ಭಾರತದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಗೋಧಿ ಸಂಗ್ರಹ

ಬೆಂಗಳೂರು, ನವೆಂಬರ್ 15: ದೇಶದ ಸರ್ಕಾರಿ ಗೋದಾಮುಗಳಲ್ಲಿ ಗೋಧಿ ದಾಸ್ತಾನು ಮುಂದುವರಿದಿದೆ. ಆದರೆ 2021ರ ನವೆಂಬರ್ 1ರ ಹೊತ್ತಿಗೆ ಸಂಗ್ರಹಿಸಿದ ಪ್ರಮಾಣದ ಅರ್ಧದಷ್ಟು ಈ ವರ್ಷ ಸಂಗ್ರಹಿಡಲಾಗಿದ್ದು, ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಗೋಧಿಯ ಪ್ರಮಾಣವು 2021ರ ನವೆಂಬರ್‌ 1ರ ಹೊತ್ತಿಗೆ ಒಟ್ಟು 42 ಮಿಲಿಯನ್‌ ಟನ್‌ನಷ್ಟು ದಾಸ್ತಾನು ಮಾಡಿಡಲಾಗಿತ್ತು. ಅದೇ 2022ರ ವೇಳೆಗೆ ಅರ್ಧದಷ್ಟು ಅಂದರೆ 21ಮಿಲಿಯನ್ ಟನ್‌ ಗೋಧಿ ದಾಸ್ತಾನು ಆಗಿದೆ. ಸದ್ಯಕ್ಕೆ ನಿರೀಕ್ಷಿತ ಮಟ್ಟ ತಲುಪದಿದ್ದರೂ ಡಿಸೆಂಬರ್ 31ರ ತ್ರೈಮಾಸಿಕ ಅಂತ್ಯದ ಹೊತ್ತಿಗೆ ಸರ್ಕಾರ ಈ ವರ್ಷದ ನಿಗದಿತ ಗುರಿಯಷ್ಟು ಗೋಧಿ ದಾಸ್ತಾನು ಮಾಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಗೋಧಿ ಹಿಟ್ಟು, ಬಿಸ್ಕತ್ತು ತಯಾರಿಕೆಗೆ ನಿಯಮಿತವಾಗಿ ಗೋಧಿ ಪೂರೈಕೆ ಮಾಡುತ್ತಿರುವ ಕೇಂದ್ರ ಸರ್ಕಾರವು ಕೆಲವು ರಾಜ್ಯಗಳಲ್ಲಿ ಭವಿಷ್ಯದ ಬಳಕೆಗೆ ಕಾಯ್ದಿರಿಸಿದ ದಾಸ್ತಾನುಗಳಿಂದ ಗೋಧಿಯನ್ನು ಮಾರುಕಟ್ಟೆಗೆ ಬಿಡುವಂತೆ ಹೇಳಿದೆ. ಆದರೆ ಸರ್ಕಾರ ಈ ಸೂಚನೆಗೆ ಆ ರಾಜ್ಯಗಳು ಧಿಕ್ಕರಿಸಿವೆ ಎನ್ನಲಾಗಿದೆ.

Wheat stock level is halves down in last year in India

ಗೋಧಿ ಉತ್ಪಾದನೆಯಲ್ಲಿ ಬೃಹತ್ ದೇಶವಾಗಿರುವ ಭಾರತದಲ್ಲಿ ಗೋಧಿ ಬೆಲೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉತ್ಪನ್ನ ಕೊರತೆಯಾಗದಂತೆ ತಡೆಯಲು, ಗೋಧಿ ಉತ್ಪಾನದೆಯಲ್ಲಿ ತುಸು ಇಳಿಕೆ ಹಾಗೂ ಸ್ಥಳೀಯವಾಗಿ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಸರ್ಕಾರ ಗೋಧಿ ರಫ್ತು ಮೇಲೆ ನಿಷೇಧಿಸಿದೆ. ಅಲ್ಲದೇ ಕಳೆದ ವರ್ಷ ಲಭ್ಯವಾಗಿದ್ದ ಬೆಳೆ ಬಹುತೇಕ ಮಾರುಕಟ್ಟೆಯಲ್ಲಿ ಮಾರಾಟವಾಗಿತ್ತು. ಈ ಎಲ್ಲ ಕಾರಣದಿಂದ ಗೋಧಿ ರಫ್ತು ನಿಷೇಧ ಮುಂದುವರಿಯುತ್ತಿದೆ.

ರಫ್ತು ನಿಷೇಧದ ಬಳಿಕ ಗೋಧಿ ಬೆಲೆ ಏರಿಕೆ

ಸದ್ಯ ದೇಶದಲ್ಲಿ ಮುಂದಿನ ಋತುವಿನವರೆಗೆ ಗೋಧಿ ಬೆಳೆ ಬರುವವರೆಗೆ ಕಾಯಬೇಕಿದೆ. ಅಲ್ಲಿಯವರೆಗೆ ಲಭ್ಯ ಗೋಧಿಗೆ ಅಧಿಕ ಬೆಲೆ ಇರಲಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಉಂಟಾದ ಪರಿಣಾಮ ಹಾಗೂ ಕಳೆದ ಮಾರ್ಚ್ ಮತ್ತು ಏಪ್ರಿಲ್‌ ತಿಂಗಳ ಸುಗ್ಗಿಯ ಸಂದರ್ಭದಲ್ಲಿ ತಾಪಮಾನ ಪ್ರಮಾಣ ಸಾಮಾನ್ಯಕ್ಕಿಂತಲೂ ಹೆಚ್ಚಾಗದೇ ಹೋಗಿದ್ದರೆ ನಿರೀಕ್ಷಿತ ಗೋಧಿ ಲಭ್ಯವಾಗುತ್ತಿತ್ತು. ಅಂದರೆ ಭಾರತದ ಗೋಧಿ ಉತ್ಪಾದನೆಯು 2021ರ ಅಂಕಿ ಅಂಶಗಳ ಪ್ರಕಾರ ನಿರೀಕ್ಷಿತ 109.59 ಮಿಲಿಯನ್ ಟನ್‌ಗಳಿಗಿತಂಲೂ ಹೆಚ್ಚು ಗೋಧಿ ಉತ್ಪಾದನೆ ಆಗುತಿತ್ತು ಎಂದು ಬೆಳೆಗಾರರ ಮತ್ತು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Wheat stock level is halves down in last year in India

ಪ್ರಸಕ್ತ ಋತುವಿನಲ್ಲಿ (ಅಕ್ಟೋಬರ್‌ 1ವರೆಗೆ) ಭಾರತದಲ್ಲಿ 4.5 ಮಿಲಿಯನ್ ಹೆಕ್ಟೇರ್‌ಗಳಲ್ಲಿ ರೈತರು ಗೋಧಿ ಬಿತ್ತನೆ ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 9.7ರಷ್ಟು ಅಧಿಕ ಗೋಧಿ ಬಿತ್ತನೆ ಪ್ರಮಾಣ ಎನ್ನಲಾಗಿದೆ. ಹಾಲಿ ಗೋಧಿ ಬೆಲೆ ಪ್ರತಿ ಟನ್‌ಗೆ 26,500 ರೂ.ನಷ್ಟಕ್ಕೆ ಜಿಗಿದಿದೆ. ರಫ್ತು ನಿಷೇಧದ ನಂತರ ದಾಖಲೆಯ ಮಟ್ಟದಲ್ಲಿ ಅಂದರೆ ಶೇ. ಸರಿಸುಮಾರು ಶೇ. 27ರಷ್ಟು ಬೆಲೆ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+