Get Updates
Get notified of breaking news, exclusive insights, and must-see stories!

'ಕಡಿಮೆ ಮದ್ಯ ಸೇವಿಸಿದರೆ ಅದು ಔಷಧಿಯಾಗುತ್ತದೆ': ಪ್ರಜ್ಞಾ ಠಾಕೂರ್

ಭೋಪಾಲ್ ಜನವರಿ 21: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದು, ಮತ್ತೊಮ್ಮೆ ಗಮನ ಸೆಳೆದಿರುವ ವಿಚಾರವನ್ನು ಹೇಳಿದ್ದಾರೆ. ವಾಸ್ತವವಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮದ್ಯ ಸೇವನೆಯ ಬಗ್ಗೆ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ. ಆಲ್ಕೋಹಾಲ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಅದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚು ಸೇವಿಸಿದರೆ ಅದು ವಿಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ತಮ್ಮ ಹೇಳಿಕೆಯಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿದ್ದಾರೆ.

ಈ ಮುಂಚೆ ಕೊರೊನಾ ಸೋಂಕಿನ ನಿವಾರಣೆ ಕುರಿತು ಹೇಳಿಕೆ ನೀಡಿದ್ದ ಪ್ರಜ್ಞಾ ಸಿಂಗ್, ಹಸುವಿನ ಗಂಜಲ ಸೇವನೆ ಶ್ವಾಸಕೋಶದ ಸೋಂಕನ್ನು ನಿವಾರಿಸಬಲ್ಲದು ಎಂದಿದ್ದರು. "ನಾನು ಪ್ರತಿ ದಿನ ಗಂಜಲ ಕುಡಿಯುತ್ತೇನೆ. ಅದು ನನಗೆ ಕೊರೊನಾ ಸೋಂಕಿನಿಂದ ರಕ್ಷಣೆ ನೀಡಿದೆ" ಎಂದು ಹೇಳಿದ್ದರು. ಇಷ್ಟೇ ಅಲ್ಲದೆ, ಗಂಜಲ ಸೇವನೆಯಿಂದ ತಮಗಿದ್ದ ಕ್ಯಾನ್ಸರ್ ವಾಸಿಯಾಯಿತೆಂದು ಹೇಳಿ ಅಚ್ಚರಿ ಮೂಡಿಸಿದ್ದರು.

'ಕಡಿಮೆ ಮದ್ಯ ಸೇವಿಸಿದರೆ ಅದು ಔಷಧಿ'

'ಕಡಿಮೆ ಮದ್ಯ ಸೇವಿಸಿದರೆ ಅದು ಔಷಧಿ'

ವಾಸ್ತವವಾಗಿ ಬಿಜೆಪಿ ನಾಯಕಿ ಉಮಾಭಾರತಿ ಅವರ ಬೇಡಿಕೆಯ ಬಗ್ಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕೇಳಿದಾಗ, "ಮದ್ಯ ನಿಷೇಧವಾಗಬೇಕು, ಏಕೆಂದರೆ ಮದ್ಯದಿಂದ ಮನೆಗಳಲ್ಲಿ ತೊಂದರೆ ಉಂಟಾದಾಗ ಅದರ ನೋವು ಸಹಿಸಲಾಗದು, ಕುಡುಕರು ಮನೆಯವರನ್ನು ಹೊಡೆಯುತ್ತಾರೆ. ಆಲ್ಕೋಹಾಲ್ ನಿಂದಾಗಿ, ಅವರ ನೋವು ತುಂಬಾ ಅಸಹನೀಯವಾಗಿರುತ್ತದೆ. ಇದರಿಂದ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಈ ಮದ್ಯಪಾನ ಬಳಕೆಯನ್ನು ನಿಲ್ಲಿಸಬೇಕು ಎಂದಿದ್ದಾರೆ.

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೊಸ ನೀತಿ

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೊಸ ನೀತಿ

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ತಂದಿದೆ. ಅದು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ. ಹೊಸ ಅಬಕಾರಿ ನೀತಿ ಅನ್ವಯ ರಾಜ್ಯದಲ್ಲಿ ಮದ್ಯ ಅಗ್ಗವಾಗಲಿದೆ. ಈ ನೀತಿಯ ಬಗ್ಗೆ ಮಾಧ್ಯಮಗಳು ಸಾಧ್ವಿ ಪ್ರಜ್ಞಾ ಠಾಕೂರ್ ಅವರನ್ನು ಪ್ರಶ್ನಿಸಿದಾಗ, ಅವರು ನಿಷೇಧದ ಬೇಡಿಕೆಯನ್ನು ಬೆಂಬಲಿಸಿದರು. ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕಿ ಉಮಾಭಾರತಿ ಅವರು ಮದ್ಯ ನಿಷೇಧಕ್ಕೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಪ್ರಚಾರವನ್ನೂ ಮಾಡಿದ್ದಾರೆ.

ಸರ್ಕಾರದಿಂದ ಲೈಸೆನ್ಸ್

ಸರ್ಕಾರದಿಂದ ಲೈಸೆನ್ಸ್

ಮಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಮಧ್ಯಪ್ರದೇಶ ಪರಂಪರೆ ಮದ್ಯ ನೀತಿಯನ್ನು ತೆರವುಗೊಳಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಅಬಕಾರಿ ನೀತಿ 2022-2023ರಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಸರಕಾರಕ್ಕೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಮಧ್ಯಪ್ರದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಾಡುವ ಕೌಂಟರ್‌ಗಳನ್ನು ತೆರೆಯಬಹುದು ಮತ್ತು ಇಂದೋರ್, ಭೋಪಾಲ್, ಜಬಲ್‌ಪುರ ಮತ್ತು ಗ್ವಾಲಿಯರ್‌ನ ಆಯ್ದ ಸೂಪರ್‌ಮಾರ್ಕೆಟ್‌ಗಳಲ್ಲಿ ಪ್ರಯೋಗಿಕವಾಗಿ ಮಾರಾಟಕ್ಕೆ ಅವಕಾಶ ಕಲ್ಪಸಲಾಗಿದೆ. ಅಷ್ಟೇ ಅಲ್ಲ ಮನೆಯಲ್ಲಿ ಮಿನಿ ಬಾರ್ ಓಪನ್ ಮಾಡಲು ಲೈಸೆನ್ಸ್ ನೀಡುತ್ತಿರುವ ಮೊದಲ ರಾಜ್ಯವಾಗಿದೆ. ಜೊತೆಗೆ ಪ್ರವಾಸಿ ತಾಣ, ಪರಿಸರ ಪ್ರವಾಸೋದ್ಯಮ ಮಂಡಳಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಘಟಕಗಳಿಗೆ ರಿಯಾಯಿತಿ ದರದಲ್ಲಿ ಬಾರ್ ಪರವಾನಗಿಗಳನ್ನು ನೀಡಬಹುದು.

Recommended Video

    ಪಂಜಾಬ್ ಕಾಂಗ್ರೆಸ್ ನಲ್ಲಿ CM ಅಭ್ಯರ್ಥಿ ಗೊಂದಲ:ಸಿಧು ಚನ್ನಿ ನಡುವೆ ರೇಸ್ | Oneindia Kannada

    ಮದ್ಯಪ್ರಿಯರಿಗೆ ಖುಷಿ ತಂದ ಹೇಳಿಕೆ

    ಈ ನೀತಿ ಬಗ್ಗೆ ಪ್ರಜ್ಞಾ ಸಿಂಗ್ ಸದ್ಯ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಜನ ಕುಡಿದು ಹಾಳಾಗುತ್ತಿದ್ದಾರೆ. ಅದೆಷ್ಟೋ ಕುಟುಂಬಗಳು ಕುಡಿತದಿಂದಾಗಿ ಹಾಳಾಗುತ್ತಿವೆ. ನಿತ್ಯ ಹಿಂಸೆಗೊಳಗಾಗಿವೆ. ಆದರೆ ಆಲ್ಕೋಹಾಲ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಅದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಜ್ಞಾ ಅವರ ಹೇಳಿಕೆ ಕುಡಿತಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ. ಈ ಹೇಳಿಕೆ ಸದ್ಯ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಇದರೊಂದಿಗೆ ಅವರು ಹೆಚ್ಚು ಆಲ್ಕೋಹಾಲ್ ಸೇವಿಸಿದರೆ ಅದು ವಿಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಈ ದ್ವಂದ್ವ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+