Kamal Haasan: ಕಮಲ್ ಹಾಸನ್ ಹೊಸ ಸಿನಿಮಾ ಎಂಟ್ರಿ ನೋಡಿದ್ರೆ ಕಳೆದು ಹೋಗೋದು ಗ್ಯಾರಂಟಿ!
ಕಮಲ್ ಹಾಸನ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಭಾರತ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಯಲ್ಲಿ ಕಮಲ್ ಹಾಸನ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗೆ ನೂರಾರು ಸಿನಿಮಾಗಳನ್ನು ಮಾಡಿ, ತಮ್ಮ 68ನೇ ವಯಸ್ಸಿನಲ್ಲೂ ಮಿಂಚುತ್ತಿದ್ದಾರೆ. ಫ್ಯಾನ್ಸ್ ಪಾಲಿಗೆ ಇಂದಿಗೂ ಲೆಜೆಂಡ್ ಅನಿಸಿಕೊಳ್ಳುವ ಕಮಲ್ ಹಾಲಿವುಡ್ ರೇಂಜ್ ಇರುವ ತಮ್ಮ ಹೊಸ ಸಿನಿಮಾದ ಝಲಕ್ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ.
ನಿಮಗೆಲ್ಲಾ ಗೊತ್ತಿದ್ದಂತೆ ಕಮಲ್ ಹಾಸನ್ ಒಂದು ಕಾಲದಲ್ಲಿ ಇಡೀ ಭಾರತೀಯ ಸಿನಿಮಾ ರಂಗವನ್ನೇ ಆಳಿದ್ದರು. ಆವತ್ತು ಮಾತ್ರವಲ್ಲ, ಈವತ್ತಿಗೂ ಕಮಲ್ ಸಿನಿಮಾಗಳು ಅಂದರೆ ಅದೇ ಖದರ್ ಇರುತ್ತೆ. ಅದ್ರಲ್ಲೂ 2022ರಲ್ಲಿ ರಿಲೀಸ್ ಆಗಿದ್ದನ್-2' ವಿಡಿಯೋಗೆ ಕೂಡ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಈಗ ಹಾಲಿವುಡ್ ರೇಂಜ್‌ನ ಸಿನಿ 'ವಿಕ್ರಮ್' ಸಿನಿಮಾ ನೋಡಿ ಇಡೀ ಜಗತ್ತೇ ಫಿದಾ ಆಗಿತ್ತು. ಹೀಗಿದ್ದಾಗ ಕಮಲ್ ಅವರ 'ಇಂಡಿಯಮಾವನ್ನ ತೋರಿಸಲು ಕಮಲ್ ಹಾಸನ್ ಎಂಟ್ರಿ ಕೊಟ್ಟಂತೆ ಕಾಣುತ್ತಿದ್ದು, ಕಮಲ್ ಅಭಿನಯಿಸಿರುವ ಮುಂಬರುವ 'ಥಗ್ ಲೈಫ್' ಚಿತ್ರದ ವಿಡಿಯೋ ಝಲಕ್ ಸಿನಿ ಇಂಡಸ್ಟ್ರಿ ಶೇಕ್ ಮಾಡಿದೆ.

ಕಮಲ್ ಎಂಟ್ರಿಗೆ ಕಳೆದು ಹೋಗೋದು ಗ್ಯಾರಂಟಿ!
ಅಂದಹಾಗೆ ಕಮಲ್ ಹಾಸನ್ ಅಭಿಯನದ 234ನೇ ಸಿನಿಮಾಗೆ ಈಗ ಟೈಟಲ್ ಇಡಲಾಗಿದೆ. 'ಥಗ್ ಲೈಫ್' ಎಂಬ ಹೆಸರನ್ನು ಈ ಸಿನಿಮಾಗೆ ಕೊಡಲಾಗಿದ್ದು ಮೊದಲ ಲುಕ್ ನೋಡಿದ ಪ್ರೇಕ್ಷಕರು ಕಳೆದುಹೋಗಿದ್ದಾರೆ. ದಕ್ಷಿಣ ಭಾರತದ ಲೆಜೆಂಡ್ ನಿರ್ದೇಶಕ ಮಣಿರತ್ನಂ ಮತ್ತು ಕಮಲ್ ಹಾಸನ್ ಅವರ ಜುಗಲ್ ಬಂದಿ ಮತ್ತೊಮ್ಮೆ ಕಮಾಲ್ ಮಾಡಲು ಸಜ್ಜಾಗಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ದಾಖಲೆಗಳನ್ನು ನಿರ್ಮಿಸಿದ್ದ ಕಮಲ್ ಹಾಸನ್ & ಮಣಿರತ್ನಂ ಈಗ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ.
#ThugLife
— Kamal Haasan (@ikamalhaasan) November 6, 2023
https://t.co/IqKhCT3TWv#ManiRatnam @arrahman #Mahendran @bagapath @actor_jayamravi @trishtrashers @dulQuer @MShenbagamoort3 @RKFI @MadrasTalkies_ @RedGiantMovies_ @turmericmediaTM @dop007 @sreekar_prasad @anbariv #SharmishtaRoy @amritharam2 @ekalakhani… pic.twitter.com/gABxzVOcDW
'ಥಗ್ ಲೈಫ್'ಗೆ ಸ್ಟಾರ್ ನಟರ ದಂಡು!
ಕಮಲ್ ಹಾಸನ್ ಯಾವುದೇ ಸಿನಿಮಾ ಮಾಡಿದ್ರೂ ಅದಕ್ಕೆ ಒಂದು ಗತ್ತು ಇರುತ್ತೆ. ಫ್ಯಾನ್ಸ್ ಗಮನ ಸೆಳೆಯೋ ತಾಕತ್ತು ಇರುತ್ತೆ. ಇಂತಿಪ್ಪ 'ಸಕಲಕಲಾವಲ್ಲಭ' ಕಮಲ್ ಹಾಸನ್ ಈಗ ಹಾಲಿವುಡ್ ರೇಂಜ್‌ಗೆ ಸಿನಿಮಾ ತೆಗೆಯುತ್ತಿದ್ದಾರೆ. 'ಥಗ್ ಲೈಫ್'ನ ಫಸ್ಟ್ ಲುಕ್ ವಿಡಿಯೋ ನೋಡಿದರೆ ಯಾರಿಗಾದರೂ ಹೀಗೆ ಅನಿಸದೇ ಇರಲ್ಲ. ಈ ಹೊಸ ಸಿನಿಮಾ ನಿರ್ದೇಶನಕ್ಕಾಗಿ ಲೆಜೆಂಡ್ ಡೈರೆಕ್ಟರ್ ಮಣಿರತ್ನಂ ಬರ್ತಿರೋದನ್ನ ಮೊದಲೇ ಹೇಳಿದ್ದೀವಿ, ಹಾಗೇ ಸಂಗೀತ ಲೋಕದ ದಿಗ್ಗಜ ಎ.ಆರ್.ರೆಹಮಾನ್ ಕೂಡ 'ಥಗ್ ಲೈಫ್'ಗೆ ಕೈಜೋಡಿಸಿದ್ದಾರೆ. ಅಲ್ಲದೆ ಬಹುದೊಡ್ಡ ತಾರಾಬಳಗವೂ 'ಥಗ್ ಲೈಫ್' ಸಿನಿಮಾದಲ್ಲಿ ಮಿಂಚಲಿದೆ ಎಂಬ ಬ್ರೇಕಿಂಗ್ ನ್ಯೂಸ್ ಕೂಡ ಸಿಕ್ಕಿದೆ.
ಕಮಲ್ ಸಿನಿಮಾಗೆ ಕನ್ನಡಿಗರ ಸಾಥ್!
ಕೆಲ ದಿನದ ಹಿಂದಷ್ಟೆ ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಇಂಟ್ರೊ ವೀಡಿಯೋ ರಿಲೀಸ್ ಆಗಿತ್ತು. ಈಗ ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ 'ಥಗ್ ಲೈಫ್' ಸರ್ಪ್ರೈಸ್ ಸಿಕ್ಕಿದೆ. 'ಇಂಡಿಯನ್ 2' 1996ರಲ್ಲಿ ಬಂದ 'ಇಂಡಿಯನ್' ಮುಂದುವರಿದ ಭಾಗ. ಹಿಂದೆ, ಲೆಜೆಂಡ್ ಕಮಲ್ ಹಾಸನ್ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಈಗ ಮುಂದುವರಿದ ಭಾಗ ಇಂಡಿಯನ್ 2 ಅಬ್ಬರ ತೋರಿಸಲು ಸಜ್ಜಾಗಿದೆ. ಚಿತ್ರದ ಇಂಟ್ರೊ ವೀಡಿಯೋ ರಿಲೀಸ್ ಆಗಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿತ್ತು. ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳು ಭಾಷೆಯಲ್ಲಿ ನಟ ರಜನಿಕಾಂತ್ ಸೇರಿ ಹಿಂದಿಯಲ್ಲಿ ಆಮಿರ್ ಖಾನ್, ತೆಲುಗು ಭಾಷೆಯಲ್ಲಿ ರಾಜಮೌಳಿ & ಮಲಯಾಳಂನಲ್ಲಿ ಮೋಹನ್ ಲಾಲ್ ರಿಲೀಸ್ ಮಾಡಿದ್ದರು.

ಒಟ್ನಲ್ಲಿ ಕಮಲ್ ಹಾಸನ್‌ಗೆ ವಯಸ್ಸು ಅನ್ನೋದು ಕೇವಲ ಸಂಖ್ಯೆಯ ಲೆಕ್ಕವಾಗಿದೆ. ಆದ್ರೆ ಈಗಲೂ ಅದೇ ತಾಕತ್ತು ಅದೇ ಮಂದಹಾಸ ಉಳಿಸಿಕೊಂಡ ಈ ನಟ ಭಾರತೀಯ ಸಿನಿಮಾ ರಂಗವನ್ನ ಇಂದು ಮತ್ತೆ ಶೇಕ್ ಮಾಡಿದ್ದಾರೆ. ಕಮಲ್ ಹಾಸನ್ ಅಭಿನಯಿಸಿ, ಮಣಿರತ್ನಂ ನಿರ್ದೇಶನ ಮಾಡಿರುವ ಹೊಸ ಸಿನಿಮಾ ಹಾಲಿವುಡ್ ಲೆವೆಲ್‌ಗೆ ಮಿಂಚುವುದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು.












Click it and Unblock the Notifications