ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಶೀಘ್ರವೇ ಹಸಿರು ಹೈಡ್ರೋಜನ್‌ ರಫ್ತು

|
Google Oneindia Kannada News

ನವದೆಹಲಿ, ನವೆಂಬರ್ 17: ಭಾರತದಲ್ಲಿ ತಯಾರಿಸಲಾದ ಹಸಿರು ಹೈಡ್ರೋಜನ್‌ ಅನ್ನು ಇತರ ದೇಶಗಳಿಗೆ ರಫ್ತು ಮಾಡಲು ಅಲ್ಲಿನ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ಹಸಿರು ಹೈಡ್ರೋಜನ್‌ ಅನ್ನು ನಮ್ಮ ಶಕ್ತಿಯ ಮೂಲವನ್ನಾಗಿ ಮಾಡಿಕೊಳ್ಳಯವ ಹಂತದಲ್ಲಿ ನಾವು ಇದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರಭಾತ್‌ ಕುಮಾರ್‌ ಅವರು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಗೋಧಿ ಸಂಗ್ರಹಭಾರತದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಗೋಧಿ ಸಂಗ್ರಹ

ನವೀಕರಿಸಬಹುದಾದ ಮೂಲಗಳಿಂದ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಹಸಿರು ಹೈಡ್ರೋಜನ್‌ ಅನ್ನು ತಯಾರಿಸಲಾಗುತ್ತದೆ. ಇದು ಹಾರ್ಡ್ ಟು ಅಬೇಟ್‌ ಭಾರೀ ಕೈಗಾರಿಕೆಗಳನ್ನು ಡಿಕಾರ್ಬೋನೈಸ್‌ ಮಾಡಲು ನಿರ್ಣಾಯಕವೆಂದು ಪರಿಗಣಿಸಲಾಗಿದೆ.

Export of green hydrogen from India soon

ಇಂಧನಗಳ ಆಮದುಗಳ ಮೇಲಿನ ಅವಲಂಬನೆಯನ್ನು ತಡೆಯಲು ಮತ್ತು ಹವಾಮಾನ ಗುರಿಗಳನ್ನು ಪೂರೈಸಲು ಪಳೆಯುಳಿಕೆ ಇಂಧನಗಳಿಂದ ಆರ್ಥಿಕತೆಯನ್ನು ತಗ್ಗಿಸಲು ಭಾರತ ಸರ್ಕಾರವು ಹಸಿರು ಹೈಡ್ರೋಜನ್‌ ಉತ್ಪಾದನೆಯ ಬೃಹತ್‌ ವಿಸ್ತರಣೆಯನ್ನು ಯೋಜಿಸಲಾಗುತ್ತಿದೆ. 2047ರ ವೇಳೆಗೆ ಸರ್ಕಾರ ಉತ್ಪಾದನಾ ಸಾಮರ್ಥ್ಯವನ್ನು 25 ಮಿಲಿಯನ್‌ ಟನ್‌ ಹೊಂದಲು ಗುರಿಯನ್ನು ಹೊಂದಿದೆ. ಆದರೆ ತಂತ್ರಜ್ಞಾನ ಹಾಗೂ ದೇಶದ ಬೇಡಿಕೆ ದೃಷ್ಟಿಯನ್ನು ಅವಲಂಬಿಸಿ ಇದು ಬದಲಾಗಬಹುದು ಎಂದು ಮೂಲಗಳು ತಿಳಿಸಿವೆ.

ಭಾರತದ ಪ್ರಸ್ತುತ ಇಂಧನ ಉತ್ಪಾದನೆಯು ತುಂಬಾ ಕಡಿಮೆಯಾಗಿದ್ದು, ಕೆಲವು ಪ್ರಾಯೋಗಿಕ ಯೋಜನೆಗಳಿಂದ ಕೂಡಿದೆ. ಹಸಿರು ಹೈಡ್ರೋಜನ್‌ ಕಾರ್ಬನ್‌ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಸಂಭಾವ್ಯ ರಾಮಬಾಣವೆಂದು ಪರಿಗಣಿಸಲ್ಪಟ್ಟಿದ್ದರೂ ತಂತ್ರಜ್ಞಾನವನ್ನು ಅಳೆಯುವಲ್ಲಿ ಹಾಗೂ ಅದನ್ನು ವೆಚ್ಚ ಪರಿಣಾಮಕಾರಿಯಾಗಿ ಮಾಡುವಲ್ಲಿ ಇನ್ನೂ ಪ್ರಮುಖ ಸವಾಲುಗಳಿವೆ. ಬೇಡಿಕೆಯ ಬೆಳವಣಿಗೆಯು ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಖಚಿತವಾಗಿಲ್ಲ.

ಜಗತ್ತಿನ ಮೂರನೇ ಅತಿ ದೊಡ್ಡ ಹಸಿರು ಮನೆ ಅನಿಲಗಳನ್ನು ಹೊರಸೂಸೂವ ಭಾರತದಲ್ಲಿ ಕಡಿಮೆ ವೆಚ್ಚದ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವು ಸರ್ಕಾರದ ಕಾರ್ಬನ್‌ ಮುಕ್ತ ಹೈಡ್ರೋಜನ್‌ ಮಹತ್ವಾಕಾಂಕ್ಷೆಗಳ ಹಿಂದಿನ ಪ್ರೇರಕ ಶಕ್ತಿಯಾಗಿದೆ. 2070ರ ವೇಳೆಗೆ ಶೂನ್ಯ ಕಾರ್ಬನ್‌ ಹೊರಸೂಸುವಿಕೆಯನ್ನು ತಲುಪಲು ಎನ್‌ಟಿಪಿಸಿಎಲ್‌ ಲಿ. ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ನಂತಹ ಸರ್ಕಾರಿ ಇಂಧನ ಸಂಸ್ಥೆಗಳು ಭಾರತದ ಗುರಿಯು ಗೌತಮ್‌ ಅದಾನಿ ಮತ್ತು ಮುಕೇಶ್‌ ಅಂಬಾನಿ ಸೇರಿದಂತೆ ವ್ಯಾಪಾರ ಉದ್ಯಮಿಗಳಿಂದ ಬೆಂಬಲವನ್ನು ಪಡೆದಿದೆ.

Export of green hydrogen from India soon

ಅದಾನಿ ಗ್ರೂಪ್‌ ಗ್ರೀನ್‌ ಹೈಡ್ರೋಜನ್‌ ಸೇರಿದಂತೆ ಕ್ಲೀನ್‌ ಎನರ್ಜಿ ಶಕ್ತಿಗಳ ಮೇಲೆ 70 ಶತಕೋಟಿ ಡಾಲರ್‌ ಖರ್ಚು ಮಾಡಲು ವಾಗ್ದಾನ ಮಾಡಿದೆ. ಆದರೆ ಅಂಬಾನಿಯ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್ ಭಾರತದ ಕಂಪನಿಗಳಲ್ಲಿ ಒಂದಾಗಿದ್ದು, ಸೌರಫಲಕಗಳು, ಕ್ಲೀನ್‌ ಹೈಡ್ರೋಜನ್ ಮತ್ತು ಪುನರ್‌ಭರ್ತಿ ಮಾಡಬಹುದಾದ ಬ್ಯಾಟರಿಗಳ ಉತ್ಪಾದನೆಯನ್ನು ಮಾಡಲು ಯೋಜಿಸಿದೆ. ಹೀಗಾಗಿ ಫ್ರೆಂಚ್‌ ತೈಲ ಕಂಪೆನಿ ಟೋಟಲ್‌ ಎನರ್ಜಿಸಿ ಭಾರತದಲ್ಲಿ ಹೈಡ್ರೋಜನ್‌ ಮೇಲೆ ಅದಾನಿ ಜೊತೆ ಪಾಲುದಾರಿಕೆಯನ್ನು ಒಪ್ಪಿಕೊಂಡಿದೆ.

English summary
Sources said it is in talks with governments there to export green hydrogen produced in India to other countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X