ಕಮಲ್ ಹಾಸನ್ ಹೊಸ ಪಕ್ಷದ ಹೆಸರು ಫೆ.21 ಕ್ಕೆ ಘೋಷಣೆ

ಚೆನ್ನೈ, ಜನವರಿ 17: ಖ್ಯಾತ ತಮಿಳು ನಟ ಕಮಲ್ ಹಾಸನ್ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಫೆಬ್ರವರಿ 21 ರಂದು ಘೋಷಣೆ ಮಾಡಲಿದ್ದಾರೆ. ಅಲ್ಲದೆ, ತಮ್ಮ ಪಕ್ಷದ ಸಿದ್ಧಾಂತಗಳು, ಗುರಿಗಳೇನು ಎಂಬುದನ್ನೂ ಅವರು ಇದೇ ಸಂದರ್ಭದಲ್ಲಿ ಹೇಳಲಿದ್ದಾರೆ.

ಫೆಬ್ರವರಿ 21 ರಿಂದ ತಮಿಳುನಾಡಿನಾದ್ಯಂತ ಪ್ರವಾಸ ಕೈಗೊಳ್ಳಲಿರುವ ಕಮಲ್ ಹಾಸನ್ ಅದೇ ದಿನ ಪಕ್ಷದ ಹೆಸರನ್ನು ಘೋಷಿಸಲಿದ್ದಾರೆ.

2017 ರ ನವೆಂಬರ್ ನಲ್ಲೇ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಸೂಚನೆ ನೀಡಿದ್ದ ಕಮಲ್, ತಮ್ಮ ಉದ್ದೇಶ ಖಂಡಿತ ಪ್ರಚಾರ ಗಳಿಸುವುದಲ್ಲ ಎದು ಸ್ಪಷ್ಟಪಡಿಸಿದ್ದಾರೆ. ನಾನು ಯಾವುದೇ ಪ್ರಚಾರಕ್ಕಾಗಲಿ ರಾಜಕೀಯಕ್ಕೆ ಬರುತ್ತಿಲ್ಲ. ಅಥವಾ ನಾನೊಬ್ಬ ಬಂಡಾಯ ನಾಯಕ ಎಂದೂ ಭಾವಿಸಬೇಕಿಲ್ಲ. ನನ್ನ ಜನರನ್ನು ಅರ್ಥಮಾಡಿಕೊಳ್ಳುವುದಕ್ಕೆ ರಾಜಕೀಯವೊಂದು ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ನಾನು ಭಾವಿಸಿದ್ದೇನೆ. ಕಲಿಯುವುದಕ್ಕೆ ಮತ್ತು ಜನ ಸೇವೆ ಮಾಡುವುದಕ್ಕೆ ಇದೊಂದು ಉತ್ತಮ ಅವಕಾಶ ಎಂದು ಅವರು ಹೇಳಿದ್ದಾರೆ.

Kamal Haasan to announce political party name on Feb 21

ಅವರ ರಾಜ್ಯ ಪ್ರವಾಸವು ಕಮಲ್ ಹಾಸನ್ ಅವರ ಮೂಲ ಊರಾದ ರಾಮನಾಥಪುರಂ ನಿಂದ ಆರಂಭವಾಗಲಿದೆ. ಮಧುರೈ, ದಿಂಡಿಗುಲ್ ಮತ್ತು ಶಿವಗಂಗೈ ಗಳಲ್ಲಿ ಕಮಲ್, ಸ್ಥಳೀಯರೊಂದಿಗೆ ಸಂವಾದ ಸಹ ನಡೆಸಲಿದ್ದಾರೆ.

ಅಕಸ್ಮಾತ್ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸಿದರೆ ನಾನು ಅವರ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಸಹ ಕಳೆದ ಸೆಪ್ಟೆಂಬರ್ ನಲ್ಲಿ ಕಮಲ್ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+