ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಮುಖ್ಯಸ್ಥರ ಕಡ್ಡಾಯ ರಜೆ ನಿರ್ಧಾರ ಸಮರ್ಥಿಸಿಕೊಂಡ ಅರುಣ್ ಜೇಟ್ಲಿ

|
Google Oneindia Kannada News

ನವದೆಹಲಿ, ನವೆಂಬರ್ 24: ವಿವಾದ ಸೃಷ್ಟಿಸಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ನಿರ್ಧಾರ ಸಂಸ್ಥೆಯನ್ನು ಶುದ್ಧಗೊಳಿಸುವ ಹಾಗೂ ಅದರ ಕಾರ್ಯಚಟುವಟಿಕೆಗಳಲ್ಲಿ ವೃತ್ತಿಪರತೆಯನ್ನು ದೃಢಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.

ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು, ಸಿಬಿಐನ ಕಾರ್ಯ ಚಟುವಟಿಕೆಗಳಲ್ಲಿ ಏನೋ ತಪ್ಪು ಇದೆ ಎಂದು ಅಭಿಪ್ರಾಯಪಟ್ಟರು.

ಈಗ ನಡೆದಿರುವುದು ಸಿವಿಸಿ ಮುಂದಿದೆ. ಸರ್ಕಾರದ ದೃಷ್ಟಿಯಿಂದ ಅದನ್ನು ಸ್ವಚ್ಛಗೊಳಿಸುವ ಮತ್ತು ಅದರ ವೃತ್ತಿಪರತೆಯನ್ನು ವೃದ್ಧಿಸುವ ಗುರಿ ಮುಂದಿದೆ ಎಂದು ಹೇಳಿದರು.

ಕೋರ್ಟ್‌ಗೆ ನೀಡಿದ ದಾಖಲೆಯನ್ನೇ ಸೋರಿಕೆ ಮಾಡಿದರೇ ಸಿಬಿಐ ನಿರ್ದೇಶಕ?ಕೋರ್ಟ್‌ಗೆ ನೀಡಿದ ದಾಖಲೆಯನ್ನೇ ಸೋರಿಕೆ ಮಾಡಿದರೇ ಸಿಬಿಐ ನಿರ್ದೇಶಕ?

ಕೆಲವು ಸಮಸ್ಯೆಗಳ ಬಗ್ಗೆ ನಾವು ಗಮನ ಹರಿಸಿದ್ದೇವೆ. ಅವುಗಳಲ್ಲಿ ಕೆಲವು ಸರ್ಕಾರದ ವ್ಯಾಪ್ತಿಗೆ ಒಳಪಟ್ಟರೆ ಉಳಿದವು ಆರ್ ಬಿಐ ವ್ಯಾಪ್ತಿಗೆ ಬರುತ್ತವೆ. ಆದರೆ ಭಿನ್ನಾಭಿಪ್ರಾಯಗಳು ಸಾಂಸ್ಥಿಕ ವೈಫಲ್ಯವಲ್ಲ ಎಂದರು.

ಸ್ವಾಯತ್ತದೆ ಕಸಿಯುವುದಿಲ್ಲ

ಸ್ವಾಯತ್ತದೆ ಕಸಿಯುವುದಿಲ್ಲ

ಭಾರತೀಯ ರಿಸರ್ವ್ ಬ್ಯಾಂಕ್‌ನ ಸ್ವಾಯತ್ತತೆಯನ್ನು ರದ್ದುಗೊಳಿಸುವ ಉದ್ದೇಶವಿದೆ ಎಂಬ ಸುದ್ದಿಯನ್ನು ಅವರು ತಳ್ಳಿಹಾಕಿದರು. ಸಾರ್ವಜನಿಕ ಹಿತಾಸಕ್ತಿಯ ಮೇಲೆ ಸರ್ಕಾರ ಹೆಚ್ಚು ಆಸಕ್ತಿ ಮತ್ತು ಚರ್ಚೆ ನಡೆಯುತ್ತದೆ. ಅದರ ಅರ್ಥ ಒಂದು ಸಂಸ್ಥೆಯನ್ನು ಕುಸಿಯುವಂತೆ ಮಾಡಲಾಗುತ್ತದೆ ಎಂದಲ್ಲ ಎಂದರು.

ಊರ್ಜಿತ್ ಪಟೇಲ್ ಪ್ರಬುದ್ಧತೆ, ಹಣಕಾಸು ಸಚಿವಾಲಯದ ಪಟ್ಟು; ಗೆದ್ದಿದ್ದು ಯಾರು?ಊರ್ಜಿತ್ ಪಟೇಲ್ ಪ್ರಬುದ್ಧತೆ, ಹಣಕಾಸು ಸಚಿವಾಲಯದ ಪಟ್ಟು; ಗೆದ್ದಿದ್ದು ಯಾರು?

ಕೆಲವು ಸಮಸ್ಯೆಗಳಿವೆ

ಕೆಲವು ಸಮಸ್ಯೆಗಳಿವೆ

ಆರ್ ಬಿಐನ ಸ್ವಾಯತ್ತೆಯನ್ನು ಗೌರವಿಸುತ್ತೇವೆ. ಆದರೆ, ಇದೇ ಸಮಯಕ್ಕೆ ಕೆಲವು ವಲಯಗಳು ಸಾಲ ಅಥವಾ ಹಣಕಾಸಿನ ಸಮಸ್ಯೆಗಳಿಗೆ ಒಳಗಾಗಿದ್ದರೆ ಅವುಗಳನ್ನು ಬಗೆಹರಿಸಬೇಕಾಗುತ್ತದೆ. ಆರ್ ಬಿಐ ವಿಚಾರದಲ್ಲಿ ನಾವು ಅದನ್ನೇ ಮಾಡಿದ್ದು. ಸ್ವಾಯತ್ತತೆ ಮಾತನಾಡುವ ಅಂಕಣಕಾರರು ಬೆಳವಣಿಗೆ ಕುಂಠಿತವಾಗಿದೆ ಎಂದೂ ಬರೆಯುತ್ತಾರೆ. ಹಾಗಾದರೆ ಸಾಲ ಮತ್ತು ದ್ರವ್ಯತೆಯನ್ನು ಯಾರು ಒದಗಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಆರ್ ಬಿಐ ಸುದೀರ್ಘ ಸಭೆ ಅಂತ್ಯ: ಮಾರುಕಟ್ಟೆಗೆ ಬರಲಿದೆ 8 ಸಾವಿರ ಕೋಟಿಆರ್ ಬಿಐ ಸುದೀರ್ಘ ಸಭೆ ಅಂತ್ಯ: ಮಾರುಕಟ್ಟೆಗೆ ಬರಲಿದೆ 8 ಸಾವಿರ ಕೋಟಿ

ಕಾಂಗ್ರೆಸ್ ಕಾರಣ

ಕಾಂಗ್ರೆಸ್ ಕಾರಣ

ಎನ್ ಪಿಎ ಬಿಕ್ಕಟ್ಟು ಸೃಷ್ಟಿಯಾಗಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಅಧಿಕ ಹಣಕಾಸಿನ ಕೊರತೆಯನ್ನು ಕಾಂಗ್ರೆಸ್ ಉಳಿಸಿ ಹೋಗಿತ್ತು ಎಂದು ಆರೋಪಿಸಿದರು. ಆರ್ಥಿಕತೆಯ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಅತ್ಯುತ್ತಮ ದಾಖಲೆಯನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡರು.

ಹಣಕಾಸು ಕೊರತೆ ಕುಸಿಯುತ್ತಿತ್ತು. ಇದು ವೆಚ್ಚದ ಕಡಿತದಿಂದ ಸರಿಯಾಗುತ್ತಿರಲಿಲ್ಲ. ಅದಕ್ಕಾಗಿ ನಾವು ಅಭಿವೃದ್ಧಿ ಮತ್ತು ಯೋಜನೆಗಳಿಗಾಗಿ ಬಜೆಟ್‌ನಲ್ಲಿ ಇರಿಸಿದ್ದಕ್ಕಿಂತಲೂ ಹೆಚ್ಚನ್ನು ವಿನಿಯೋಗಿಸಿದ್ದೇವೆ ಎಂದರು.

ಹಣದ ಅವಶ್ಯಕತೆ ನಮಗಿಲ್ಲ

ಹಣದ ಅವಶ್ಯಕತೆ ನಮಗಿಲ್ಲ

ಚುನಾವಣೆಗೂ ಮುನ್ನ ಆರ್ ಬಿಐ ನಿಧಿಯನ್ನು ಯೋಜನಾ ನಿಧಿಗಳಿಗೆ ವರ್ಗಾಯಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂಬುದನ್ನು ಅವರು ನಿರಾಕರಿಸಿದರು. ನಮಗೆ ಇನ್ನು ಆರು ತಿಂಗಳಿಗೆ ಹಣದ ಅವಶ್ಯಕತೆ ಇಲ್ಲ ಎಂದು ಜೇಟ್ಲಿ ಪ್ರತಿಪಾದಿಸಿದರು.

English summary
Union Minister Arun Jaitley in an interview with Times Now said that the decision to send CBI derector Alok Verma and special derector Rakesh Asthana on leave was intended to clean the agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X