Nandini: ಕನ್ನಡಿಗರ ನಂದಿನಿ ಬೆಳೆದರೆ ನಿಮಗೇಕೆ ಉರಿ? ಉದ್ಯಮಿ ಮೋಹನ್‌ದಾಸ್‌ಪೈಗೆ ನೆಟ್ಟಿಗರ ತರಾಟೆ
ಕೆಎಂಎಫ್ ವಿಶ್ವಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ. ಜೂನ್ ತಿಂಗಳಿನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಅಮುಲ್ ಕೂಡ ಹಲವು ತಂಡಗಳಿಗೆ ಪ್ರಾಯೋಜಕತ್ವ ನೀಡಿದ್ದು, ಈ ಬಾರಿ ನಂದಿನಿ ಕೂಡ ಈ ರೇಸ್‌ನಲ್ಲಿತ್ತು.
ಕೆಎಂಎಫ್ ನಂದಿನಿ ಅಂತಾರಾಷ್ಟ್ರೀಯ ತಂಡಗಳ ಪ್ರಾಯೋಜಕತ್ವ ಹೊಂದಿರುವುದಕ್ಕೆ ಉದ್ಯಮಿ ಮೋಹನ್‌ದಾಸ್ ಪೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಎಂತಹ ದೊಡ್ಡ ನಾಚಿಕೆಗೇಡಿನ ಸಂಗತಿ! ಅವರು ಕರ್ನಾಟಕದ ರೈತರಿಗೆ ಸೇರಿದ, ಕನ್ನಡಿಗರಾದ ಗ್ರಾಹಕರು ಪಾವತಿಸುವ ಹಣವನ್ನು ವಿದೇಶಿ ತಂಡಗಳಿಗೆ ಪ್ರಾಯೋಜಿಸಲು ಏಕೆ ಬಳಸುತ್ತಿದ್ದಾರೆ? ಅದು ಯಾವ ಮೌಲ್ಯವನ್ನು ನೀಡುತ್ತದೆ? ಬಡ ರೈತರಿಗೆ ಉತ್ತಮ ವೇತನ ನೀಡಿ. ಇದು ಕರ್ನಾಟಕದ ಸಹಕಾರ ಸಂಘದ ವ್ಯರ್ಥ ಪ್ರಯತ್ನವಾಗಿದೆ" ಎಂದು ಹೇಳಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಸಿಟ್ಟಿಗೆದ್ದ ಕನ್ನಡಿಗರು
ಮೋಹನ್ ದಾಸ್ ಪೈ ಅವರ ಪೋಸ್ಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ನಂದಿನಿ ಬ್ರಾಂಡ್ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಣೆ ಮಾಡಲು ಪ್ರಯತ್ನಿಸುತ್ತಿದೆ ನಿಮಗೇಕೆ ಸಂಕಟ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಅಮುಲ್ ಕೂಡ ಸಹಕಾರಿ ಸಂಸ್ಥೆ ಅವರು ಅಫ್ಘಾನಿಸ್ತಾನ ಸೇರಿದಂತೆ ಹಲವು ತಂಡಗಳಿಗೆ ಪ್ರಾಯೋಜಕತ್ವ ನೀಡಿದರೆ ನಿಮಗೆ ಸರಿ, ಆದರೆ ಅದನ್ನೇ ಕೆಎಂಎಫ್ ಮಾಡಿದರೆ ನಿಮಗೆ ಉರಿಯುತ್ತದೆಯೇ ಎಂದು ಕೇಳಿದ್ದಾರೆ.
ನೀವೊಬ್ಬರು ಉದ್ಯಮಿಯಾಗಿ ಈ ರೀತಿ ಯೋಚನೆ ಮಾಡುತ್ತೀರಾ, ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಇದು ಪ್ರಚಾರ ತಂತ್ರವಾಗಿದೆ. ಇದರಲ್ಲೇನು ತಪ್ಪು ಎಂದು ಕೇಳಿದ್ದಾರೆ.
Is your heart burning that it’s not Amul? That our state’s home brand nandini is seizing the golden opportunity and growing its fame.And someday might even surpass Amul?
— ಸುಷ್ಮಾ ಅಯ್ಯಂಗಾರ್ (@malnadkoos) April 20, 2024
That your guru shah wont be able to touch our brand and wont be able go make it submissive to Amul ?… https://t.co/CRhDzz3gd2
ಎಂಎನ್‌ವಿ ಗೌಡ ಎನ್ನುವವರು ಪ್ರತಿಕ್ರಿಯೆ ನೀಡಿ, "ನಂದಿನಿಯನ್ನು ನಿಮ್ಮ ಮನೆಗೆ ಎಂದಾದರೂ ಕರೆತಂದಿದ್ದೀರಾ? ನಿಮ್ಮ ಕೊಡುಗೆ ಏನು? ಹೌದು, ಇದು ಕರ್ನಾಟಕದ ರೈತರ ಹಣ, ಮತ್ತು ಈಗ ನಾವು ಜಾಗತಿಕವಾಗಿ ಹೋಗುತ್ತಿದ್ದೇವೆ. ಮೊದಲ ಹಂತವಾಗಿ ನಾವು ಕ್ರಿಕೆಟ್‌ಗೆ ಪ್ರಾಯೋಜಕತ್ವ ನೀಡುತ್ತಿದ್ದೇವೆ. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ನಂದಿನಿಯ ಬೆಳವಣಿಗೆಗೆ ಹೆದರುತ್ತೀಯಾ? ಖಂಡಿತವಾಗಿ, ಒಂದು ದಿನ ನಾವು ನಿಮ್ಮ ಮೆಚ್ಚಿನ ಬ್ರ್ಯಾಂಡ್ ಅನ್ನು ಮೀರಿಸುತ್ತೇವೆ." ಎಂದು ಹೇಳಿದ್ದಾರೆ.
Have you ever brought Nandini to your house? What's your contribution?
— MNV Gowda (@MNVGowda) April 21, 2024
Yes, it's Karnataka farmers' money, and now we are going global. As a first step, we are sponsoring cricket. But it won't stop there.
Are you afraid of Nandini's growth? Surely, one day we'll surpass your…
ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಮತ್ತೊಂದು ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ, ಕರ್ನಾಟಕ ರಣಜಿ ತಂಡ, ಕರ್ನಾಟಕದ ಕ್ರೀಡಾಪಟುಗಳು, ಕರ್ನಾಟಕದ ಕಲಾವಿದರಿಗೆ ಏಕೆ ಪ್ರಾಯೋಜಿಸಬಾರದು? ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿವೇತನ ನೀಡಬಹುದು ಅಲ್ಲವೇ? ಕೆಎಂಎಫ್ ಅನ್ನು ಕನ್ನಡಿಗ ತೆರಿಗೆ ಪತ್ರಗಳ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಹೂಡಿಕೆ ಮಾಡಲಾಗುತ್ತದೆ ಆದರೆ ಯಾರಿಗೂ ತಿಳಿದಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಆಯ್ಕೆ ಮಾಡುತ್ತದೆ!" ಎಂದು ಕೇಳಿದ್ದಾರೆ.
ಆದರೆ ಕೆಎಂಎಫ್ ಹೊಸ ಎನರ್ಜಿ ಡ್ರಿಂಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಅದರ ಮಾರುಕಟ್ಟೆ ವಿಸ್ತರಣೆಗೆ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಮತ್ತೊಮ್ಮೆ ಟ್ವೀಟ್ ಮಾಡಿರುವ ಅವರು, ಎರಡು ತಂಡಗಳಿಗೆ ಪ್ರಾಯೋಜಕತ್ವ ನೀಡುವ ಅಗತ್ಯ ಏನಿತ್ತು ಎಂದು ಕೇಳಿದ್ದಾರೆ.
ಅಮೂಲ್ ಅನ್ನು ಹೊಗಳಿ ಮೋಹನ್‌ದಾಸ್ ಪೈ ಮಾಡಿದ್ದ ಹಳೆ ಟ್ವೀಟ್‌ಗಳನ್ನು ಹಂಚಿಕೊಂಡಿರುವ ಕನ್ನಡಿಗರು, ನಿಮಗೆ ಕನ್ನಡಿಗರ ಸಂಸ್ಥೆಗಳನ್ನು ಕಂಡರೆ ಹೊಟ್ಟೆ ಉರಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?











Click it and Unblock the Notifications