ಕೆಲಸ ಕಳೆದುಕೊಂಡ ಬಸ್ ಚಾಲಕಿಗೆ ಕಾರು ಕೊಡಿಸಿದ ಕಮಲ್ ಹಾಸನ್
ಕೊಯಮತ್ತೂರು, ಜೂನ್ 26: ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಪ್ರಯಾಣ ಟಿಕೆಟ್ ನೀಡಿದ ವಿವಾದದ ಹಿನ್ನೆಲೆಯಲ್ಲಿ ಕೆಲಸ ತೊರೆದ ಕೊಯಮತ್ತೂರು ಮೂಲದ ಬಸ್ ಮಹಿಳಾ ಚಾಲಕಿಗೆ ನಟ, ರಾಜಕಾರಣಿ ಕಮಲ್ ಹಾಸನ್ ಸೋಮವಾರ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿಯಾಗಿರುವ ಶರ್ಮಿಳಾ ಅವರಿಗೆ ಕಮಲ್ ಪನ್ಬಟ್ಟು ಮೈಯಮ್" (ಕಮಲ್ ಕಲ್ಚರಲ್ ಸೆಂಟರ್) ವತಿಯಿಂದ ಚಾಲಕಿ ಉದ್ಯಮಿಯಾಗಲು ನೆರವಾಗುವ ದೃಷ್ಟಿಯಿಂದ ಈ ಕಾರನ್ನು ನೀಡಲಾಗಿದೆ ಎಂದು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ವಯಸ್ಸಿನ ಮಹಿಳೆಯರಿಗೆ ಉತ್ತಮ ಉದಾಹರಣೆಯಾಗಿರುವ ಶರ್ಮಿಳಾ ಅವರ ಸುತ್ತಲಿನ ಇತ್ತೀಚಿನ ಚರ್ಚೆಯ ಬಗ್ಗೆ ನಾನು ದುಃಖಿತನಾಗಿದ್ದೆ. ಶರ್ಮಿಳಾ ಕೇವಲ ಡ್ರೈವರ್ ಆಗಿ ಉಳಿಯಬಾರದು. ಅವರು ಅನೇಕ ಶರ್ಮಿಳಾರನ್ನು ಹುಟ್ಟುಹಾಕುವುದು ನನ್ನ ನಂಬಿಕೆ. ಅವಳು ಈಗ ಕಾರನ್ನು ಬಾಡಿಗೆ ಸೇವೆಗಾಗಿ ಓಡಿಸಬಹುದು ಮತ್ತು ಉದ್ಯಮಿಯಾಗಬಹುದು ಎಂದು ಅವರು ಹೇಳಿದರು.
ಕಳೆದ ವಾರ ಚಾಲಕಿ ಶರ್ಮಿಳಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಗಾಂಧಿಪುರಂನಿಂದ ಕೊಯಮತ್ತೂರಿನ ಪೀಲಮೇಡುವಿಗೆ ಡಿಎಂಕೆ ಸಂಸದೆ ಕನಿಮೊಳಿ ಆಕೆ ಓಡಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್‌ನ ಮಹಿಳಾ ಕಂಡಕ್ಟರ್ ಒಬ್ಬರು ಸಂಸದೆ ಕನಿಮೊಳಿ ಅವರನ್ನು ಟಿಕೆಟ್ ಪಡೆಯುವಂತೆ ಅಗೌರವಿಸಿದ್ದರು. ಇದರಿಂದ ಬೇಸತ್ತ ಚಾಲಕಿ ಶರ್ಮಿಳಾ ಆಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿದ್ದಳು.
Coimbatore's first woman bus driver #Sharmila who quit her job after a controversy erupted over issuing a ticket to DMK MP Kanimozhi, has been gifted with a brand new car by MNM leader #KamalHaasan 👌 nice gesture! pic.twitter.com/vJxRlHH0Ie
— Siddarth Srinivas (@sidhuwrites) June 26, 2023
ಅಲ್ಲದೆ ಮಹಿಳಾ ಕಂಡಕ್ಟರ್ ವಿರುದ್ಧ ಬಸ್ ಮಾಲೀಕರಿಗೆ ದೂರು ನೀಡಿ ತನ್ನ ಕನಸಿನ ಕೆಲಸಕ್ಕೂ ರಾಜೀನಾಮೆ ನೀಡಿದ್ದರು. ಶರ್ಮಿಳಾ ವಿರುದ್ಧ ಮಹಿಳಾ ಕಂಡಕ್ಟರ್ ಈಕೆ ಖ್ಯಾತ ವ್ಯಕ್ತಿಗಳನ್ನು ಬಸ್‌ನಲ್ಲಿ ಪ್ರಯಾಣಿಸಲು ಆಹ್ವಾನಿಸುವ ಮೂಲಕ ಪ್ರಚಾರ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದ್ದರು.
ಆದರೆ ಶರ್ಮಿಳಾ, ಸಂಸದೆ ಕನಿಮೊಳಿ ಬರುತ್ತಾರೆ ಎಂದು ಮಾಲೀಕರಿಗೆ ತಾನು ಮೊದಲೇ ಹೇಳಿದ್ದೇ. ಆದರೆ ತನ್ನ ಸಹೋದ್ಯೋಗಿ ಸಂಸದರನ್ನು ಅವಮಾನಿಸಿರುವುದು ನನಗೆ ಬೇಸರ ತರಿಸಿದೆ. ಇದನ್ನು ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿ ರಾಜೀನಾಮೆ ನೀಡಿದ್ದಳು. ಆದರೆ ಬಸ್ ಮಾಲೀಕರು ಸಂಸದೆ ಕನಿಮೊಳಿ ಅವರ ಭೇಟಿಯ ಬಗ್ಗೆ ಮಾಹಿತಿ ನೀಡಿರಲಿಲ್ಲ. ಶರ್ಮಿಳಾ ಅವರ ಸ್ವಂತ ಇಚ್ಛೆಯ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿತ್ತು.
ಸಣ್ಣ ವಯಸ್ಸಿಗೆ ಬಸ್ ಚಾಲಕಿಯಾಗಿರುವ ಶರ್ಮಿಳಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅವರ ತಂದೆ ಕೂಡ ಬಸ್ ಚಾಲಕರಾಗಿದ್ದಾರೆ. ತಾನೂ ಕೂಡ ತಂದೆಯಂತೆ ಚಾಲಕಿಯಾಗಬೇಕು ಎಂದು ಡ್ರೈವಿಂಗ್ ಕಲಿತು ದೊಡ್ಡ ಬಸ್ ಚಾಲಯಿಸುವುದನ್ನು ಶರ್ಮಿಳಾ ಕಲಿತು ಕೆಲಸಕ್ಕೆ ಸೇರಿದ್ದರು. ಮೊದಲು ಸಣ್ಣ ಗಾಡಿಗಳನ್ನು ಓಡಿಸುತ್ತಿದ್ದ ಅವರು ಈಗ ಬಸ್‌ನಂತ ದೊಡ್ಡ ಗಾಡಿ ಓಡಿಸುತ್ತಿದ್ದರು.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications