ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಸಂಜೆ ಮಳೆ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 28; ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಸಂಜೆ ಸುರಿಯುವ ಮಳೆ ಜನರ ಆತಂಕ ಹೆಚ್ಚಿಸಿದೆ.

ಬೆಂಗಳೂರು ನಗರದಲ್ಲಿ ಇನ್ನೂ ಎರಡು ದಿನ ಸಂಜೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಸಂಜೆ ಹೊರಗೆ ತಿರುಗಾಡಲು ಹೋಗುವ ಆಲೋಚನೆ ಇದ್ದರೆ ಕೈಬಿಡಿ.

Infographics: ಕರ್ನಾಟಕದಲ್ಲಿ ಆಗಸ್ಟ್ 29ರವರೆಗೂ ಮಳೆಯೋ ಮಳೆ Infographics: ಕರ್ನಾಟಕದಲ್ಲಿ ಆಗಸ್ಟ್ 29ರವರೆಗೂ ಮಳೆಯೋ ಮಳೆ

ಶನಿವಾರ ಸಂಜೆ ನಗರದಲ್ಲಿ ಸುರಿದ ಮಳೆಯ ಅಬ್ಬರ ಕಂಡು ಜನರು ಭಯಗೊಂಡಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಸುರಿದ ಗುಡುಗು ಸಹಿತ ಮಳೆಗೆ ರಸ್ತೆಗಳು ನದಿಯಂತಾಗಿದ್ದವು. ಭಾನುವಾರ ಮತ್ತು ಸೋಮವಾರ ಜನರು ಗಣೇಶ ಹಬ್ಬದ ಖರೀದಿಗಾಗಿ ಹೊರಗೆ ಹೋಗುವುದು ಅನಿವಾರ್ಯವಾಗಿದೆ.

ಬೆಂಗಳೂರು ಮಳೆ ಅವಾಂತರ: ಕೆಂಗೇರಿ-ವಂಡರ್ಲಾ ನಡುವಿನ ಸಂಚಾರ ಅಸ್ತವ್ಯಸ್ತ ಬೆಂಗಳೂರು ಮಳೆ ಅವಾಂತರ: ಕೆಂಗೇರಿ-ವಂಡರ್ಲಾ ನಡುವಿನ ಸಂಚಾರ ಅಸ್ತವ್ಯಸ್ತ

bengaluru rain news

ಇನ್ನೂ 4 ದಿನ ಮಳೆ; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಗಸ್ಟ್ 31ರ ತನಕ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಹೇಳಿದೆ. ಅದೇ ರೀತಿ ಬೆಂಗಳೂರು ನಗರದಲ್ಲಿಯೂ ಸಂಜೆ ಮಳೆ ಎರಡು ದಿನಗಳ ಕಾಲ ಸುರಿಯಲಿದೆ.

ಬೆಂಗಳೂರಿನಲ್ಲಿ 5 ದಿನ ಭಾರಿ ಮಳೆ: ಶುಕ್ರವಾರ ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ ಬಿದ್ದಿದೆಬೆಂಗಳೂರಿನಲ್ಲಿ 5 ದಿನ ಭಾರಿ ಮಳೆ: ಶುಕ್ರವಾರ ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ ಬಿದ್ದಿದೆ

ಬೆಂಗಳೂರು ನಗರಕ್ಕೆ ಇನ್ನೂ ಎರಡು ದಿನ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಂಜೆಯ ವೇಳೆಗೆ ನಗರದಲ್ಲಿ ಮಳೆಯಾಗಲಿದೆ.

ನೈಋತ್ಯ ಮುಂಗಾರು ಚುರುಕುಗೊಂಡಿದೆ ಇದರ ಜೊತೆಗೆ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.

ಮಂಗಳವಾರ ಗೌರಿ ಹಬ್ಬವಿದೆ, ಬುಧವಾರ ಗಣೇಶ ಚತುರ್ಥಿ ಇದೆ. ಹಬ್ಬದ ಖರೀದಿ, ಊರಿಗೆ ಹೊರಡುವ ಗಡಿಬಿಡಿಯಲ್ಲಿ ಬೆಂಗಳೂರು ನಗರದ ಜನರಿದ್ದಾರೆ. ಇಂತಹ ಸಮಯದಲ್ಲಿ ಸಂಜೆ ಮಳೆ ಸುರಿದರೆ ಜನ ಜೀವನ ಅಸ್ತವ್ಯಸ್ತವಾಗಲಿದೆ.

ವಿವಿಧ ಜಿಲ್ಲೆಗಳಲ್ಲಿ ಮಳೆ; ಭಾರತೀಯ ಹವಾಮಾನ ಇಲಾಖೆ ಭಾನುವಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ 12 ಸೆಂ. ಮೀ. ತನಕ ಮಳೆ ಸುರಿಯುವ ನಿರೀಕ್ಷೆ ಇದೆ.

rain news

ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಮಳೆ ಮುನ್ಸೂಚನೆ ನೀಡಲಾಗಿದೆ. ಆಗಸ್ಟ್ 29ರ ಸೋಮವಾರ ಚಿಕ್ಕಮಗಳೂರು, ಮಂಡ್ಯ, ಮೈಸೂರು, ಕೊಡಗು, ತುಮಕೂರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆಗಸ್ಟ್ 30 ಮತ್ತು 31ರ ಬುಧವಾರ ಸಹ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಜುಲೈ ಮತ್ತು ಆಗಸ್ಟ್‌ನಲ್ಲಿ ಸುರಿದ ನೈಋತ್ಯ ಮುಂಗಾರು ಮಳೆಯಿಂದಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ.

ಗುರುವಾರದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರವೂ ಧಾರಾಕಾರ ಮಳೆಯಾಗಿದೆ. ಕರೆಗಳು ಕೋಡಿ ಬಿದ್ದು ಹಲವು ಕಡೆ ಜನಜೀವನ ಅಸ್ತವ್ಯಸ್ತವಾಗಿದೆ. ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಮನೆ, ಬೆಳೆಗಳಿಗೆ ಹಾನಿಯಾಗಿದೆ.

ಮೈಸೂರು ತಾಲೂಕಿನ ಜಯಪುರ ಹೋಬಳಿ ನಗರ್ತಹಳ್ಳಿ ಕೆರೆ 15 ವರ್ಷದ ಬಳಿಕ ಕೋಡಿ ಬಿದ್ದಿದೆ. ಹಾಸನ ಜಿಲ್ಲೆಯ ಬಾಗೂರು ಕೆರೆ ಕೋಡಿ ಬಿದ್ದಿದ್ದು, ನುಗ್ಗೇನಹಳ್ಳಿ-ಬಾಗೂರು ರಸ್ತೆಯಲ್ಲಿ ವಾಹನ ಸಂಚರ ಸ್ಥಗಿತಗೊಂಡಿತ್ತು. ಚನ್ನರಾಯನಪಟ್ಟಣದ ಹಿರೀಸಾವೆ, ಅತ್ತಿಹಳ್ಳಿ ಕೆರೆಯೂ ಕೋಡಿ ಬಿದ್ದಿದೆ.

ಗದ್ದೆಗಳಿಗೆ ನುಗ್ಗಿದ ನೀರು; ರಾಮನಗರ, ಮಂಡ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ದಶಪಥ ರಸ್ತೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಮಂಡ್ಯದ ಗುಡುಗೇನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 150 ಎಕರೆ ಗದ್ದೆ ನೀರಿನಿಂದ ಅವೃತವಾಗಿದೆ. ಶ್ರೀರಂಗಪಟ್ಟಣದ ಅರಕೆರೆ ಕೋಡಿ ಬಿದ್ದಿದೆ. ರಾಮನಗರದಲ್ಲಿಯೂ ಹಲವಾರು ಕೆರೆಗಳು ಕೋಡಿ ಬಿದ್ದಿದ್ದು, ತೋಟ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡಿವೆ.

English summary
The India Meteorological Department (IMD) has predicted heavy rain and Yellow alert has also been issued for two days at Bengaluru city. Evening rain to continue in city till August 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X