ಗೌರಿ ಹಂತಕರ ರೇಖಾಚಿತ್ರ, ಕುಂಕುಮದ ಬಗ್ಗೆ ಬಿಸಿ-ಬಿಸಿ ಚರ್ಚೆ!

ಬೆಂಗಳೂರು, ಅಕ್ಟೋಬರ್ 15 : ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಹಂತಕರನ್ನು ಹೋಲುವ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಆದರೆ, ಒಬ್ಬ ಶಂಕಿತನ ಹಣೆಯ ಮೇಲೆ ಕುಂಕಮವಿರುವುದು ವಿವಾದಕ್ಕೆ ಕಾರಣವಾಗಿದೆ.

ಸಿಐಡಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, 'ಆರೋಪಿಗಳ ಪತ್ತೆಗೆ 40 ದಿನಗಳ ಕಾಲ ತನಿಖೆ ನಡೆಸಿ ಹಲವು ಮಾಹಿತಿ ಸಂಗ್ರಹಿಸಿದ್ದೇವೆ. ಸಾಕ್ಷಿಗಳ ಹುಡುಕಾಟ ನಡೆಸುತ್ತಿದ್ದೇವೆ. ರೇಖಾಚಿತ್ರದಲ್ಲಿರುವ ಆರೋಪಿಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ತಿಳಿಸಬೇಕು' ಎಂದು ಹೇಳಿದರು.

ಎಸ್‌ಐಟಿ ಬಿಡುಗಡೆ ಮಾಡಿರುವ 3 ಆರೋಪಿಗಳ ರೇಖಾಚಿತ್ರದಲ್ಲಿ ಎರಡು ಚಿತ್ರಗಳು ಒಬ್ಬ ಆರೋಪಿಯನ್ನು ಹೋಲುತ್ತಿದೆ. ಒಂದಕ್ಕೆ ಮೀಸೆ ಇದ್ದು, ಕುಂಕುಮ ಹಚ್ಚಿದೆ. ಇನ್ನೊಂದಕ್ಕೆ ಮೀಸೆ ಇಲ್ಲ. ಮೂರನೆಯದ್ದು ಮತ್ತೊಬ್ಬ ಆರೋಪಿಯ ರೇಖಾಚಿತ್ರವಾಗಿದೆ. ಸಿಸಿಟಿವಿ ದೃಶ್ಯ ಹಾಗೂ ಸ್ಥಳೀಯ ವ್ಯಕ್ತಿಗಳು ನೀಡಿದ ಮಾಹಿತಿ ಆಧರಿಸಿ ಪರಿಣತ ಕಲಾವಿದರು ರೇಖಾಚಿತ್ರಗಳನ್ನು ಸಿದ್ಧಪಡಿಸಿದ್ದಾರೆ.

ಕುಂಕುಮ ಹಚ್ಚಿದ ಆರೋಪಿಯ ರೇಖಾಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಆರೋಪಿಗಳ ರೇಖಾಚಿತ್ರಗಳನ್ನೇ ಶಂಕೆಯ ಮೇಲೆ ರಚನೆ ಮಾಡಲಾಗಿದೆ. ಅವರು ಕುಂಕುಮ ಇಟ್ಟಿದ್ದರು ಎಂದು ತಿಳಿದಿದ್ದು ಹೇಗೆ?, ರಾತ್ರಿ ಹಂತಕರು ಇಟ್ಟಿದ್ದ ಕುಂಕುಮ ಕಂಡಿದ್ದಾದರೂ ಹೇಗೆ? ಎಂದು ಜಾಲತಾಣದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ....

ಕುಂಕುಮ

ಒಂದು ಸಮುದಾಯ ಬಾಗಿ ಆಗೇ ಇಲ್ಲ ಅನ್ನುವ ನಿರ್ಧಾರನಾ ? ಎಂದು ಪ್ರಶ್ನಿಸಿದ್ದಾರೆ.

ಜನರು ಸಹಾಯ ಮಾಡಬಹುದು

ಜನರು ಸಹಾಯ ಮಾಡಬಹುದು

ರೇಖಾಚಿತ್ರದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ 94808-00202 ಮೊಬೈಲ್ ನಂಬರ್ ಅಥವ [email protected]ಗೆ ಮಾಹಿತಿ ನೀಡಬಹುದು. ಆರೋಪಿಗಳ ಬಗ್ಗೆ ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಡಿಗಲಾಗುತ್ತದೆ, ಸರ್ಕಾರ ನಿಗದಿಪಡಿಸಿರುವ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

ಹಣೆಗೆ ಕುಂಕುಮ ಇಟ್ಟಿದ್ನಾ?

ಹಣೆಗೆ ಕುಂಕುಮ ಇಟ್ಟಿದ್ನಾ?

ಕುಂಕುಮ ಇಟ್ನಿದ್ದಾ?

ಹೆಲ್ಮೆಟ್ ಹಾಕಿದವನ ಮುಖದಲ್ಲಿ ಕುಂಕುಮ ಕಂಡಿತೇ?

ಹೆಲ್ಮೆಟ್ ಹಾಕಿದವನ ಮುಖದಲ್ಲಿ ಕುಂಕುಮ ಕಂಡಿತೇ?

ಎಸ್‌ಐಟಿ ವಿಶ್ವದ ಏಕೈಕ ತನಿಖಾ ಸಂಸ್ಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+