Top 10 Airport: ಭೌಗೋಳಿಕವಾಗಿ ಭಾರತದ ಟಾಪ್ 10 ವಿಮಾನ ನಿಲ್ದಾಣಗಳ ಪಟ್ಟಿ
ಬೆಂಗಳೂರು, ಏಪ್ರಿಲ್ 04: ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳಲು ಹೆಚ್ಚು ಸಹಕಾರಿಯಾಗುವ ಈ ವಾಯುಯಾನವು ದೇಶ ಒಳಗೂ ಅಷ್ಟೇ ಮಹತ್ವದ ಪಾತ್ರ ವಹಿಸುತ್ತದೆ. ವಾಯುಯಾನ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ತರುತ್ತಿರುವ ಭಾರತದಲ್ಲಿ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುತ್ತಿದೆ. ಪ್ರಯಾಣಿಕರಿಗೆ ಅಗತ್ಯವಾದ ಐಶಾರಾಮಿ, ಆಧುನಿಕ ಮೂಲಸೌಕರ್ಯಗಳನ್ನು ಏರ್‌ಪೋರ್ಟ್‌ನಲ್ಲಿ ನೀಡಲಾಗುತ್ತಿದೆ.
ಆಯಾ ಪ್ರದೇಶದಲ್ಲಿರುವ ವಿಮಾನ ನಿಲ್ದಾಣಗಳು ಭೌಗೊಳಿಕವಾಗಿ, ಪ್ರವೇಶವಾರು ತನ್ನದೇ ಆದ ವೈಶಿಷ್ಯತೆ, ಸಾಂಸ್ಕೃತಿಕ ಹಿನ್ನೆಲೆಗಳನ್ನು ಒಳಗೊಂಡಿರುತ್ತದೆ. ಇತ್ತೀಚೆಗೆ ವಿಮಾನ ನಿಲ್ದಾಣಗಳನ್ನು ಒಂದಕ್ಕಿಂತ ಒಂದು ಭೀನ್ನ ವಿನ್ಯಾಯದಲ್ಲಿ ಕಾಣಬಹುದು. ಇಂತಹ ವಿಮಾನ ಕೇಂದ್ರಗಳು ಪ್ರಯಾಣಿಕರನ್ನು ಆಕರ್ಷಿಸತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಭಾರತದ ಒಟ್ಟು 10 ಅಗ್ರ ವಿಮಾನ ನಿಲ್ದಾಣಗಳು ಯಾವುವು ಎಂಬುದರ ಕುರಿತು ಪ್ರಾಪರ್ಟಿಪಿಸ್ತೂಲ್.ಕಾಮ್ ವರದಿ ಮಾಡಿದೆ.

1. ನವದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸರಿಸುಮಾರು ಸುಮಾರು 5,106 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ದೆಹಲಿ ಹೃದಯಭಾಗದಲ್ಲಿ ಪ್ರಯಾಣಿಕರನ್ನು ಕೈ ಬೀಸಿ ಕರೆಯುವ ಈ ನಿಲ್ದಾಣವು ಪ್ರದೇಶದ ಪ್ರಕಾರ ಭೌಗೊಳಿಕವಾಗಿ ಭಾರತದ ದೇಶದಲ್ಲೇ ಅತೀ ದೊಡ್ಡ ವಿಮಾನ ನಿಲ್ದಾಣ ಎಂಬ ಬಿರುದು ಪಡೆದುಕೊಂಡಿದೆ.
ವಿದೇಶಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಯಾನ ಕೇಂದ್ರಗಳ ಪೈಕಿ ದೆಹಲಿಯ ಈ ವಿಮಾನ ನಿಲ್ದಾಣ ಪ್ರಮುಖ ಅಂತರರಾಷ್ಟ್ರೀಯ ಮತ್ತು ದೇಶೀಯ ಕೇಂದ್ರವಾಗಿ ಸೇವೆ ಸಲ್ಲಿಸುತ್ತಿದೆ. ಈ ಏರ್‌ಪೋರ್ಟ್‌ನಲ್ಲಿ ಆಧುನಿಕ ಸೌಲಭ್ಯಗಳು, ಬಹು ಟರ್ಮಿನಲ್‌ಗಳು ಮತ್ತು ರನ್‌ವೇಗಳು, ಟ್ಯಾಕ್ಸಿವೇಗಳು ಮತ್ತು ಟರ್ಮಿನಲ್ ವ್ಯವಸ್ಥೆ ಇದೆ. ಒಳಾಂಗಣ ಸಾಕಷ್ಟು ವಿಶಾಲವಾಗಿದೆ. ವಾರ್ಷಿಕವಾಗಿ ಮಿಲಿಯನ್ ಗಟ್ಟಲೇ ಪ್ರಯಾಣಿಕರಿಗೆ ಇದು ಸೇವೆ ನೀಡುತ್ತದೆ.
2. ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಏರ್‌ಪೋರ್ಟ್
ಈ ವಿಮಾನ ನಿಲ್ದಾಣವು ವಿಸ್ತೀರ್ಣದಲ್ಲಿ ಸುಮಾರು 5,500 ಎಕರೆ ಪ್ರದೇಶದಲ್ಲಿ ತಲೆ ಎತ್ತಿದ್ದು, ಹೈದರಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಸ್ತೀರ್ಣದಲ್ಲಿ ದೇಶದ ಎರಡನೇ ಅತಿದೊಡ್ಡ ಏರ್‌ಪೋರ್ಟ್ ಆಗಿದೆ. ಇದು ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ನೀಡುತ್ತದೆ. ಇದು ಈ ನಗರದ ಹೆಮ್ಮೆಯ ಪ್ರತೀಕವಾಗಿದೆ.

3. ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮುಂಬೈನ ಈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಸ್ತೀರ್ಣದಲ್ಲಿ ಅಂದಾಜು 1,850 ಎಕರೆಯಷ್ಟು ದೊಡ್ಡದಿದೆ. ಹೀಗಾಗಿ ಇದು ಹೆಚ್ಚು ಪ್ರಯಾಣಿಕರು ಓಡಾಡುವ ದಟ್ಟಣೆ ಇರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ದೇಶದ ಮಹಾನಗರಗಳಲ್ಲಿ ಒಂದಾಗಿರುವ ಮುಂಬೈ ನಗರದಲ್ಲಿ ಈ ಏರ್‌ಪೋರ್ಟ್ ಪ್ರವಾಸಿಗರನ್ನು ಸೆಳೆಯುತ್ತಿದೆ.
4. ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಭಾರತದ ದಕ್ಷಿಣ ಭಾಗದಲ್ಲಿ ಇರುವ ಕರ್ನಾಟಕ ರಾಜಧಾನಿ ಬೆಂಗಳೂರಲ್ಲಿ ನಿರ್ಮಿಸಿರುವ ಈ ಬೃಹತ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 4,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಅತ್ಯಾಧುನಿಕ ಮೂಲ ಸೌಕರ್ಯ ಹೊಂದಿರುವ ಈ ವಿಮಾನ ನಿಲ್ದಾಣದಲ್ಲಿ ಒಂದು ವರ್ಷದ ಹಿಂದಷ್ಟೇ ಎರಡನೇ ಟರ್ಮಿನಲ್ ಅನ್ನು ಲೋಕಾರ್ಪಣೆಗೊಳಿಸಿದೆ. ದೇಶ ವಿದೇಶಗಳಿಂದ ಇಲ್ಲಿಗೆ ಬರುವವರು ಈ ವಿಮಾನ ನಿಲ್ದಾಣ ಬಗ್ಗೆ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ.
ವಿಶಾಲವಾದ ಪ್ರದೇಶಲ್ಲಿರುವ ವಿಮಾನ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಕಾಮಗಾರಿಗಳು, ಬೃಹತ್ ಪಾರ್ಕಿಂಗ್ಯ ವ್ಯವಸ್ಥೆ, ಮೆಟ್ರೋ ನಿಲ್ದಾಣ ಒಳಗೊಂಡಿರಲಿದೆ. ತನ್ನದೇ ಆದ ವೈಶಿಷ್ಯತೆ, ಸೇವೆ ಹಾಗೂ ವಿನ್ಯಾಸದಿಂದಲೇ ಬೆಂಗಳೂರು ವಿಮಾನ ನಿಲ್ದಾಣ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಇದು ದೇಶದ ವಿಮಾನ ನಿಲ್ದಾಣಗಳಲ್ಲಿ 4ನೇ ಸ್ಥಾನದಲ್ಲಿದೆ.
5. ಕೊಲ್ಕತ್ತಾ: ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ಏರ್‌ಪೋರ್ಟ್
ಕೊಲ್ಕತ್ತಾದ ಒಟ್ಟು 2,460 ಎಕರೆ ಪ್ರದೇಶದಲ್ಲಿರುವ ಈ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪೂರ್ವ ಭಾರತದ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ. ಈ ಭಾಗದ ಬಹುಮುಖ್ಯ ವಾಯುಯಾನ ಕೇಂದ್ರ ಇದಾಗಿದೆ. ದೇಶ-ವಿದೇಶ ವಿಮಾನ ಸೇವೆಗಳು ಇಲ್ಲಿಂದ ಲಭ್ಯವಿದೆ. ವಾರ್ಷಿಕವಾಗಿ ಲಕ್ಷಾಂತರ ಜನರು ಇಲ್ಲಿಂದ ಬೇರೆಡೆ, ಬೇರೆಡೆಯಿಂದ ಇಲ್ಲಿಗೆ ಪ್ರಯಾಣ ಬೆಳೆಸುತ್ತಾರೆ. ಒಳಾಂಗಣ ವಿಶಾಲವಾಗಿದ್ದು ಸುವ್ಯವಸ್ಥೆಯಿಂದ ಕೂಡಿದೆ.
6. ಚೆನ್ನೈ: ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ತಮಿಳುನಾಡು ರಾಜ್ಯ ರಾಜಧಾನಿ ಚೆನ್ನೈ ನಲ್ಲಿರುವ ಚೆನ್ನೈ ಅಂತಾಷ್ಟ್ರೀಯ ವಿಮಾನ ನಿಲ್ದಾಣವು ಗಮನಾರ್ಹ ಭೂಪ್ರದೇಶವನ್ನು ಹೊಂದಿದೆ. ಇದರ ಒಟ್ಟು ವಿಸ್ತೀರ್ಣ ಸುಮಾರು 1,283 ಎಕರೆ ಎನ್ನಲಾಗಿದೆ. ದಕ್ಷಿಣ ಭಾರತಕ್ಕೆ ಪ್ರಮುಖ ಗೇಟ್‌ವೇ ರೂಪದಲ್ಲಿ ಕಾರ್ಯ ನಿರ್ವಹಿಸುವ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಚೈನ್ನೈ ಏರ್‌ಪೋರ್ಟ್ ವೈವಿಧ್ಯಮಯ ಶ್ರೇಣಿಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಒದಗಿಸುತ್ತದೆ. ಚೆನ್ನೈ ಮಹಾನಗರದ ಆರ್ಥಿಕ ಮತ್ತು ಸಾಂಕೃತಿಕ ಸಂಕೇತವಾಗಿದೆ.
7. ಅಹಮದಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ಏರ್‌ಪೋರ್ಟ್
ವಿಸ್ತೀರ್ಣದಲ್ಲಿ ಸುಮಾರು 1,124 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಅಹಮದಾಬಾದ್ ಈ ವಿಮಾನ ನಿಲ್ದಾಣವು ಗುಜರಾತ್‌ನಲ್ಲಿ ನಗರದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ಅಹಮದಾಬಾದ್ ಅನ್ನು ವಿವಿಧ ದೇಶ ಹಾಗೂ ವಿದೇಶಗಳಿಗೆ ನೇರ ಸಂಪರ್ಕ ಕಲ್ಪಿಸುವ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ವಿಮಾನ ನಿಲ್ದಾಣವು ದೇಶದ ವಿಮಾನ ನಿಲ್ದಾಣಗಳಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ. ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತದೆ.
8. ಗುವಾಹಟಿ: ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೋಯ್ ಏರ್‌ಪೋರ್ಟ್
ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 1,100 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಈಶಾನ್ಯ ಭಾರತದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ವಾಯುಯಾನ ಸೇವಾ ಕೇಂದ್ರವಾಗಿದೆ. ಇದು ಆರ್ಥಿಕ ಬೆಳವಣಿಗೆ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾದ ಸೇವೆ ನೀಡುತ್ತಿದೆ.
9. ಕೊಚ್ಚಿ: ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೇರಳ ರಾಜ್ಯದ ಕೊಚ್ಚಿಯಲ್ಲಿ ಒಟ್ಟು ಸುಮಾರು 1,300 ಎಕರೆ ವಿಶಾಲ ಸ್ಥಳದಲ್ಲಿ ನಿರ್ಮಾಣವಾಗಲು ಗಮನಾರ್ಹ ಭೂವ್ಯಾಪ್ತಿ ಹೊಂದಿದೆ. ಪರಿಸರ ಸ್ನೇಹಿ ಉಪಕ್ರಮಗಳಿಗೆ ಹೆಸರುವಾಸಿಯಾದ ಈ ವಿಮಾನ ನಿಲ್ದಾಣವು ಕೇರಳ ಮತ್ತು ವಿವಿಧ ಅಂತಾರಾಷ್ಟ್ರೀಯ ತಾಣಗಳ ನಡುವೆ ಪ್ರಮುಖ ಕೊಂಡಿಯಾಗಿ ಸೇವೆ ನೀಡುತ್ತದೆ.
10. ಲಕ್ನೋ: ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಲಕ್ನೋ ದಲ್ಲಿನ ಈ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಟ್ಟು 1,300 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಅಧ್ಯಯನದ ಪ್ರಕಾರ ಇದು, ಭಾರತಸ ಟಾಪ್ 10 ಅತಿದೊಡ್ಡ ವಿಮಾನ ನಿಲ್ದಾಣಗಳ ಪಟ್ಟಿಯಿಂದ ಹೊರಗಿದೆ ಎನ್ನಲಾಗಿದೆ. ವಿಶಾಲ ಭೂಮಿಯಲ್ಲಿರುವ ಈ ಏರ್‌ಪೋರ್ಟ್ ದೇಶ ಮತ್ತು ವಿದೇಶಗಳನ್ನು ಲಕ್ನೋಗೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಉತ್ತರ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ.
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?











Click it and Unblock the Notifications