ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಮರಳು ಗಣಿಗಾರಿಕೆ: ನೀರಲ್ಲಿ ಸಿಲುಕಿದ ಲಾರಿಗಳು

|
Google Oneindia Kannada News

ಮಧ್ಯಪ್ರದೇಶ, ಜುಲೈ 21: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮಂಡಳಿಯ ಆದೇಶ ಉಲ್ಲಂಘಿಸಿ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ. ಈ ವೇಳೆ ಮರಳು ಸಾಗಿಸುತ್ತಿದ್ದ ಹಲವು ಲಾರಿಗಳು ಗಾಣಿಗಾರಿಕೆ ಪ್ರದೇಶದಲ್ಲಿ ಸಿಲುಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಂಗಾರು ಋತು ಆರಂಭವಾಗುತ್ತಿದ್ದಂತೆ ನದಿ ಇನ್ನಿತರ ನೀರಿನ ಮೂಲಗಳಿಂದ ಮರಳು ತೆಗೆಯುವುದು ನಿಷಿದ್ಧವಾಗಿದೆ. ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಎಚ್ಚರಿಸಿದ್ದಲ್ಲದೇ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ಮಾಡಿದಂತೆ ಸೂಚಿಸಿ ಆದೇಶಿಸಿದೆ. ಹೀಗಿದ್ದರು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಸಿಂಧ್ ನದಿಯ ಅಕ್ರಮ ಗಣಿಗಾರಿಕೆ ಮಾಡಿದ್ದರಿಂದಲೇ ಲಾರಿಗಳು ಸಿಲುಕಿರುವ ಘಟನೆ ನಡೆದಿದೆ.

ಮುಂಗಾರು ಋತುವಿನ ಆಗಿದ್ದರಿಂದ ಎಲ್ಲೆಡೆ ಧಾರಾಕಾರ ಮಳೆ ಬಿದ್ದಿದೆ. ಹೀಗಾಗಿ ಸಿಂಧ್ ನದಿಯಲ್ಲಿ ನೀರು ಹೆಚ್ಚಾಗಿದೆ. ಜೋರು ಮಳೆಗೆ ಮರಳು ತೆಗೆದಿದ್ದ ಪ್ರದೇಶ ಸಂಪೂರ್ಣ ಜವಾವೃತವಾಗಿದೆ. ಈ ವೇಳೆ ಮರಳು ತುಂಬಿದ್ದ ಲಾರಿ/ಟಿಪ್ಪರ್‌ಗಳು ಮುಂದೆ ಚಲಿಸಲಾಗದೇ ನೀರು ಮತ್ತು ಮರಳಿನಲ್ಲಿಯೇ ಸಿಲುಕಿವೆ. ಲಾರಿಗಳಿಂದ ಹೊರ ಬರಲು ಅಥವಾ ಸುರಕ್ಷಿತ ಸ್ಥಳಕ್ಕೆ ಲಾರಿ ಕರೆತರಲಾಗದೇ ಚಾಲಕರು ಪರದಾಡಿದ್ದಾರೆ. ಈ ಕುರಿತು ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Trucks stuck in water doing illegal sand mining

ನದಿ, ಪರಿಸರಕ್ಕೆ ಹಾನಿಯಾಗುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮುಂಗಾರು ಋತು ಇನ್ನೇನು ಆರಂಭವಾಗುತ್ತದೆ ಎಂಬ ಸಂದರ್ಭದಲ್ಲಿ ಮರಳು ಗಣಿಗಾರಿಕೆ ನಿಷೇಧಿ ಆದೇಶಿಸಿದೆ. ಈ ಕುರಿತು ಸೂಕ್ತ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುವಂತೆ ರಾಜ್ಯ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿಲಾಗಿರುತ್ತದೆ. ಆದರೆ ಅಧಿಕಾರ ನಿರ್ಲಕ್ಷ್ಯದಿಂದ ಅಥವಾ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಲಾಗಿದೆ.

ಮರಳು ಗಣಿಗಾರಿಕೆ ಯಿಂದ ಪರಿಹಾರಕ್ಕೆ, ನದಿಗೆ ಹಾನಿ ಉಂಟಾಗುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ನದಿ ಪಾತ್ರದ ಮರಳು ಗಣಿಗಾರಿಕೆಯು ಮೀನುಗಳು ಮತ್ತು ಜಲಚರಗಳ ಸಂತಾನೋತ್ಪತ್ತಿಯ ಋತುವಿನ ಮೇಲೆ ಪರಿಣಾಮ ಬೀರುತ್ತದೆ. ಪರಿಸರದ ಸಂರಕ್ಷಣೆ ಹಾಗೂ ಭವಿಷ್ಯದ ಹಿತ ದೃಷ್ಟಿಯಿಂದ ಅಕ್ರಮ ಮರಳು ಗಣಿಗಾರಿಕೆ ಮಾಡುವವ ವಿರುದ್ಧ ಪರಿಸರವಾದಿಗಳು ಕ್ರಮ ಆಗ್ರಹಿಸಿದ್ದಾರೆ.

Recommended Video

ಒದೆ‌ ತಿಂದ ಗಬ್ಬರ್ ಸಿಂಗ್: ಹೌಸ್ ಕೀಪಿಂಗ್ ಮಹಿಳೆಗೆ ಕಾಳು ಹಾಕಿ ಎಡವಟ್ಟು ಮಾಡ್ಕೊಂಡ ಶಿಖರ್ ಧವನ್ | *OneIndia

English summary
Many lorries carrying illegal sand got stuck in the mining area in violation order of the National Green Tribunal Board, an incident in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X