Hevay Rain: ಬಿರುಗಾಳಿ ಮಳೆಗೆ ನೆಲ ಕಚ್ಚಿದ ಬಾಳೆ, ಟೊಮೆಟೊ

ಚಾಮರಾಜನಗರ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಗಡಿಜಿಲ್ಲೆಯ ಹಲವು ಗ್ರಾಮಗಳು ಗುರುವಾರ ಸಂಜೆ ಮೊದಲ ಮಳೆಯ ಖುಷಿ ಕಂಡಿದ್ದಾರೆ. ಜೊತೆಗೆ, ಬೀಸಿದ ಬಿರುಗಾಳಿಗೆ ಸಂಕಷ್ಟವೂ ಎದುರಾಗಿದೆ.

ಚಾಮರಾಜನಗರ ತಾಲೂಕಿನ ಮಂಗಲ, ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಹನೂರು ತಾಲೂಕಿನ ಅಜ್ಜಿಪುರ ಗ್ರಾಮಗಳ ಸುತ್ತಮುತ್ತ ಗುಡುಗಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದೆ.

First Rains in Many Parts of Chamarajanagar District Impact Ground Banana and Tomato Crops

ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಪಚ್ಚೇಗೌಡನದೊಡ್ಡಿ ಗ್ರಾಮದ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಭಾರಿ ಗಾಳಿಗೆ ಅಪಾರ ಬೆಳೆ ಹಾನಿಯಾಗಿದೆ. ದೊಮ್ಮನಗದ್ದೆ ಗ್ರಾಮದ ಶಿವರಾಜ್ ಎಂಬುವವರ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ.

ಪಚ್ಚೆಗೌಡನದೊಡ್ಡಿ ಗ್ರಾಮದ ರೈತ ಸಂಪತ್ ಕುಮಾರ್ ಅವರ ಜಮೀನಿನ 3500 ನೇಂದ್ರ ಬಾಳೆ ಭಾರಿ ಬಿರುಗಾಳಿಗೆ ನೆಲಕಚ್ಚಿದೆ, ರವಿಕುಮಾರ್ ಎಂಬ ರೈತರ ಜಮೀನಿನಲ್ಲಿ 1500 ಬಾಳೆ, ರಾಜೇಂದ್ರ ಎಂಬ ರೈತರ ಜಮೀನಿನಲ್ಲಿ 1800 ಬಾಳೆ, ಮಾದೇಗೌಡ ಎಂಬಾತ ಬೆಳೆದಿದ್ದ 1000 ನೇಂದ್ರ ಬಾಳೆ, ಚಿಗತಾಪುರ ಗ್ರಾಮದ ರಂಗಸ್ವಾಮಿ ಎಂಬಬರು ಬೆಳೆದಿದ್ದ 1500 ನೇಂದ್ರ ಬಾಳೆ ಭಾರಿಗಾಳಿಗೆ ನೆಲಕಚ್ಚಿದೆ.

First Rains in Many Parts of Chamarajanagar District Impact Ground Banana and Tomato Crops

ಇನ್ನು, ಅಜ್ಜಿಪುರ ಗ್ರಾಮದ ಶ್ರೀರಂಗ ಎಂಬವರು ಬೆಳೆದಿದ್ದ ಟೊಮೊಟೊ ಗಾಳಿ-ಮಳೆಗೆ ಉದುರಿಹೋಗಿದೆ.

ಮೈಸೂರು, ಮಂಡ್ಯ ಜಿಲ್ಲೆಯಲ್ಲೂ ಮಳೆ

ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೂಡ ಗುರುವಾರ ಉತ್ತಮ ಮಳೆಯಾಗಿದೆ. ಮಂಡ್ಯದಲ್ಲಿ ವರ್ಷದ ಮೊಲದ ಮಳೆಯಾಗಿದ್ದು ರಾತ್ರಿ ವೇಳೆಗೆ ಮಳೆ ಹೆಚ್ಚು ಬಿರುಸು ಪಡೆಯುವ ಸಾಧ್ಯತೆ ಇದೆ. ಮೈಸೂರು ನಗರದಲ್ಲಿ ಕೂಡ ವರ್ಷದ ಮೊದಲ ಮಳೆ ಬಿದ್ದಿದ್ದು ಜನ ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+