ಗೌರಿ ಲಂಕೇಶ್ ಹಂತಕನ ಮೊತ್ತಮೊದಲ ಚಿತ್ರ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 17 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬೈಕ್ ಸವಾರನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಗೌರಿ ಲಂಕೇಶ್ ಮನೆಯ ಸುತ್ತ-ಮುತ್ತ ಬೈಕ್‌ನಲ್ಲಿ ವ್ಯಕ್ತಿಯೊಬ್ಬ ಓಡಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್‌ಐಟಿ ಬಿಡುಗಡೆ ಮಾಡಿತ್ತು.

gauri

ಬಿಳಿ ಬಣ್ಣದ ಶರ್ಟ್ ಧರಿಸಿರುವ ವ್ಯಕ್ತಿ, ಬಜಾಬ್ ಪಲ್ಸರ್ ಬೈಕ್ ನಲ್ಲಿ ಗೌರಿ ಲಂಕೇಶ್ ಮನೆಯ ಸುತ್ತ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆಲ್ಮೆಟ್ ಹಾಕಿರುವ ಈ ವ್ಯಕ್ತಿ ಹಲವು ಬಾರಿ ಸುತ್ತಾಟ ನಡೆಸಿರುವುದು ವಿಡಿಯೋಗಳು ಎಸ್‌ಐಟಿ ಬಳಿ ಇವೆ.

ಶನಿವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಇಬ್ಬರು ಶಂಕಿತರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಹಣೆಯಲ್ಲಿ ಕುಂಕುಮ ಧರಿಸಿರುವ ವ್ಯಕ್ತಿಯ ರೇಖಾಚಿತ್ರದ ಬಗ್ಗೆ ವಿವಾದ ಹುಟ್ಟಿಕೊಂಡಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಗೌರಿ ಲಂಕೇಶ್ ಹತ್ಯೆಗೂ ಏಳು ದಿನ ಮೊದಲು ಹಂತಕರು ನಗರಕ್ಕೆ ಆಗಮಿಸಿದ್ದರು. ಆರ್.ಆರ್.ನಗರದಲ್ಲಿಯೇ ವಾಸ್ತವ್ಯ ಹೂಡಿ ಹತ್ಯೆ ನಡೆಸಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

ಸೆಪ್ಟೆಂಬರ್ 5ರ ರಾತ್ರಿ 8 ಗಂಟೆ ಸುಮಾರಿಗೆ ಆರ್‌.ಆರ್.ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಇಬ್ಬರು ಹಂತಕರು ಈ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸರ್ಕಾರ ಪ್ರಕರಣದ ತನಿಖೆಗೆ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+