ಕಮಲ್ ಹಾಸನ್ & ರಜನಿಕಾಂತ್ 21 ವರ್ಷಗಳ ಬಳಿಕ ಒಂದಾಗಿದ್ದು ಹೇಗೆ?
ನಟ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರ ನಡುವೆ ಎಂತಹ ಸ್ನೇಹ ಇದೆ ಅಂತಾ ಇಡೀ ಜಗತ್ತಿಗೆ ಗೊತ್ತು. ಅದ್ರಲ್ಲೂ ಇಬ್ಬರೂ ನಟರು ಒಂದು ಕಾಲದಲ್ಲಿ ಒಟ್ಟಿಗೆ ದಕ್ಷಿಣದ ಸಿನಿಮಾ ಜಗತ್ತನ್ನು ಆಳಿದ್ದವರು. ಇಬ್ಬರೂ ಒಂದೇ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಆದರೆ ಇದೀಗ ಬರೋಬ್ಬರಿ 21 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ! ಹೇಗೆ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ನಿಮ್ಮೆಲ್ಲಾ ಗೊತ್ತಿರುವಂತೆ ಕಮಲ್ ಹಾಸನ್ ಅವರ 'ಇಂಡಿಯನ್-2' ಸಿನಿಮಾ ಸೌಂಡ್‌ಗೆ ವೇದಿಕೆ ಸಜ್ಜಾಗಿದೆ. 1996 ರಲ್ಲಿ ನಟ ಕಮಲ್ ಹಾಸನ್ 'ಇಂಡಿಯನ್ 1' ಮೂಲಕ ಇಟ್ಟಿದ್ದ ಹವಾ ಇಂದಿಗೂ ಕಡಿಮೆ ಆಗಿಲ್ಲ. ಹೀಗಿದ್ದಾಗ 'ಇಂಡಿಯನ್ 2' ಮೂಲಕ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ ಕಮಲ್. ಅಲ್ಲದೆ ತಮ್ಮ ಶೂಟಿಂಗ್‌ನಲ್ಲಿ ಅವರು ಫುಲ್ ಬ್ಯುಸಿ. ಆದರೆ ಇದೇ ಸಮಯದಲ್ಲಿ 21 ವರ್ಷಗಳ ಬಳಿಕ ಶೂಟಿಂಗ್ ಜಾಗದಲ್ಲಿ ಗೆಳೆಯನ ತಬ್ಬಿ, ಪ್ರೀತಿ ಹಂಚಿಕೊಂಡಿದ್ದಾರೆ.

ಕಮಲ್ & ರಜನಿಕಾಂತ್ ಬಾಂಡಿಂಗ್ ಹೀಗಿದೆ!
ಅಷ್ಟಕ್ಕೂ 'ಅಪೂರ್ವ ರಾಗಂಗಳ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ರಜನಿಕಾಂತ್ & ಕಮಲ್ ಮುಂದೆ ಬೇರೆ ಬೇರೆ ಗುರಿ ಹಿಡಿದು ಹೊರಟರು. ಆದ್ರೆ ಈಗ ಮತ್ತೊಮ್ಮೆ ಇವರಿಬ್ಬರು ಸೇರಿ ಸಿನಿಮಾ ಮಾಡಲಿ ಅನ್ನೋದೆ ಅಭಿಮಾನಿಗಳ ಆಸೆ. ಹೀಗಿದ್ದಾಗ ಬರೋಬ್ಬರಿ 20 ವರ್ಷದ ನಂತರ ರಜನಿಕಾಂತ್ & ಕಮಲ್ ಹಾಸನ್ ಸಿನಿಮಾ ಸೆಟ್‌ನಲ್ಲಿ ಭೇಟಿ ಆಗಿದ್ದಾರೆ. ಫೋಟೋಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ. ಹಾಗಾದರೆ ಈ ಅಪೂರ್ವ ಸಂಗಮ ಆಗಿದ್ದು ಹೇಗೆ? ಹಿಂದೆ ಯಾವಾಗ ಇಬ್ಬರೂ ಭೇಟಿ ಆಗಿದ್ದರು? ಮುಂದೆ ಓದಿ.
ಇಬ್ಬರು ಭೇಟಿ ಆಗಿದ್ದು ಹೇಗೆ?
ಇನ್ನು ಹೀಗೆ ಬರೋಬ್ಬರಿ 21 ವರ್ಷಗಳ ಬಳಿಕ ಸೂಪರ್ ಸ್ಟಾರ್‌ಗಳಿಬ್ಬರು ಒಟ್ಟಿಗೆ ಕೆಲವೊತ್ತು ಸಿನಿಮಾ ಸೆಟ್‌ನಲ್ಲಿ ಕಾಲ ಕಳೆದಿದ್ದಾರೆ. ರಜನಿಕಾಂತ್ ತಮ್ಮ 170ನೇ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿಯೇ ಕಮಲ್ ಹಾಸನ್ ಇದೀಗ 'ಇಂಡಿಯನ್ -2' ಚಿತ್ರದ ಶೂಟಿಂಗ್ ಮಾಡುತ್ತಾ ಅದರಲ್ಲೇ ಮಗ್ನರಾಗಿದ್ದಾರೆ. ಹೀಗಿದ್ದಾಗ ಒಂದೇ ಸ್ಟುಡಿಯೋದಲ್ಲಿ 2 ಸಿನಿಮಾದ ಚಿತ್ರೀಕರಣ ಇದ್ದ ಕಾರಣ ಬಿಡುವಿನ ಸಮಯದಲ್ಲಿ ಕಮಲ್ ಹಾಸನ್ ಹಾಗೂ ರಜನಿ ಮೀಟ್ ಮಾಡಿದ್ದಾರೆ.
2002ರಲ್ಲಿ ಇಬ್ಬರ ಭೇಟಿ ಆಗಿತ್ತು
ಇದೀಗ ದಕ್ಷಿಣದ ಲೆಜೆಂಡ್ ನಟರು ಭೇಟಿ ಮಾಡಿರುವುದು ಜಗತ್ತಿನ ಗಮನವನ್ನು ಸೆಳೆದಿದೆ. ಈ ಸಮಯದಲ್ಲೇ ಅಭಿಮಾನಿಗಳಿಗೂ ಅವರು ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು 2002ರಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಹೀಗೆ ಒಟ್ಟಿಗೆ ಒಂದೇ ಸ್ಟುಡಿಯೋದಲ್ಲಿ ಮೀಟ್ ಮಾಡಿದ್ದರು. 2002ರಲ್ಲಿ ರಜನಿಕಾಂತ್ ಅವರ 'ಬಾಬಾ' ಸಿನಿಮಾ ಮತ್ತು ಕಮಲ್ ಹಾಸನ್ ಅವರ 'ಪಂಚತಂತಿರಂ' ಶೂಟಿಂಗ್ ಒಂದೇ ಕಡೆ ನಡೆಯವಾಗ ಭೇಟಿ ಮಾಡಿದ್ದರು.

'ಇಂಡಿಯನ್ 2' ಅಬ್ಬರಕ್ಕೆ ಕೌಂಟ್‌ಡೌನ್
ಒಂದು ಕಡೆ ರಜನಿಕಾಂತ್ ಅವ್ರು ಮತ್ತೊಂದು ಸೂಪರ್ ಹಿಟ್ ಸಿನಿಮಾಗಾಗಿ ಸಿದ್ಧತೆಯನ್ನ ನಡೆಸಿದ್ದರೆ, ಇನ್ನೊಂದ್ಕಡೆ ಕಮಲ್ ಹಾಸನ್ ಕೂಡ 'ಇಂಡಿಯನ್ 2'ಗೆ ಸಿದ್ಧವಾಗಿದ್ದಾರೆ. ಲೈಕಾ ಪ್ರೊಡಕ್ಷನ್ಸ್ & ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿ 'ಇಂಡಿಯನ್ 2' ನಿರ್ಮಾಣ ಆಗಿದೆ. ಸಿದ್ಧಾರ್ಥ್ ಸೇರಿದಂತೆ ಕಾಜಲ್, ರಾಕುಲ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಈ ಸಿನಿಮಾಗೆ ಸಾಥ್ ನೀಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಸಿನಿಮಾಗೆ ಇದೆ.












Click it and Unblock the Notifications