ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಲ್ ಅಂಬಾನಿಯ ಆರ್ ಕಾಮ್ ಕಂಪನಿ 144 ಬ್ಯಾಂಕ್ ಖಾತೆಯಲ್ಲಿ ಕೇವಲ 19.34 ಕೋಟಿ

|
Google Oneindia Kannada News

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕ್ಷನ್ಸ್ ಲಿಮಿಟೆಡ್ ಹಾಗೂ ಅದರ ಘಟಕವಾಗಿರುವ ರಿಲಯನ್ಸ್ ಟೆಲಿಕಾಮ್ ಲಿಮಿಟೆಡ್ ಎರಡೂ ಸೇರಿ ಇರುವ 144 ಬ್ಯಾಂಕ್ ಖಾತೆಗಳಲ್ಲಿ ಒಟ್ಟಾರೆಯಾಗಿ ಕೇವಲ 19.34 ಕೋಟಿ ರುಪಾಯಿ ಮಾತ್ರ ಇದೆ ಎಂದು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕಂಪನಿ ತಿಳಿಸಿದೆ.

ದೀಪಾವಳಿ ವಿಶೇಷ ಪುರವಣಿ

ಕಳೆದ ವರ್ಷ ಅನಿಲ್ ಅಂಬಾನಿ ಒಡೆತನದ ಕಂಪನಿ ನಿಸ್ತಂತು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಅದಕ್ಕೆ ಕಾರಣವಾಗಿದ್ದು 46 ಸಾವಿರ ಕೋಟಿ ರುಪಾಯಿ ಸಾಲದ ಬಾಬ್ತು. ಜತೆಗೆ ಆದಾಯ ಕುಸಿತ ಹಾಗೂ ಹೆಚ್ಚುತ್ತಿದ್ದ ನಷ್ಟ. ಅಮೆರಿಕನ್ ಟವರ್ ಕಾರ್ಪೊರೇಷನ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕಂಪನಿ ನೀಡಿದೆ.

ಅಂಬಾನಿಯ ವಿಮಾ ಕಂಪೆನಿಗೂ ಮೋದಿ ಸರ್ಕಾರದ ನೆರವು? ಮತ್ತೊಂದು ವಿವಾದಅಂಬಾನಿಯ ವಿಮಾ ಕಂಪೆನಿಗೂ ಮೋದಿ ಸರ್ಕಾರದ ನೆರವು? ಮತ್ತೊಂದು ವಿವಾದ

ಬೋಸ್ಟನ್ ಮೂಲದ ಅಮೆರಿಕನ್ ಟವರ್ ಕಾರ್ಪೊರೇಷನ್ ಗೆ ಆರ್ ಕಾಮ್ ನಿಂದ 230 ಕೋಟಿ ರುಪಾಯಿ ಬಾಕಿ ಪಾವತಿ ಆಗಬೇಕಿದೆ. ಇದು ದಿವಾಳಿಯಾದ ಕಂಪನಿ ಎಂದು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಕೋರ್ಟ್ ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇನ್ನು ಆರ್ ಕಾಮ್ ನ 119 ಬ್ಯಾಂಕ್ ಖಾತೆಗಳಲ್ಲಿ 17.86 ಕೋಟಿ ರುಪಾಯಿ ಹಾಗೂ ಅದರ ಸಹವರ್ತಿ ಸಂಸ್ಥೆ ಆರ್ ಟಿಎಲ್ ನ 25 ಬ್ಯಾಂಕ್ ಖಾತೆಗಳಲ್ಲಿ 1.48 ಕೋಟಿ ರುಪಾಯಿ ಇರುವುದಾಗಿ ಅಫಿಡವಿಟ್ ನಲ್ಲಿ ಕಂಪನಿ ಕೋರ್ಟ್ ಗೆ ತಿಳಿಸಿದೆ.

RCom, Reliance Telecom have just Rs 19 crore in 144 bank accounts

ಅಕ್ಟೋಬರ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಎರಡೂ ಕಂಪನಿಗಳ ಬ್ಯಾಂಕ್ ಖಾತೆ ವಿವರಗಳನ್ನು ನೀಡಲು ಕಾಲಾವಕಾಶ ಕೋರಲಾಗಿದೆ. ಮುಂದಿನ ವಿಚಾರಣೆ ಡಿಸೆಂಬರ್ ಹದಿಮೂರನೇ ತಾರೀಕು ನಡೆಯಲಿದೆ. ಕಳೆದ ಡಿಸೆಂಬರ್ ನಲ್ಲಿ ನಿಸ್ತಂತು ಸೇವೆ ನಿಲ್ಲಿಸಿದ ಆರ್ ಕಾಮ್, ಆರ್ ಟಿಎಲ್ ನಿಂದ ಟವರ್ ಕಂಪನಿಗೆ ನಿರ್ಗಮಿತ ಶುಲ್ಕ ಹಾಗೂ ಸೇವಾ ಶುಲ್ಕದ ಬಾಬ್ತಿನಲ್ಲಿ 230 ಕೋಟಿ ರುಪಾಯಿ ಪಾವತಿ ಮಾಡಬೇಕಿದೆ.

ಅನಿಲ್ ನೆರವಿಗೆ ಮುಖೇಶ್ ಅಂಬಾನಿ, ದೊಡ್ಡ ವ್ಯವಹಾರದ 10 ಅಂಶಗಳುಅನಿಲ್ ನೆರವಿಗೆ ಮುಖೇಶ್ ಅಂಬಾನಿ, ದೊಡ್ಡ ವ್ಯವಹಾರದ 10 ಅಂಶಗಳು

ಎರಡೂ ಕಂಪನಿಗಳ ವಿರುದ್ಧ ಟವರ್ ಕಂಪನಿ ಕಳೆದ ಫೆಬ್ರವರಿಯಲ್ಲಿ ಹೈ ಕೋರ್ಟ್ ಮೆಟ್ಟಿಲೇರಿತ್ತು. ಬಾಕಿ ಮೊತ್ತಕ್ಕೆ ಶ್ಯೂರಿಟಿಗಾಗಿ ಮನವಿ ಮಾಡಿತ್ತು. ಆದರೆ ಆರ್ ಕಾಮ್ ಗೆ ನವೆಂಬರ್ ಒಂದನೇ ತಾರೀಕು ಎಲ್ಲ ಪಾವತಿಯಿಂದ ತಡೆಯಾಜ್ಞೆ ಸಿಕ್ಕಿದೆ. ಸುಪ್ರೀಂ ಕೋರ್ಟ್ ಈ ವಿಚಾರಣೆಯಲ್ಲಿ ಕೈಗೆತ್ತಿಕೊಳ್ಳುವ ತನಕ ಅವಕಾಶ ಇದೆ ಎಂದು ತಿಳಿದುಬಂದಿದೆ.

English summary
Reliance Communications Ltd and its unit Reliance Telecom Ltd have only Rs 19.34 crore in their combined 144 bank accounts, the companies said in affidavits submitted to the Delhi High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X