ನೇನು ಬಿಡುಗಡೆಯಾಗಲಿರುವ ಎರಡು ಸಿನಿಮಾಗಳನ್ನು ಹೊರತುಪಡಿಸಿ ನನ್ನ ಬೇರಾವ ಸಿನಿಮಾಗಳೂ ಬರುವುದಿಲ್ಲ," ಎಂದು ಬೋಸ್ಟನ್ ನಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  ಕಮಲ್ ಹಾಸನ್ ಹೊಸ ಪಕ್ಷದ ಹೆಸರು ಫೆ.21 ಕ್ಕೆ ಘೋಷಣೆ

  63 ವರ್ಷ ವಯಸ್ಸಿನ ಕಮಲ್ ಹಾಸನ್ ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ರಾಜಕೀಯ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ. 'ಕಪ್ಪು' ತಮ್ಮ ರಾಜಕೀಯದ ಬಣ್ಣ ಎಂದು ಕಮಲ್ ಹೇಳಿದ್ದಾರೆ. ಇದು ದ್ರಾವಿಡ ಜನರನ್ನು ಮತ್ತು ಕಪ್ಪು ಮೈಬಣ್ಣವನ್ನು ಪ್ರತಿನಿಧಿಸಲಿದೆ ಎಂದಿದ್ದಾರೆ. "ನಮಗೆ ತಮಿಳರಿಗೆ ಇದು ಸಾಂಸ್ಕೃತಿಕವಾಗಿ ಕೆಟ್ಟ ವರ್ಣವಲ್ಲ," ಎಂದು ಕಮಲ್ ಸಂದರ್ಶನದಲ್ಲಿ ಹೇಳಿದ್ದಾರೆ.

  Kamal Haasan decides to quit acting for the sake of politics

  ತಾವು ಏಕರೂಪದ, ಏಕಶಿಲೆಯ ಸಂಸ್ಕೃತಿಯನ್ನು ಇಷ್ಟಪಡುವುದಿಲ್ಲ ಎಂದು ಕಮಲ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಇನ್ನು ಚುನಾವಣೆ ಗೆಲುವಿನ ಬಗ್ಗೆ ಮಾತನಾಡಿದ ಕಮಲ್, "ನಾನು ಪ್ರಾಮಾಣಿಕ ಜೀವನಕ್ಕಾಗಿ ಏನನ್ನಾದರೂ ಮಾಡಲೇಬೇಕು. ನಾನು ಸೋಲುತ್ತೇನೆ ಎಂದು ನನಗೆ ಅನಿಸುತ್ತಿಲ್ಲ," ಎಂದು ಹೇಳಿದರು.

  "ನಾನು ರಾಜಕೀಯ ವ್ಯಕ್ತಿಯಲ್ಲ. ಆದರೆ ನಾನು ಸಾಮಾಜಿಕ ಸೇವೆಗಳಲ್ಲಿ ಕಳೆದ 37 ವರ್ಷಗಳಿಂದ ತೊಡಗಿಸಿಕೊಂಡಿದ್ದೆ. ಈ 37 ವರ್ಷಗಳಲ್ಲಿ ನಾವು 10 ಲಕ್ಷ ನಂಬಿಕಸ್ಥ ಕಾರ್ಯಕರ್ತರನ್ನು ಸಂಪಾದಿಸಿದ್ದೇವೆ," ಎಂದು ವಿವರಿಸಿದ್ದಾರೆ.

  ರಜನಿಕಾಂತ್ 33 ಸೀಟಿಗಿಂತ ಹೆಚ್ಚು ಗೆಲ್ಲಲ್ಲ : ಇಂಡಿಯಾ ಟುಡೇ ಸಮೀಕ್ಷೆ

  "ನಾನು ಶ್ರದ್ಧೆ ಇರುವ ವ್ಯಕ್ತಿ. ನನ್ನ ಬ್ಯಾಂಕ್ ಖಾತೆಯನ್ನು ಸುಧಾರಿಸಲು ನಾನು ಇಲ್ಲಿಗೆ ಬಂದಿಲ್ಲ. ನಾನು ಸಂತೋಷಯುಕ್ತ ಜನಪ್ರಿಯ ನಿವೃತ್ತ ಜೀವನವನ್ನು ಪಡೆಯಬಹುದಾಗಿತ್ತು. ನಾನು ಕೇವಲ ನಟನಾಗಿ ಸಾಯಲು ಬಯಸುವುದಿಲ್ಲ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬರಲು ನಿರ್ಧರಿಸಿದೆ. ನಾನು ಜನರ ಸೇವೆಯಲ್ಲೇ ಸಾಯುತ್ತೇನೆ ಮತ್ತು ನನಗೇ ನಾನು ಆ ಭರವಸೆ ನೀಡಿದ್ದೇನೆ," ಎಂದು ಕಮಲ್ ಹಾಸನ್ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಚೆನ್ನೈ ಸುದ್ದಿಗಳುView All

  English summary
  Film buffs across the world are surely going to miss Kamal Haasan, the great actor, as the superstar has decided to quit acting for the sake of politics.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more