Congress Manifesto: ಕಾಂಗ್ರೆಸ್‌ನ 'ನ್ಯಾಯಪತ್ರ' ಪ್ರಣಾಳಿಕೆಯ ಮುಖ್ಯಾಂಶಗಳು: ಸಂಕ್ಷಿಪ್ತ ವಿವರ
ನವದೆಹಲಿ, ಏಪ್ರಿಲ್ 05: ಕರ್ನಾಟಕ, ತೆಲಂಗಾಣ ರಾಜ್ಯದಲ್ಲಿ ಗ್ಯಾರೆಂಟಿ ಘೋಷಿಸಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಪಕ್ಷವು ಇದೀಗ ಲೋಕಸಭಾ ಚುನಾವಣೆಗೆ ದೇಶಾದ್ಯಂತ 25 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ. ಆ ಗ್ಯಾರೆಂಟಿಗಳನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಹಾಗಾದರೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು ಏನು? ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ತನ್ನ ಪ್ರಣಾಳಿಕೆಯಲ್ಲಿ 'ನಾರಿ ನ್ಯಾಯ', 'ಕಿಸಾನ್ ನ್ಯಾಯ', 'ಶ್ರಮಿಕ್ ನ್ಯಾಯ', 'ಪಾಂಚ್ ನ್ಯಾಯ' ಅಥವಾ 'ಯುವ ನ್ಯಾಯ', ಹಾಗೂ 'ಹಿಸ್ಸೆದಾರಿ ನ್ಯಾಯ' ಸೇರಿದಂತೆ ನ್ಯಾಯದ ಐದು ಸ್ತಂಭಗಳನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಈ ಭರವಸೆಗಳನ್ನು ರೂಪಿಸಿದೆ. ಅದರಡಿ ಒಟ್ಟು ಎರಡು ಡಜನ್‌ಗೂ (25) ಹೆಚ್ಚು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದೆ.

ಈ ಮೂಲಕ 2024 ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯ ಹೆಚ್ಚು ಸ್ಥಾನಗಳನ್ನು ಗಳಿಸಲು, ಎಲ್ಲ ವರ್ಗದ ಜನರ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ ಎಂಬುದಕ್ಕೆ ಈ ಪ್ರಣಾಳಿಕೆಯೇ ಸಾಕ್ಷಿಯಾಗಿದೆ..
ಕಾಂಗ್ರೆಸ್‌ನ 'ನ್ಯಾಯಪತ್ರ' ಪ್ರಣಾಳಿಕೆಯ ಮುಖ್ಯಾಂಶಗಳು
* ಶೇಕಡಾ 50 ರಷ್ಟು ಮೀಸಲಾತಿ ಹೆಚ್ಚಳ ಮಾಡಲು ತಿದ್ದುಪಡಿ ತರಲು ಕಾಂಗ್ರೆಸ್ ನಿರ್ಧರಿಸಿದೆ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿ ಒದಗಿಸುವುದು.
* ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ (PSU) ಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿನ ಗುತ್ತಿಗೆ ಉದ್ಯೋಗ ರದ್ದು ಮಾಡಿ ಅವರನ್ನು ಖಾಯಂಗೊಳಿಸಲಾಗುವುದು.
* ಜಾತಿ ಆಧಾರದ ಮೇಲೆ ಯಾವುದೇ ರೀತಿಯ ವಿದ್ಯಾರ್ಥಿ ಕಿರುಕುಳ ತಪ್ಪಿಸಲು 'ರೋಹಿತ್ ವೇಮುಲಾ ಕಾಯ್ದೆ' ಜಾರಿಗೆ ತರಲಾಗುವುದು.
* 2025 ರಿಂದ ಮಹಿಳೆಯರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 50 ರಷ್ಟು ಮೀಸಲಾತಿ ಕಲ್ಪಿಸಲಾಗುವುದು.
* ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿಯನ್ನು 1,000 ರೂಪಾಯಿಗೆ ಹೆಚ್ಚಳ
* ನಗದು ರಹಿತ ಆರೋಗ್ಯ ಸೇವೆಗೆ ಒತ್ತು ನೀಡಿರುವ ಕಾಂಗ್ರೆಸ್ 25 ಲಕ್ಷದವರೆಗಿನ ವಿಮೆಯೊಂದಿಗೆ ರೋಗನಿರ್ಣಯ, ಶಸ್ತ್ರಚಿಕಿತ್ಸೆ ಮತ್ತು ಔಷಧಗಳು ಸೇರಿದಂತೆ ಸಾರ್ವತ್ರಿಕ ಉಚಿತ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆ ಒದಗಿಸುವುದು.
* ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಯನ್ನು ಬೇಷರತ್ತಾದ ನಗದು ವರ್ಗಾವಣೆ ಪಡೆಯುವ ಅವಕಾಶ.
* 'ಕೆಲಸ, ಸಂಪತ್ತು ಮತ್ತು ಕಲ್ಯಾಣ" ಈ ಮೂರು ಆಧರಿಸಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯರ ಪಿ ಚಿದಂಬರಂ ಅವರು ಮಾಹಿತಿ ನೀಡಿದರು.












Click it and Unblock the Notifications