Bengaluru Weather: ಬೆಂಗಳೂರಿನಲ್ಲಿ ಒಂದು ವಾರ ಪೂರ್ತಿ ತಾಪಮಾನ ಏರಿಕೆ ಮುನ್ಸೂಚನೆ-ಎಷ್ಟು ಡಿಗ್ರಿ ಸೆಲ್ಸಿಯಸ್ ಗೊತ್ತಾ?
ಬೆಂಗಳೂರು, ಏಪ್ರಿಲ್, 22: ಮೊನ್ನೆ ಅಂದರೆ ಶನಿವಾರ (ಏಪ್ರಿಲ್ 20) ನಗರದ ಹಲವೆಡೆ ಮಳೆಯಾಗಿದ್ದು, ನಿನ್ನೆ (ಏಪ್ರಿಲ್ 21) ಬಿಸಿಲಿನ ವಾತಾವರಣ ಮುಂದುವರೆದಿತ್ತು. ಸಂಜೆ ವೇಳೆಗೆ ಕೆಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾದರೂ ಮಳೆಯಾಗಿಲ್ಲ. ಇನ್ನು ಮತ್ತೆ ಈ ವಾರ ಅದೇ ಆಡಿದ್ದೇ ಆಟ ಎನ್ನುವಂತೆ ನಗರದಲ್ಲಿ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾದರೆ ಎಷ್ಟು ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ಇಲ್ಲಿ ತಿಳಿಯಿರಿ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಈ ವಾರ ಪೂರ್ತಿ ಬೆಂಗಳೂರು ನಗರದಲ್ಲಿ ತಾಪಮಾನ ಪ್ರಮಾಣದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ತಿಳಿಸಿದೆ. ಇನ್ನು ಶುಕ್ರವಾರ ಮತ್ತು ಶನಿವಾರದಂದು ನಗರದ ಕೆಲವೆಡೆ ಲಘು ಮಳೆಯಾಗಿದೆ. ಶನಿವಾರ (ಏಪ್ರಿಲ್ 2) ದಕ್ಷಿಣ ಬೆಂಗಳೂರಿನ ಹೆಬ್ಬಾಳ, ಬನಶಂಕರಿ, ರಾಜರಾಜೇಶ್ವರಿ ನಗರ, ಕನಕಪುರ ರಸ್ತೆ ಮತ್ತು ಜಯನಗರ ಸೇರಿದಂತೆ ಕೋರಮಂಗಲ, ಎಚ್‌ಎಸ್‌ಆರ್, ಬಿಟಿಎಂ ಲೇಔಟ್‌ನಲ್ಲಿ ಸಾಧಾರಣ ಮಳೆಯಾಗಿದೆ.

ಏಪ್ರಿಲ್ 6 ರಂದು ನಗರದಲ್ಲಿ ತಾಪಮಾಣ ಪ್ರಮಾಣ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಎಂಟು ವರ್ಷಗಳಲ್ಲೇ ಅತಿ ಹೆಚ್ಚು ಎಂದು ತಿಳಿದುಬಂದಿದೆ. ಇನ್ನು ಕಳೆದ ಕೆಲವು ದಿನಗಳಲ್ಲಿ ಮಾತ್ರ ತಾಪಮಾನದಲ್ಲಿ ಸುಮಾರು ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.











Click it and Unblock the Notifications