IPL Betting : ನಾಲ್ವರು ಬುಕ್ಕಿಗಳ ಮೇಲೆ ಸಿಸಿಬಿ ದಾಳಿ, 5 ಲಕ್ಷ ರೂ ನಗದು ಜಪ್ತಿ
ಬೆಂಗಳೂರು, ಏಪ್ರಿಲ್ 14: ಐಪಿಎಲ್ ಕ್ರಿಕೆಟ್ ಮ್ಯಾಚ್ ಬೆಟ್ಟಿಂಗ್ ಕ್ರಿಕೆಟ್‌ನಷ್ಟೆ ಸದ್ದು ಮಾಡುತ್ತದೆ. ಪೋಲಿಸರು ನಗರ-ನಗರಗಳಲ್ಲಿ ಬೆಟ್ಟಿಂಗ್ ಬುಕ್ಕಿಗಳನ್ನು ಬೇಟೆಯಾಡುತ್ತಿದ್ದು, ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ಆಡುತ್ತಿದ್ದ ನಾಲ್ವರು ಶಂಕಿತ ಬೆಟ್ಟಿಂಗ್ ಬುಕ್ಕಿಗಳನ್ನು ಸಿಸಿಬಿ ಪೋಲಿಸರು ಬಂಧಿಸಿ ಬುಕ್ಕಿಗಳಿಂದ ಸುಮಾರು 5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಬುಕ್ಕಿಗಳ ಮೇಲೆ ಎರಡನೇ ಪ್ರಕರಣ ಬೇಟೆಯಾಡಿರುವ ಸಿಸಿಬಿ ಪೋಲಿಸರು, ಸೋಮವಾರ ಬೆಂಗಳೂರಿನ ಕೆಂಪೆಗೌಡನಗರದಲ್ಲಿ ಲಕ್ಷಾಂತರ ದುಡ್ಡು ಕಟ್ಟಿಸಿಕೊಂಡು ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ನಾಲ್ವರು ಬುಕ್ಕಿಗಳ ಗುಂಪುನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಸವನಗುಡಿಯ ನಿವಾಸಿ ಇರ್ಫಾನ್ (28) ಎಂಬಾತನೇ ಬೆಟ್ಟಿಂಗ್ ಜಾಲದಲ್ಲಿ ನಿರತನಾಗಿದ್ದ ವೇಳೆ ಪೋಲಿಸರು ಬಂಧಿಸಿದ್ದಾರೆ ಇರ್ಫಾನ್ ಬೆಟ್ಟಿಂಗ್ ಆಡಲು ವೆಬ್‌ಸೈಟ್ ಹಾಗೂ ಸೋಸಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಐಪಿಎಲ್ ಪಂದ್ಯಗಳಿಗೆ ಹಣ ಪಡೆದುಕೊಂಡು ಬೆಟ್ಟಿಂಗ್ ಬುಕ್ಕಿಂಗ್ ನಡೆಸುತ್ತಿದ್ದ ಎನ್ನಲಾಗಿದೆ. ಇರ್ಫಾನ್ ಮಂಗಳವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ. ಬೆಟ್ಟಿಂಗ್ ಕಟ್ಟಿಸಿಕೊಂಡು ಸೋತವರಿಂದ ಹಣ ಪಡೆದು ಗೆದ್ದವರಿಗೆ ಹಣ ನೀಡುವ ಹಾಗೂ ಯಾವ ಯಾವ ತಂಡಗಳಿಗೆ ಬೆಟ್ಟಿಂಗ್ ಇದೆ ಎಂಬುದನ್ನು ತಿಳಿಸಿ ಹಣ ಪಡೆಯುತ್ತಿದ್ದ, ಈತನನ್ನು ಸಿಸಿಬಿ ಪೋಲಿಸ್ ತಂಡವು ಗಾಂಧಿ ಬಜಾರ್‌ನಲ್ಲಿ ಬಂಧಿಸಿ ನಗದು 3 ಲಕ್ಷ ರೂಪಾಯಿ ಹಣ ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಎರಡನೇ ಪ್ರಕರಣದಲ್ಲಿ ಸಿಸಿಬಿ ತಂಡ ಸೂಕ್ತ ಮಾಹಿತಿ ಮೇರೆಗೆ ಕೆಂಪೇಗೌಡನಗರದಲ್ಲಿ ಬೆಟ್ಟಿಂಗ್ ಆಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದು, ಬೆಂಗಳೂರಿನ ಲಗ್ಗೆರೆ ನಿವಾಸಿಗಳಾದ ಯೋಗೇಶ್ ಎನ್, ಅನೂದೀಪ್ ಮತ್ತು ಸೂಧನ್ ಬೆಟ್ಟಿಂಗ್ ಆಡಿ ಪೋಲಿಸರಿಗೆ ಸಿಕ್ಕಿಬಿದ್ದವರು. ಗುಂಪಾಗಿ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ ವೇಳೆ ಈ ಮೂವರನ್ನು ಬಂಧಿಸಿದ ಸಿಸಿಬಿ 2 ಲಕ್ಷ ರೂ ನಗದು ಹಾಗೂ ಬೆಟ್ಟಿಂಗ್ ಬಳಸಿದ ಮೂರು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
-
Namma Metro: ಐಪಿಎಲ್ ಪಂದ್ಯದ ದಿನ ದಟ್ಟಣೆ ಇಲ್ಲದೇ ಓಡಾಡಿ, ಮೆಟ್ರೋ ಸೇವಾವಧಿ ವಿಸ್ತರಣೆ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು











Click it and Unblock the Notifications