Year End Special: 2022ರಲ್ಲಿ ಸದ್ದು ಮಾಡಿ ಸುದ್ದಿಯಾದ ಅಂಬಾನಿ ಫ್ಯಾಮಿಲಿ
ಮುಂಬೈ, ಡಿಸೆಂಬರ್ 21: ಭಾರತದಲ್ಲಿ ಅಂಬಾನಿ ಕುಟುಂಬವು ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತದೆ. ಅದೇ ರೀತಿ 2022ರಲ್ಲಿ ಇದೇ ಅಂಬಾನಿ ಕುಟುಂಬವು ಹಲವು ಘಟನೆಗಳು ಮತ್ತು ಘೋಷಣೆಗಳಿಂದ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು.
ರಾಧಿಕಾ ಮರ್ಚೆಂಟ್‌ಗಾಗಿ ಅಂಬಾನಿಗಳು ಆರಂಗೇತ್ರಂ ಸಮಾರಂಭವನ್ನು ಆಯೋಜಿಸಿದ್ದು, ಜೈ ಅನ್ಮೋಲ್ ಅಂಬಾನಿ ಕ್ರಿಶಾ ಶಾ ಅವರ ವಿವಾಹ, ಇಶಾ ಅಂಬಾನಿ ಮತ್ತು ಅನಂತ್ ಪಿರಮಾಲ್ ದಂಪತಿಗೆ ಅವಳಿ ಮಕ್ಕಳ ಜನನ, ಮುಖೇಶ್ ಅಂಬಾನಿ ರಿಲಯನ್ಸ್‌ನ ಉತ್ತರಾಧಿಕಾರ ಯೋಜನೆ ಹಾಗೂ ಅನಂತ್ ಅಂಬಾನಿ ಸಾಯಿ ಮಂದಿರಕ್ಕೆ 1.5 ಕೋಟಿ ದೇಣಿಗೆ ನೀಡಿದ್ದು ಸೇರಿದಂತೆ ಹಲವು ಬೆಳವಣಿಗೆಗಳು ನಡೆದವು.
ಅದೇ ರೀತಿ 2022ರ ವರ್ಷವೂ ಅಂಬಾನಿಗಳು ಕೆಲವು ವಿಶೇಷ ಘಟನೆಗಳ ಮೂಲಕ ಗಮನ ಸೆಳೆದರು. 2023ಕ್ಕೆ ಪದಾರ್ಪಣೆ ಮಾಡುವುದಕ್ಕೂ ಪೂರ್ವದಲ್ಲಿ ಅಂಬಾನಿಗಳು ಗಮನ ಸೆಳೆಯಲು ಕಾರಣಗಳೇನು? ಅಂಬಾನಿ ಮನೆತನದಲ್ಲಿ ನಡೆದ ಬೆಳವಣಿಗೆಗಳೇನು? ಜಗತ್ತಿನ ಬಿಗ್ ಬಿಜಿನೆಸ್ ಮ್ಯಾನ್ ಮನೆತನವು ಏನೆಲ್ಲಾ ಘೋಷಣೆಗಳನ್ನು ಮಾಡಿತು ಎಂಬುದು ಸೇರಿದಂತೆ ಹಲವು ವಿಷಯಗಳಲ್ಲಿ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ರಾಧಿಕಾ ಮರ್ಚೆಂಟ್‌ಗಾಗಿ ಆರಂಗೇತ್ರಂ ಕಾರ್ಯಕ್ರಮ
ಅನಿಲ್ ಅಂಬಾನಿ ತಮ್ಮ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌ಗಾಗಿ ರಂಗೇತ್ರಂ ಸಮಾರಂಭವನ್ನು ಆಯೋಜಿಸಿತ್ತು. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿಗೆ ನಿಶ್ಚಯಿಸಿದ ವಧುವೇ ರಾಧಿಕಾ ಮರ್ಚೆಂಟ್. ಭಾವಿ ಸೊಸೆಗಾಗಿ ಆಯೋಜಿಸಿ ಸಮಾರಂಭವು ಶಾಸ್ತ್ರೀಯ ಭರತನಾಟ್ಯ ನೃತ್ಯದಲ್ಲಿ ತರಬೇತಿ ಪಡೆದ ನರ್ತಕರ ರಂಗಪ್ರವೇಶವನ್ನು ಸೂಚಿಸಿತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ್ ಖಾನ್, ಅಮೀರ್ ಖಾನ್, ರಣವೀರ್ ಸಿಂಗ್ ಸೇರಿದಂತೆ ಎ-ಲಿಸ್ಟ್ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರು. ಇದರ ಮಧ್ಯೆ ನೀತಾ ಅಂಬಾನಿ ಕೂಡ ತರಬೇತಿ ಪಡೆದ ಭರತನಾಟ್ಯ ನರ್ತಕಿ ಆಗಿದ್ದು, ಆಗಾಗ್ಗೆ ಕುಟುಂಬ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಾರೆ.

ಜೈ ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಶಾ ಮದುವೆ
ಮುಂಬೈನಲ್ಲಿ ನಡೆದ ಕನಸಿನ ಮದುವೆ ಸಮಾರಂಭದಲ್ಲಿ ಜೈ ಅನ್ಮೋಲ್ ಅಂಬಾನಿ, ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಅವರ ಹಿರಿಯ ಮಗ ಕ್ರಿಶಾ ಶಾ ಅವರನ್ನು ವಿವಾಹವಾದರು. ಈ ದಂಪತಿಗಳು 2021ರಲ್ಲಿ ನಿಕಟ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಶಾ ವಿವಾಹವು ಅದ್ಧೂರಿ ಕಾರ್ಯಕ್ರಮವಾಗಿ ಮಿಂಚಿದ್ದು, ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರಂತಹ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅನ್ಮೋಲ್ ಅಂಬಾನಿ ತಮ್ಮ ಕುಟುಂಬಗಳ ಮೂಲಕ ಶಾ ಅವರನ್ನು ಭೇಟಿಯಾದರು. ಆರಂಭದಲ್ಲಿ ಪರಸ್ಪರ ತಿಳಿದುಕೊಳ್ಳಲು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆದರು. ಕ್ರಿಶಾ ಶಾ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.

ಅವಳಿ ಮಕ್ಕಳನ್ನು ಪಡೆದ ಅನಂತ್ ಪಿರಮಾಲ್-ಇಶಾ ಅಂಬಾನಿ
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಮತ್ತು ಪತಿ ಆನಂದ್ ಪಿರಾಮಲ್ ದಂಪತಿಯು ಈ ವರ್ಷ ಅವಳಿ ಮಕ್ಕಳನ್ನು ಪಡೆದರು. ಮೂಲಗಳ ಪ್ರಕಾರ, ಯುಎಸ್ ನಲ್ಲಿ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದರು. ಇಶಾ ಮತ್ತು ಆನಂದ್ ಪಿರಮಲ್ ತಮ್ಮ ಅವಳಿ ಮಕ್ಕಳಿಗೆ ಆದಿಯಾ ಮತ್ತು ಕೃಷ್ಣ ಎಂದು ಹೆಸರಿಟ್ಟರು. ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಬಾಲ್ಯದ ಸ್ನೇಹಿತರು, ಅವರು 2018ರಲ್ಲಿ ವೈವಾಹಿಕ ಬದುಕಿಗೆ ಪದಾರ್ಪಣೆ ಮಾಡಿದರು.

ರಿಲಯನ್ಸ್‌ನ ಉತ್ತರಾಧಿಕಾರ ಯೋಜನೆ ಪ್ರಕಟ
ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತದ ಅತ್ಯಮೂಲ್ಯ ಕಂಪನಿಯಾದ ರಿಲಯನ್ಸ್‌ನ ಉತ್ತರಾಧಿಕಾರದ ಯೋಜನೆಯನ್ನು ಮುಖೇಶ್ ಅಂಬಾನಿ ಘೋಷಿಸಿದರು. ತಮ್ಮ ವ್ಯಾಪಾರವನ್ನು ತಮ್ಮ ಮೂವರು ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ನಡುವೆ ಹಂಚಿಕೆ ಮಾಡಿದರು. ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಜಿಯೋ ಮತ್ತು ರಿಟೇಲ್‌ನ ಮುಖ್ಯಸ್ಥರಾಗಿರುತ್ತಾರೆ, ಆದರೆ ಅವರ ಕಿರಿಯ ಅನಂತ್ ಅಂಬಾನಿ ನ್ಯೂ ಎನರ್ಜಿ ವ್ಯವಹಾರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದರು.

ಸಾಯಿ ಮಂದಿರಕ್ಕೆ 1.5 ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷ ಶಿರಡಿಯಲ್ಲಿರುವ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ಗೆ (SSST) 1.5 ಕೋಟಿ ದೇಣಿಗೆ ನೀಡಿದರು. ಈ ಟ್ರಸ್ಟ್ ನೀಡಿದ ಹೇಳಿಕೆಯ ಪ್ರಕಾರ, ಅನಂತ್ ಅಂಬಾನಿ ದೇವಸ್ಥಾನದಲ್ಲಿ ಮಧ್ಯಾಹ್ನ ಆರತಿ ಮಾಡಿದರು. ಟ್ರಸ್ಟ್‌ನ ಸಿಇಒ ಅವರೊಂದಿಗೆ ಸುಮಾರು ಒಂದು ಗಂಟೆ ದೇವಸ್ಥಾನದಲ್ಲಿದ್ದ ಅವರು ನಂತರ ಚೆಕ್ ಅನ್ನು ಹಸ್ತಾಂತರಿಸಿದರು. ಅಂಬಾನಿ ನೀಡಿದ ದೇಣಿಗೆಯನ್ನು ಸಾಯಿಬಾಬಾರ ಭಕ್ತರ ಅನುಕೂಲಕ್ಕಾಗಿ ವಿವಿಧ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ಟ್ರಸ್ಟ್‌ನ ವಕ್ತಾರರು ತಿಳಿಸಿದರು.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಅನಂತ್ ಅಂಬಾನಿ ಸಾಯಿಬಾಬಾ ದೇವಸ್ಥಾನದ ಬಳಿ ಆಮ್ಲಜನಕ ಸ್ಥಾವರ ಸೆಟಪ್ ಮತ್ತು ಆರ್‌ಟಿ-ಪಿಸಿಆರ್ ಲ್ಯಾಬ್‌ನೊಂದಿಗೆ ಟ್ರಸ್ಟ್‌ಗೆ ಸಹಾಯ ಮಾಡಿದ್ದರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications