ಹುಟ್ಟೂರು ಹಾಲಹಳ್ಳಿಯಲ್ಲಿ ಮಹದೇವಪ್ರಸಾದ್ ಅಂತ್ಯಕ್ರಿಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ 3 : ಹೃದಯಘಾತದಿಂದ ಮಂಗಳವಾರ ಕೊನೆಯುಸಿರೆಳೆದಿರುವ ಸಹಕಾರ ಸಚಿವ ಎಚ್. ಎಸ್ ಮಹದೇವ್ ಪ್ರಸಾದ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಹಾಲಹಳ್ಳಿಯಲ್ಲಿರುವ ತೋಟದಲ್ಲಿ ಬುಧವಾರ ನಡೆಯಲಿದೆ.

ಪಾರ್ಥಿವ ಶರೀರವನ್ನ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತರಲಾಗುತ್ತಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಮೈಸೂರಿನ ಮನೆಗೆ ತಂದು, ನಂತರ 5 ಗಂಟೆಗೆ ಮಹದೇವ ಪ್ರಸಾದ್ ಅವರ ಹುಟ್ಟೂರು ಗುಂಡ್ಲುಪೇಟೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲು ಸಕಲ ಸಿದ್ಧತೆ ನಡೆಸುತ್ತಿದೆ ಜಿಲ್ಲಾಡಳಿತ..[ವ್ಯಕ್ತಿಚಿತ್ರ : ಸಜ್ಜನ ರಾಜಕಾರಣಿ ಎಚ್ ಎಸ್ ಮಹದೇವ ಪ್ರಸಾದ್]

Last rites of Mahadeva Prasad in Halahalli, Chamarajanagar

ಸದ್ಯ ಕೊಪ್ಪದ ಸೆರಾಯ್ ರೆಸಾರ್ಟ್ನಿಂದ ಪಾರ್ಥೀವ ಶರೀರ ರವಾನೆಯಾಗಿದ್ದು, ರೆಸಾರ್ಟ್ ಸುತ್ತ ಪೊಲೀಸ್ ಭದ್ರತೆ ವಹಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಮೈಸೂರಿನ ಮನೆಗೆ ಮಹದೇವ್ ಪ್ರಸಾದ್ ಅವರ ಪಾರ್ಥೀವ ಶರೀರ ತರಲಿದ್ದು, ಬುಧವಾರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.. ಇನ್ನು ಮೈಸೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಮಹದೇವಪ್ರಸಾದ್ ಅವರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.

ವೀರಶೈವ ಪರಂಪರೆಯಂತೆ ಅಂತಿಮ ವಿಧಿವಿಧಾನಕ್ಕಾಗಿ ಹುಟ್ಟೂರು ಹಾಲಹಳ್ಳಿಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಮಹದೇವಪ್ರಸಾದ್ ಅವರಿಗೆ 2004ರಲ್ಲಿ ಬೈಪಾಸ್ ಸರ್ಜರಿ, 2016ರಲ್ಲಿ ಆಂಜಿಯೋಪ್ಲಾಸ್ಟಿ ನಡೆಸಲಾಗಿತ್ತು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Popular leader HS Mahadeva Prasad will be buried at his native place Halahalli in Gundlupet taluk in Chamarajanagar district on 4th January, 2017. He died of heart attack on Tuesday in Bengaluru.
Please Wait while comments are loading...