Early Warning System: ಹವಾಮಾನ ವ್ಯವಸ್ಥೆ ಅಭಿವೃದ್ಧಿಗೆ ಭಾರತದ IMD ಸಹಾಯ ಕೇಳಿದ ರಾಷ್ಟ್ರಗಳು
ನವದೆಹಲಿ, ಏಪ್ರಿಲ್ 09: ಮಳೆ, ಭೂಕಂಪ, ತಾಪಮಾನ ಇನ್ನಿತರ ಹವಾಮಾನ ವೈಪರಿತ್ಯಗಳಿಂದ ನಷ್ಟವಾಗುವುದನ್ನು ತಪ್ಪಿಸಲು ಭಾರತವು ನೆರೆಯ 5 ಐದು ರಾಷ್ಟ್ರಗಳಿಗೆ ಸಹಾಯ ಮಾಡಲು ಮುಂದಾಗಿದೆ. ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ಧಿಗೆ ಭಾರತ ವಿದೇಶಗಳಿಗೂ ಆಸರೆಯಾಗಲಿದೆ.
ಭೂಕಂಪ, ಮಳೆ, ಬಿಸಿಲು ಸೇರಿದಂತೆ ಎಲ್ಲ ವಿಧದ ಹವಾಮಾನ ಮುನ್ಸೂಚನೆಯನ್ನು ದೇಶದ ಜನರಿಗೆ ಭಾರತ ಹವಾಮಾನ ಇಲಾಖೆ (ಐಎಂಡಿ) ನೀಡುತ್ತಿದೆ. ಇದೀಗ ಭಾರತವು ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಾರಿಷಸ್ ದೇಶಗಳಿಗೆ ಹವಾಮಾನ ಸಂಬಂಧಿ ವಿಚಾರದಲ್ಲಿ ದೊಡ್ಡ ಸಹೋದರ ಮತ್ತು ಸಲಹೆಗಾರನ ಪಾತ್ರ ವಹಿಸಲಿದೆ ಎಂದು ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಮಾಹಿತಿ ನೀಡಿದರು.

ವಿದೇಶಗಳಲ್ಲಿ ಮುನ್ಸೂಚನಾ ವ್ಯವಸ್ಥೆ ಅಭಿವೃದ್ಧಿ
ಹವಾಮಾನ ವೈಪರೀತ್ಯದಿಂದ ಉಂಟಾಗುವ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ಕಡಿಮೆ ಮಾಡಲು ಭಾರತವು ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಾರಿಷಸ್‌ಗೆ ಮುಂಜಾನೆ ಎಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಿದೆ ಎಂದು ಮೊಹಾಪಾತ್ರ ಹೇಳಿದ್ದಾರೆ.
ವಿಶ್ವಸಂಸ್ಥೆಯು ಅಪಾಯಕಾರಿ ಸ್ಥಿತಿ ಮೊದಲೇ ತಿಳಿಯುವುದನ್ನು ಮುನ್ಸೂಚನೆ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ. ಇದು 2027 ರ ಅಂತ್ಯದ ವೇಳೆಗೆ ಜೀವ ಉಳಿಸುವ ಎಚ್ಚರಿಕೆ ವ್ಯವಸ್ಥೆಯಾಗಿದೆ ಎಂಬುದು ಖಚಿತಗೊಳ್ಳಬೇಕು ಎಂದು ಘೋಷಿಸಿದೆ. ಇದರ ಭಾಗವಾಗಿ ಹವಾಮಾನ ಮುನ್ಸೂಚನೆಯಲ್ಲಿ ತಾಂತ್ರಿಕವಾಗಿ ಮುಂದಿರುವ ಭಾರತ ಐದು ರಾಷ್ಟ್ರಗಳಿಗೆ ನೆರವು ಹಸ್ತ ಚಾಚಲಿದೆ.
ವಿಶ್ವದ 50 ದೇಶಗಳಲ್ಲಿ ಅಸಮರ್ಪಕ ಎಚ್ಚರಿಕೆ ವ್ಯವಸ್ಥೆ
ವಿಶ್ವದಲ್ಲಿ ಸುಮಾರು 50 ದೇಶಗಳು ಹವಾಮಾನ ವೈಪರಿತ್ಯಗಳ ಕುರಿತು ಮೊದಲೇ ಎಚ್ಚರಿಕೆ (ಮುನ್ಸೂಚನೆ) ನೀಡುವ ವ್ಯವಸ್ಥೆ ಹೊಂದಿಲ್ಲ. ಇನ್ನೂ ಕಡಿಮೆ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಹೊಂದಿರುವ ದೇಶಗಳು ಇವೆ. ಅದರಲ್ಲಿ ಮಾಲ್ಡೀವ್ಸ್, ಸಿಶೆಲ್ಸ್ ಸೇರಿದಂತೆ ಸಣ್ಣ ಸಣ್ಣ ದ್ವೀಪಗಳು ಇವೆ. ಇಲ್ಲಿ ನಿಖರ ಹಾಗೂ ಪರಿಣಾಮಕಾರಿ ಮುನ್ಸೂಚನಾ ವ್ಯವಸ್ಥೆ ಇಲ್ಲ ಎನ್ನಲಾಗಿದೆ.
ಇದರಿಂದ ಜನರಿಗೆ ತೊಂದರೆ ಆಗುತ್ತಲೇ ಇದೆ. ವೈಪರಿತ್ಯಗಳ ಬಗ್ಗೆ ಮೊದಲೇ ತಿಳಿದರೆ ಜನರನ್ನು ರಕ್ಷಿಸಲು ಸಹಾಯವಾಗುತ್ತದೆ. ಹೀಗಾಗಿ ಐದು ರಾಷ್ಟ್ರಗಳು ಭಾರತದ ಸಹಾಯ ಕೇಳಿವೆ.
05 ಹವಾಮಾನ ವೀಕ್ಷಣಾಲಯ ಸ್ಥಾಪನೆ
ಬೇರೆ ದೇಶಗಳಿಗೆ ಭಾರತವು ತಾಂತ್ರಿಕ ಬೆಂಬಲದ ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಆರ್ಥಿಕ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದೆ. ಈ 05 ದೇಶಗಳಲ್ಲಿ ಐದು ಹವಾಮಾನ ವೀಕ್ಷಣಾಲಯ ಸ್ಥಾಪಿಸಲು ನೆರವಾಗಲಿದ್ದೇವೆ ಎಂದು ಮೊಹಾಪಾತ್ರ ತಿಳಿಸಿದರು.

ಬಹು ಅಪಾಯದ ಎಚ್ಚರಿಕೆ ವ್ಯವಸ್ಥೆ
ಐಎಂಡಿಯು ಮುನ್ಸೂಚನೆ ಜೊತೆಗೆ ಆಯಾ ದೇಶಗಳಳ ಸಂವಹನ ಸಚಿವಾಲಯಗಳು ಡೇಟಾ ವಿನಿಮಯ ಮತ್ತು ಎಚ್ಚರಿಕೆಯ ಪ್ರಸರಣ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು. ಇನ್ನೂ ವಿಶ್ವ ಹವಾಮಾನ ಸಂಸ್ಥೆ (WMO) ಈ ಹಿಂದೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿಶ್ವದ 101 ದೇಶಗಳು (ಶೇ. 52ರಷ್ಟು) ಈಗ ಬಹು-ಅಪಾಯದ ಮುನ್ನೆಚ್ಚರಿಕೆ ವ್ಯವಸ್ಥೆ ಹೊಂದಿವೆ ಎಂದು ತಿಳಿಸಿದೆ ಎಂದರು.
WMO ಹವಾಮಾನ, ಹಾನಿ ವರದಿಯ ವಿವರ
ಜಗತ್ತಿನಲ್ಲಿ 1970 ಮತ್ತು 2019ರ ಮಧ್ಯೆ ವಿಪತ್ತುಗಳು ಸರಿಸುಮಾರು 05 ಪಟ್ಟು ಹೆಚ್ಚಾಗಿವೆ ಎಂದು WMO ಸಂಶೋಶೋಧನೆಗಳು ದೃಢಪಡಿಸಿವೆ. ನೀರಿನ ವಿಪತ್ತುಗಳು ಜಾಗತಿಕವಾಗಿ ಸಾಮಾನ್ಯವಾಗಿವೆ. ಈ ಮಧ್ಯೆ ಮಳೆ, ಚಂಡಮಾರುತ, ತಾಪಮಾನ ಹೆಚ್ಚು ಹಾನಿ ಮಾಡಿದ ವೈಪರಿತ್ಯಗಳು ಎಂದು ಸಂಶೋಧನೆಗಳು ವಿವರಿಸಿವೆ.
ವಿಶ್ವದಲ್ಲಿ 1970-2021 ರವರೆಗೆ ಸರಿಸುಮಾರು 12,000 ಹವಾಮಾನ ಅಥವಾ ಜಲ-ಸಂಬಂಧಿತ ವಿಪತ್ತುಗಳನ್ನು ಕಂಡಿದೆ. ಇದರ ಪರಿಣಾಮವಾಗಿ ಎರಡು ಮಿಲಿಯನ್‌ಗಿಂತ ಅಧಿಕ ಸಾವು ನೋವುಗಳಾಗಿವೆ. ಇದರಿಂದ USD 4.3 ಟ್ರಿಲಿಯನ್ ಆರ್ಥಿಕ ನಷ್ಟ ಉಂಟಾಗಿದೆ.
ಇಂತಹ ಸಂಶೋಧನೆ ಅಧಿಕೃತ ವರದಿ ಅನ್ವಯ, 2015 ಮತ್ತು 2022 ರ ನಡುವಿನ ವಿಪತ್ತುಗಳಿಂದ ವಾರ್ಷಿಕವಾಗಿ ಸುಮಾರು 41,789 ಜನರು ಮೃತಪಟ್ಟಿದ್ದಾರೆ. ಜಾಗತಿಕವಾಗಿ 2013 ರಿಂದ 2022 ರವರೆಗೆ ವಿಪತ್ತುಗಳಿಂದ 1,46,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 2022 ರಲ್ಲಿ ಹವಾಮಾನ ವೈಪರಿತ್ಯಗಳಿಂದ ಹೆಚ್ಚು ಆರ್ಥಿಕ ಹಾನಿ ಆಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications