ಕಮಲ್ ಹಾಸನ್ ‘ಇಂಡಿಯನ್-2’ ಅಬ್ಬರ ಶುರು: ಕಿಚ್ಚ ಸುದೀಪ್ ಹೇಳಿದ್ದೇನು?
ಭಾರತ ಚಿತ್ರರಂಗದ ಲೆಜೆಂಡ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ, ಬಹು ನಿರೀಕ್ಷಿತ ಸಿನಿಮಾ 'ಇಂಡಿಯನ್ 2' ರಿಲೀಸ್‌ಗೆ ರೆಡಿಯಾಗಿದೆ. 1996 ರಲ್ಲಿ ನಟ ಕಮಲ್ ಹಾಸನ್ 'ಇಂಡಿಯನ್ 1' ಮೂಲಕ ಅಬ್ಬರಿಸಿದ್ದರು. ಇಂಡಿಯನ್-1 ಎಲ್ಲಾ ವಿಭಾಗದಲ್ಲೂ ದಾಖಲೆ ನಿರ್ಮಿಸಿತ್ತು. ಈಗ 'ಇಂಡಿಯನ್ 2' ಮೂಲಕ ಮತ್ತೆ ಡೈರೆಕ್ಟರ್ ಶಂಕರ್ ಹಾಗೂ ಕಮಲ್ ಹಾಸನ್ ಜೋಡಿ ಒಂದಾಗಿದ್ದು, ಇವತ್ತು ರಿಲೀಸ್ ಆಗಿರುವ ಇಂಟ್ರೊ ಹೇಗಿದೆ ಗೊತ್ತಾ?
ಕಮಲ್ ಹಾಸನ್ ಸಿನಿಮಾಗಳು ಅಂದರೆ ಅದರ ಕ್ರೇಜ್ ನೆಕ್ಸ್ಟ್ ಲೆವೆಲ್. ಅದರಲ್ಲೂ 1996 ರಲ್ಲಿ ನಟ ಕಮಲ್ ಹಾಸನ್ 'ಇಂಡಿಯನ್ 1' ಮೂಲಕ ಇಟ್ಟಿದ್ದ ಹವಾ ಇಂದಿಗೂ ಕಡಿಮೆ ಆಗಿಲ್ಲ. ಹೀಗಿದ್ದಾಗ ಇವತ್ತು ರಿಲೀಸ್ ಆದ 'ಇಂಡಿಯನ್ 2' ಇಂಟ್ರೊ, ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಅದ್ರಲ್ಲೂ ಕಮಲ್ ಹಾಸನ್ ಅವರ ಅಭಿಮಾನಿಗಳು ಈ ಇಂಟ್ರೊ ಕಣ್ತುಂಬಿಕೊಂಡು ಫಿದಾ ಆಗಿದ್ದಾರೆ. ಇನ್ನು ವಿವಿಧ ಭಾಷೆಯಲ್ಲಿ ಸ್ಟಾರ್ಸ್ 'ಇಂಡಿಯನ್ 2' ಇಂಟ್ರೊ ರಿಲೀಸ್ ಮಾಡಿದ್ದು, ಕನ್ನಡದಲ್ಲಿ ರಿಲೀಸ್ ಮಾಡಿದ್ದು ಯಾರು ಗೊತ್ತಾ?

ಕನ್ನಡದಲ್ಲಿ ಕಿಚ್ಚ ಸುದೀಪ್ ಸಾಥ್!
'ಇಂಡಿಯನ್ 2' 1996ರಲ್ಲಿ ಬಂದ 'ಇಂಡಿಯನ್' ಮುಂದುವರಿದ ಭಾಗ. ಲೆಜೆಂಡ್ ಕಮಲ್ ಹಾಸನ್ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಈಗ ಮುಂದುವರಿದ ಭಾಗ ಇಂಡಿಯನ್ 2 ಅಬ್ಬರ ತೋರಿಸಲು ಸಜ್ಜಾಗಿದೆ. ಚಿತ್ರದ ಇಂಟ್ರೊ ವೀಡಿಯೋ ಇಂದು ರಿಲೀಸ್ ಆಗಿದ್ದು, ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳು ಭಾಷೆಯಲ್ಲಿ ರಜನಿಕಾಂತ್ ಹಾಗೂ ಹಿಂದಿಯಲ್ಲಿ ಆಮಿರ್ ಖಾನ್, ತೆಲುಗು ಭಾಷೆಯಲ್ಲಿ ರಾಜಮೌಳಿ & ಮಲಯಾಳಂನಲ್ಲಿ ಮೋಹನ್ ಲಾಲ್ ರಿಲೀಸ್ ಮಾಡಿ ಕಮಲ್ ಸಿನಿಮಾಗೆ ಸಾಥ್ ನೀಡಿದ್ದಾರೆ.
Namaskara India 🙏🏻 INDIAN IS BACK🫡
— Kichcha Sudeepa (@KicchaSudeep) November 3, 2023
Presenting INDIAN-2 AN INTRO 🤞🏻 https://t.co/ASwxg7bjrN#Indian2 🇮🇳 Ulaganayagan @ikamalhaasan @shankarshanmugh @anirudhofficial @dop_ravivarman @sreekar_prasad @muthurajthangvl @LycaProductions #Subaskaran @RedGiantMovies @gkmtamilkumaran… pic.twitter.com/XDWMV3maUI
ಹೇಗಿದೆ 'ಇಂಡಿಯನ್ 2' ತಾರಾ ಬಳಗ?
ಲೈಕಾ ಪ್ರೊಡಕ್ಷನ್ಸ್ & ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿ 'ಇಂಡಿಯನ್ 2' ನಿರ್ಮಾಣ ಆಗಿದೆ. ಸಿದ್ಧಾರ್ಥ್ ಸೇರಿದಂತೆ ಕಾಜಲ್, ರಾಕುಲ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಈ ಸಿನಿಮಾಗೆ ಸಾಥ್ ನೀಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಸಿನಿಮಾಗೆ ಇದೆ.
ಒಟ್ನಲ್ಲಿ ಕಮಲ್ ಹಾಸನ್ ಮತ್ತೊಂದು ಇಂಡಸ್ಟ್ರಿ ಹಿಟ್ ಸಿನಿಮಾವನ್ನ ಕೊಡಲು ಸಜ್ಜಾಗಿ ನಿಂತಿದ್ದಾರೆ. ಅದರಲ್ಲೂ ಇದೀಗ ರಿಲೀಸ್ ಆಗಿರುವ ಇಂಟ್ರೊ ನೋಡಿದರೆ, ಈ ಸಿನಿಮಾಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಡುವುದು ಗ್ಯಾರಂಟಿ. ಹೀಗಾಗಿ 'ಇಂಡಿಯನ್ 2' ಸಿನಿಮಾದ ಮೇಲೆ ಇದ್ದ ನಿರೀಕ್ಷೆಗಳು ಇದೀಗ ದುಪ್ಪಟ್ಟಾಗಿವೆ ಎನ್ನಬಹುದು. ಕನ್ನಡದಲ್ಲಿ ಕೂಡ ಈಗ 'ಇಂಡಿಯನ್ 2' ಇಂಟ್ರೊ ರಿಲೀಸ್ ಆಗಿದ್ದು, ಯುಟ್ಯೂಬ್‌ನಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications