• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ಭಾರೀ ದಂಡ, ಮಾಲಿಕರಿಗೆ ಎಚ್ಚರಿಕೆ

|

ಬೆಂಗಳೂರು, ಡಿಸೆಂಬರ್ 13 : ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಈವರೆಗೆ ಪಾವತಿಸದೇ ಇರುವ ಕಟ್ಟಡಗಳ ಮಾಲೀಕರು ಕೂಡಲೇ ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ ಹಾಗೂ ಜಪ್ತಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದ ಜಂಟಿ ಆಯುಕ್ತ ಎನ್. ಸಿ. ಜಗದೀಶ್ ಹಾಗೂ ಉಪ ಆಯುಕ್ತ ಕೆ. ಶಿವೇಗೌಡ ಅವರು ತೆರಿಗೆ ಪಾವತಿಸದೇ ಸುಸ್ತಿದಾರರಾಗಿರುವ ಕಟ್ಟಡ ಮಾಲೀಕರಿಗೆ ಗುರುವಾರ ಎಚ್ಚರಿಸಿದರು.

ಸಚಿವ ಜಾರ್ಜ್ ಒಡೆತನದ ಕಟ್ಟಡಕ್ಕೂ ಬಿಸಿ ಮುಟ್ಟಿಸಿದ ಬಿಬಿಎಂಪಿಸಚಿವ ಜಾರ್ಜ್ ಒಡೆತನದ ಕಟ್ಟಡಕ್ಕೂ ಬಿಸಿ ಮುಟ್ಟಿಸಿದ ಬಿಬಿಎಂಪಿ

ಮಹದೇವಪುರ ವಲಯದ ಹೂಡಿ, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಕೆ.ಆರ್.ಪುರ, ಹೊರಮಾವು ಮತ್ತು ಎಚ್.ಎ.ಎಲ್ ಸೇರಿದಂತೆ ಒಟ್ಟು ಆರು ಕಂದಾಯ ಉಪ ವಿಭಾಗಗಳಲ್ಲಿ 2018-19ನೇ ಸಾಲಿನ ಆಸ್ತಿ ತೆರಿಗೆ ಬೇಡಿಕೆ 556 ಕೋಟಿ ರೂ ಹಾಗೂ ಬಾಕಿ ಆಸ್ತಿ ತೆರಿಗೆ ಬೇಡಿಕೆ 244 ಕೋಟಿ ರೂ ಒಳಗೊಂಡಂತೆ ಒಟ್ಟು ವಸೂಲಿ ಮಾಡಬೇಕಾಗಿರುವ ಆಸ್ತಿ ತೆರಿಗೆಯ ಮೊತ್ತ 800 ಕೋಟಿ ರೂ ಆಗಿದೆ.

ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?

ಈವರೆಗೆ ವಸೂಲಿಯಾಗಿರುವ ಆಸ್ತಿ ತೆರಿಗೆ ಮೊತ್ತ 511.59 ಕೋಟಿ ರೂ. ಆಗಿದ್ದು, ವಸೂಲಿ ಮಾಡಬೇಕಾಗಿರುವ ಮೊತ್ತ 288.41 ಕೋಟಿ ರೂ ಆಗಿದೆ. ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರು ಹಾಗೂ ಅನುಭವದಾರರ ವಿವರಗಳನ್ನು ಈಗಾಗಲೇ ವಾರ್ಡ್ ಕಚೇರಿಗಳಲ್ಲಿ, ಉಪ ವಿಭಾಗಗಳ ಕಚೇರಿಗಳಲ್ಲಿ ಮತ್ತು ವಲಯ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

9891 ಕಟ್ಟಡಗಳ ಮಾಲೀಕರಿಗೆ ನೋಟೀಸ್

9891 ಕಟ್ಟಡಗಳ ಮಾಲೀಕರಿಗೆ ನೋಟೀಸ್

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಒಟ್ಟು 9891 ಕಟ್ಟಡಗಳ ಮಾಲೀಕರಿಗೆ ಕಾರಣ ಕೇಳಿ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ. ಆರು ಉಪ ವಿಭಾಗಗಳಿಂದ ಟಾಪ್-500 ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸುಸ್ಥಿದಾರರ ಪಟ್ಟಿ ಮಾಡಲಾಗಿದೆ. ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 100ಕ್ಕೂ ಹೆಚ್ಚು ಸುಸ್ಥಿದಾರರಿಗೆ ಜಪ್ತಿ ವಾರಂಟನ್ನು ಜಾರಿಗೊಳಿಸಲಾಗಿದೆ.

ಜಪ್ತಿ ಮಾಡುವುದಕ್ಕೆ ಮೊದಲೆ, ಬಹುತೇಕ ಜಪ್ತಿ ವಾರಂಟ್ ಜಾರಿಗೊಳಿಸಿದ ಕೂಡಲೇ, ಕೆಲವು ಆಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿಸಲು ಮುಂದಾಗಿದ್ದಾರೆ. ಇನ್ನೂ ಉಳಿದ ಸುಸ್ಥಿದಾರರಿಗೂ ಕೂಡ ಜಪ್ತಿ ವಾರೆಂಟ್‌ಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಮುಂದುವರೆಯುತ್ತಿದೆ.

ಐದು ಕೋಟಿ ರೂ ಆಸ್ತಿ ತೆರಿಗೆ ವಸೂಲಿ

ಐದು ಕೋಟಿ ರೂ ಆಸ್ತಿ ತೆರಿಗೆ ವಸೂಲಿ

ಮಹಾಪೌರರು ಹಾಗೂ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರ ಸೂಚನೆಯಂತೆ ಪ್ರತಿ ಬುಧವಾರ ಆಸ್ತಿ ತೆರಿಗೆ ವಸೂಲಾತಿ ಅಂದೋಲನವನ್ನು ನಡೆಸಲಾಗುತ್ತಿದೆ. ಪ್ರತಿ ಬುಧವಾರಗಳಂದು ಮೂರು ಕೋಟಿ ರೂನಿಂದ ಐದು ಕೋಟಿ ರೂ ಆಸ್ತಿ ತೆರಿಗೆ ವಸೂಲಿಯಾಗುತ್ತಿದೆ. ಅಲ್ಲದೆ, ಹತ್ತು ಸಾವಿರ ರೂಗಳಿಂತಲೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ಮಾಲೀಕರಿಗೆ ಕಾರಣ ಕೇಳುವ ನೋಟೀಸ್‌ಗಳನ್ನು ಜಾರಿಗೊಳಿಸಲಾಗುತ್ತಿದೆ. ವಿಳಂಬವಾದಂತೆ ಪ್ರತಿ ತಿಂಗಳು ಶೇಕಡಾ 2ರಂತೆ ಬಡ್ಡಿ ಪಾವತಿಸಬೇಕಾಗಿರುವುದರಿಂದ ಸಾಧ್ಯವಾದಷ್ಟು ಆರ್ಥಿಕ ವರ್ಷದ ಪ್ರಾರಂಭದ ದಿನಗಳಲ್ಲಿ ಬಾಕಿ ಸೇರಿದಂತೆ ಎಲ್ಲಾ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

ತೆರಿಗೆ ತುಂಬದ ಸಾವಿರ ಆಸ್ತಿ ಪತ್ತೆ ಹಚ್ಚಿದ ಇಸ್ರೋ ಸಮೀಕ್ಷೆತೆರಿಗೆ ತುಂಬದ ಸಾವಿರ ಆಸ್ತಿ ಪತ್ತೆ ಹಚ್ಚಿದ ಇಸ್ರೋ ಸಮೀಕ್ಷೆ

ಗುರಿ ಸಾಧನೆಯಲ್ಲಿ ವಿಫಲರಾದ ನೌಕರರಿಗೂ ನೋಟೀಸ್

ಗುರಿ ಸಾಧನೆಯಲ್ಲಿ ವಿಫಲರಾದ ನೌಕರರಿಗೂ ನೋಟೀಸ್

ಪ್ರತಿಯೊಬ್ಬ ತೆರಿಗೆ ನಿರೀಕ್ಷಕರಿಗೆ, ಕಂದಾಯ ಪರಿವೀಕ್ಷಕರಿಗೆ, ಮೌಲ್ಯಮಾಪಕರಿಗೆ ವಾರದ ಗುರಿ ನೀಡಿ ವಸೂಲಾತಿಗೆ ಕ್ರಮವಹಿಸಲಾಗುತ್ತಿದೆ. ಗುರಿ ಸಾಧನೆಯಲ್ಲಿ ವಿಫಲರಾದ ನೌಕರರಿಗೂ ಕೂಡಾ ಕಾರಣ ಕೇಳುವ ನೋಟೀಸ್ ಜಾರಿಗೊಳಿಸಲಾಗುತ್ತಿದೆ. ಮಹದೇವಪುರ ವಲಯದಲ್ಲಿ ಆನ್‌ಲೈನ್ ಪ್ರಕಾರ ಆಸ್ತಿ ತೆರಿಗೆ ಪಾವತಿಸುತ್ತಿರುವ ಒಟ್ಟು ಆಸ್ತಿಗಳ ಸಂಖ್ಯೆ 3,51,482 ಆಗಿದೆ. ಸ್ವಯಂ ಮಾಪನಾ ವ್ಯವಸ್ಥೆಯಡಿ ಘೋಷಿಸಿಕೊಂಡ ಆಸ್ತಿಗಳನ್ನು ಖುದ್ದು ಪರಿಶೀಲನೆ ಮಾಡಿ ಸುಳ್ಳು ಹಾಗೂ ತಪ್ಪು ಘೋಷಣೆ ಮಾಡಿ ಕಡಿಮೆ ಮೊತ್ತದ ಆಸ್ತಿ ತೆರಿಗೆ ಪಾವತಿಸುತ್ತಿರುವವರಿಗೂ ದುಪ್ಪಟ್ಟು ತೆರಿಗೆಯ ಜೊತೆಗೆ ದಂಡ ಹಾಗೂ ಬಡ್ಡಿ ವಿಧಿಸಿ ವಸೂಲಿ ಮಾಡಲಾಗುತ್ತಿದೆ.

ಟಾಪ್-500 ಸುಸ್ತಿದಾರರ ಬಾಕಿ 29 ಕೋಟಿ ರೂ

ಟಾಪ್-500 ಸುಸ್ತಿದಾರರ ಬಾಕಿ 29 ಕೋಟಿ ರೂ

ಮಹದೇವಪುರ ವಲಯದ ಟಾಪ್-500 ಸುಸ್ತಿದಾರರು ಪಾವತಿಸಬೇಕಾಗಿರುವ ಆಸ್ತಿ ತೆರಿಗೆಯ ಮೊತ್ತ 29,93,36,605 ರೂ ಆಗಿದೆ. ಜಪ್ತಿಯಿಂದ ತಪ್ಪಿಸಿಕೊಳ್ಳಲು ಕೂಡಲೇ ಆಸ್ತಿ ತೆರಿಗೆ ಪಾವತಿಸುವಂತೆ ಮಹದೇವಪುರ ವಲಯದ ಜಂಟಿ ಆಯುಕ್ತ ಎನ್. ಸಿ.ಜಗದೀಶ್ ಹಾಗೂ ಉಪ ಆಯುಕ್ತರಾದ ಕೆ. ಶಿವೇಗೌಡ ಅವರು ತೆರಿಗೆ ಸುಸ್ಥಿದಾರ ಕಟ್ಟಡ ಮಾಲೀಕರಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

English summary
Non-payment of property tax : Huge fine will be imposed and property would be seized. BBMP has warned the defaulters. So, better pay the property tax immediately to avoid fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X