ಗೌರಿ ಹತ್ಯೆ : ಶಂಕಿತ ಕೊಲೆಗಡುಕರ ಪತ್ತೆಗೆ ನೆರವಾಗಿ
ಬೆಂಗಳೂರು, ಅಕ್ಟೋಬರ್ 14: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಇಬ್ಬರು ಶಂಕಿತ ಆರೋಪಿಗಳ ಮೂರು ರೇಖಾಚಿತ್ರಗಳನ್ನು ಶನಿವಾರ ಎಸ್ ಐಟಿ ಬಿಡುಗಡೆ ಮಾಡಿದೆ.
ಈ ರೇಖಾಚಿತ್ರಗಳಲ್ಲಿರುವ ವ್ಯಕ್ತಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೂಡಲೇ 9480800202 ನಂಬರ್ ಗೆ ಕರೆ ಮಾಡಿ ತಿಳಿಸಬೇಕೆಂದು ಎಸ್ ಐಟಿಯ ಮುಖ್ಯಸ್ಥ ಬಿ.ಕೆ.ಸಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶನಿವಾರ ದಿಢೀರನೇ ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಿದ ಬಿ.ಕೆ.ಸಿಂಗ್, ಗೌರಿ ಹತ್ಯೆ ಪ್ರಕರಣದ ಇಬ್ಬರು ಶಂಕಿತರ ರೇಖಾಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಈ ಚಿತ್ರದಲ್ಲಿ ಇರುವವರ ಬಗ್ಗೆ ಏನಾದರೂ ಮಾಹಿತಿ ಇದ್ದಲ್ಲಿ ಕೂಡಲೇ ತಮ್ಮಗೆ (ಬಿ.ಕೆ.ಸಿಂಗ್) ಅಥವಾ [email protected],in ಇಮೇಲ್ ಮೂಲಕ ಮಾಹಿತಿ ನೀಡಿ ಎಂದು ವಿನಂತಿಸಿದರು.
ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಜತೆಗೆ ರಾಜ್ಯ ಸರ್ಕಾರ ಘೋಷಿಸಿರುವ 10 ಲಕ್ಷ ರು. ನಗದು ಬಹುಮಾನವನ್ನು ನೀಡಲಾಗುವುದು ಎಂದು ಬಿ.ಕೆ. ಸಿಂಗ್ ತಿಳಿಸಿದರು.
ಸೆಪ್ಟೆಂಬರ್ 05ರಂದು ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಮುಂದೆ ನಿಂತಿದ್ದ ಗೌರಿ ಲಂಕೇಶ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.












Click it and Unblock the Notifications