ರಜನಿಕಾಂತ್ 33 ಸೀಟಿಗಿಂತ ಹೆಚ್ಚು ಗೆಲ್ಲಲ್ಲ : ಇಂಡಿಯಾ ಟುಡೇ ಸಮೀಕ್ಷೆ

ನವದೆಹಲಿ, ಜನವರಿ 16 : ತಮಿಳುನಾಡಿನ ರಾಜಕೀಯ ಭವಿಷ್ಯ ನಿರ್ಧರಿಸುವ ಜನಾಭಿಪ್ರಾಯ ಸಂಗ್ರಹಿಸಿ ಸಮೀಕ್ಷಾ ವರದಿಯನ್ನು ಇಂಡಿಯಾ ಟುಡೇ ಹಾಗೂ ಕಾರ್ವಿ ಸಂಸ್ಥೆ ನೀಡಿದೆ. 235 ಅಸೆಂಬ್ಲಿ ಕ್ಷೇತ್ರಗಳ ಪೈಕಿ 77 ಅಸೆಂಬ್ಲಿ ಕ್ಷೇತ್ರದ ಜನತೆಯ ಅಭಿಪ್ರಾಯ ಇದಾಗಿದೆ.

ತಮಿಳುನಾಡಿನಲ್ಲಿ ಈ ಸಮಯಕ್ಕೆ ವಿಧಾನಸಭೆ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಎಐಎಡಿಎಂಕೆ ಆಡಳಿತದಲ್ಲಿ ಬದಲಾವಣೆ ಕಾಣಬಹುದೇ? ತಮಿಳುನಾಡಿನ ನೆಚ್ಚಿನ ಮುಖ್ಯಮಂತ್ರಿ ಯಾರು?

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದಿಂದ ಬದಲಾವಣೆ ಸಾಧ್ಯವೇ? ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಇಂಡಿಯಾ ಟುಡೇ ಕಾರ್ವಿ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.

Superstar Rajinikanth's party will win 33 seats with a vote

ತಮಿಳುನಾಡಿನಲ್ಲಿ ಸದ್ಯ ಎಐಎಡಿಎಂಕೆ ಪಕ್ಷ ಅಧಿಕಾರದಲ್ಲಿದ್ದು 2021ರಲ್ಲಿ ಅವಧಿ ಮುಗಿಯಲಿದೆ. 2016ರಲ್ಲಿ ಎಐಎಡಿಎಂಕೆ ಶೇ40ರಷ್ಟು ಮತಗಳ ಪಾಲು ಗಳಿಸಿ 135 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ, ಇಂಡಿಯಾ ಟುಡೇ- ಕಾರ್ವಿ ಸಂಸ್ಥೆ ಈಗ ನಡೆಸಿರುವ ಸಮೀಕ್ಷೆಯಂತೆ ಈಗ ಚುನಾವಣೆ ನಡೆದರೆ, ಎಐಎಡಿಎಂಕೆ ಅಧಿಕಾರ ಕಳೆದುಕೊಳ್ಳಲಿದೆ.

ರಜನಿ ಕಮಾಲ್ ನಡೆಯಲ್ಲ: ರಜನಿಕಾಂತ್ ಅವರ ಹೊಸ ಪಕ್ಷ ಸ್ಥಾಪನೆಯಾಗಿಲ್ಲದ ಕಾರಣ ಈ ಸಮಯಕ್ಕೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಿಲ್ಲ. ಆದರೆ, ಶೇ16ರಷ್ಟು ಮತ ಪಾಲು ಹೊಂದುವ ಮೂಲಕ ದೊಡ್ಡ ಪಕ್ಷಗಳಿಗೆ ಎಚ್ಚರಿಕೆ ಗಂಟೆ ನೀಡಲಿದೆ. ಸರಿ ಸುಮಾರು 33 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ರಜನಿಕಾಂತ್ ಅವರು ತಮಿಳು ಮೂಲದವರಲ್ಲ ಎಂಬ ಅಂಶವು ಮತದಾರರ ಮೇಲೆ ಪ್ರಭಾವ ಬೀರಬಲ್ಲದು.

ಯೂನಿವರ್ಸಲ್ ಸ್ಟಾರ್ ಕಮಲ್ ಅವರ ರಾಜಕೀಯ ಆಸಕ್ತಿಯನ್ನು ಜನತೆ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ರಜನಿ ಹಾಗೂ ಕಮಲ್ ಕೈಜೋಡಿಸಿದರೂ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಿಲ್ಲ ಎಂದು ಸಮೀಕ್ಷೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+