‘ಸಕಲಕಲಾವಲ್ಲಭ’ ಕಮಲ್ ಹಾಸನ್ ಜೊತೆಗೆ ಕನ್ನಡಿಗ ಕಿಚ್ಚ ಸುದೀಪ್!

ಕಮಲ್ ಹಾಸನ್ ಸಿನಿಮಾಗಳು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಈಗಿನ ಕಾಲದ ಹುಡುಗರಿಂದ ಹಿಡಿದು, ಆಗಿನ ಕಾಲದ ಅಂಕಲ್ಸ್ ತನಕ ಕಮಲ್ ಹಾಸನ್ ಸಿನಿಮಾಗಳಿಗೆ ಎಲ್ಲರೂ ಫಿದಾ ಆಗುತ್ತಾರೆ. ಅದರಲ್ಲೂ ಕಳೆದ ವರ್ಷ ರಿಲೀಸ್ ಆಗಿದ್ದ 'ವಿಕ್ರಂ' ಸಿನಿಮಾ ಬಾಕ್ಸ್ ಆಫಿಸ್ ಅಖಾಡದಲ್ಲಿ ಅಬ್ಬರಿಸಿ ಇತಿಹಾಸ ನಿರ್ಮಿಸಿದೆ. ಒಂದು ಅಂದಾಜಿನ ಪ್ರಕಾರ 'ವಿಕ್ರಂ' ₹500 ಕೋಟಿ ಕ್ಲಬ್ ಸೇರಿದೆ. ಹೀಗಿದ್ದಾಗ ಕನ್ನಡಿಗರೊಬ್ಬರು ಕಮಲ್ ಹಾಸನ್‌ಗೆ ಸಾಥ್ ನೀಡುತ್ತಿದ್ದಾರೆ.

ಹೌದು, ನಟ ಕಮಲ್ ಹಾಸನ್ ಮತ್ತೆ ಅಬ್ಬರಿಸುತ್ತಿದ್ದಾರೆ. ಈಗಿನ ಕಾಲದ ಹೀರೋಗಳಿಗೂ ಟಕ್ಕರ್ ಕೊಡುವ ರೀತಿ ಕಮಲ್ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿವೆ. ಹೀಗೆ ಈಗ ಮತ್ತೊಂದು ಬಹುನಿರೀಕ್ಷಿತ ಚಿತ್ರದ ಮೂಲಕ ಅಬ್ಬರಿಸಲು ಕಮಲ್ ಹಾಸನ್ ಸಜ್ಜಾಗಿದ್ದು, ಈ ಸಿನಿಮಾಗೆ ಕನ್ನಡಿಗ ಕೂಡ ಸಾಥ್ ನೀಡ್ತಿದ್ದಾರೆ ಅನ್ನೋದೆ ವಿಶೇಷ. ಹಾಗಾದರೆ ಇದೀಗ 'ಸಕಲಕಲಾವಲ್ಲಭ' ಕಮಲ್ ಹಾಸನ್ ಜೊತೆ ನಿಲ್ಲುತ್ತಿರುವ ಆ ಕನ್ನಡಿಗ ಯಾರು? ಅವರು ನಿಮಗೂ ಚಿರಪರಿಚಿತರು, ಈ ಕುರಿತು ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Kannada Star Kiccha Sudeep Will Join Hands To Kamal Haasan Movie

ಕಮಲ್‌ಗೆ ಕನ್ನಡಿಗ ಕಿಚ್ಚ ಸುದೀಪ್ ಸಾಥ್!

ಅಂದಹಾಗೆ ಭಾರತ ಚಿತ್ರರಂಗದ ಖ್ಯಾತ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ, ಬಹು ನಿರೀಕ್ಷಿತ ಸಿನಿಮಾ 'ಇಂಡಿಯನ್ 2' ರಿಲೀಸ್‌ಗೆ ರೆಡಿಯಾಗುತ್ತಿದೆ. ಹಾಗೇ ಈ ಹಿಂದೆ 1996 ರಲ್ಲಿ ನಟ ಕಮಲ್ ಹಾಸನ್, 'ಇಂಡಿಯನ್ 1' ಮೂಲಕ ಅಬ್ಬರಿಸಿದ್ದರು. ಅಲ್ಲದೆ 'ಇಂಡಿಯನ್ 1' ಎಲ್ಲಾ ವಿಭಾಗದಲ್ಲೂ ಹೊಸ ಇತಿಹಾಸ ಮಾಡಿತ್ತು. ಇದೀಗ 'ಇಂಡಿಯನ್ 2' ಮೂಲಕ ಮತ್ತೆ ಡೈರೆಕ್ಟರ್ ಶಂಕರ್ ಹಾಗೂ ಕಮಲ್ ಹಾಸನ್ ಜೋಡಿ ಒಂದಾಗಿದೆ. ಬಹುನಿರೀಕ್ಷಿತ ಈ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕುಳಿತಿರುವಾಗ, ಕನ್ನಡಿಗ ಕಿಚ್ಚ ಸುದೀಪ್ ಕೂಡ ಕಮಲ್ ಅವರ ಸಿನಿಮಾಗೆ ಸಾಥ್ ಕೊಡುತ್ತಿದ್ದಾರೆ.

ಅಷ್ಟಕ್ಕೂ ನಾಳೆ 'ಇಂಡಿಯನ್ 2' ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಲಿದ್ದು, ಜಗತ್ತಿನ ಮೂಲೆ ಮೂಲೆಯಲ್ಲೂ ಈ ಬಗ್ಗೆ ಕ್ರೇಜ್ ಕ್ರಿಯೇಟ್ ಆಗಿದೆ. ಕಮಲ್ ಹಾಸನ್‌ಗೆ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಭಾರಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಈ ಎಲ್ಲಾ ಅಭಿಮಾನಿಗಳು ಈಗ 'ಇಂಡಿಯನ್ 2' ಚಿತ್ರದ ಫಸ್ಟ್ ಗ್ಲಿಂಪ್ಸ್ ನೋಡಲು ಕಾಯ್ತಾ ಇದ್ದಾರೆ. ಹೀಗೆ ಮೊದಲಿಗೆ ಒಂದು ಝಲಕ್ ತೋರಿಸಲು ಚಿತ್ರತಂಡ ಸಜ್ಜಾಗಿದೆ.

ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದು ಏಕೆ?

ಮೊದಲೇ ಹೇಳಿದಂತೆ, 'ಇಂಡಿಯನ್ 2' 1996ರಲ್ಲಿ ಬಂದ 'ಇಂಡಿಯನ್' ಮುಂದುವರಿದ ಭಾಗ. ಲೆಜೆಂಡ್ ಕಮಲ್ ಹಾಸನ್ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಈಗ ಆ ಸಿನಿಮಾದ ಮುಂದುವರಿದ ಭಾಗ ಇಂಡಿಯನ್ 2 ಅಬ್ಬರಿಸಲು ಸಜ್ಜಾಗಿದೆ. ಇನ್ನು ಈ ಚಿತ್ರದ ಇಂಟ್ರೋ ವೀಡಿಯೋ ನಾಳೆ ರಿಲೀಸ್ ಆಗ್ತಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿ ಭಾಷೆಯಲ್ಲಿ ಆಮಿರ್ ಖಾನ್ ರಿಲೀಸ್ ಮಾಡುತ್ತಿದ್ದಾರೆ. ಹಾಗೆ ತೆಲುಗು ಭಾಷೆಯಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಡಿಯನ್-2 ಸಿನಿಮಾಗೆ ಸಾಥ್ ನೀಡಿ ಕಮಲ್ ಹಾಸನ್‌ಗೆ ಜೊತೆಯಾಗುತ್ತಿದ್ದಾರೆ.

Kannada Star Kiccha Sudeep Will Join Hands To Kamal Haasan Movie

ಇನ್ನು ಲೈಕಾ ಪ್ರೊಡಕ್ಷನ್ಸ್ & ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ 'ಇಂಡಿಯನ್ 2' ನಿರ್ಮಾಣವಾಗಿದ್ದು, ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಕ್ಯಾಮರಾ ವರ್ಕ್ ಈ ಸಿನಿಮಾಗೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+