ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಪುಷ್ಪ ಪ್ರದರ್ಶನ: ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶ

|
Google Oneindia Kannada News

ಬೆಂಗಳೂರು, ಜ, 14: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ಉದ್ಯಾನ ಸಜ್ಜಾಗಿದ್ದು ಈ ಬಾರಿ ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಅಂತರ್ಜಾಲ ತಾಣಕ್ಕೆ(http://www.lalbaghflowershow.in/) ಭೇಟಿ ನೀಡಿ ಟಿಕೆಟ್ ಖರೀದಿ ಮಾಡಬಹುದು. ತಾಣ ಜನವರಿ 16ರ ಸಂಜೆ 5 ಗಂಟೆಯಿಂದ ಅಧಿಕೃತವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೈಸೂರು ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಎಚ್. ಕೋದಂಡರಾಮಯ್ಯ ತಿಳಿಸಿದರು.

lalbagh

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು 40 ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಅಲ್ಲದೇ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುವುದು. ಅಗ್ನಿಶಾಮಕ ಮತ್ತು ಪ್ಯಾರಾ ಮೆಡಿಕಲ್ ಆಂಬುಲೆನ್ಸ್ ಸದಾ ಗಾಜಿನ ಮನೆ ಬಳಿ ಇರುತ್ತದೆ ಎಂದು ತಿಳಿಸಿದರು.[ಬೆಂಗಳೂರು ಹೂವಿನ ಅರಮನೆಯಲ್ಲಿ ಹಂಪಿ ಕಲ್ಲಿನ ರಥ]

lalbagh 2

ಲಾಲ್ ಬಾಗ್ ನಲ್ಲಿ ಕೆಂಪುಕೋಟೆ
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ 50 ಅಡಿ ಉದ್ದ 40 ಅಡಿ ಎತ್ತರ ಮತ್ತು 28 ಅಡಿ ಉದ್ದದ ಕೆಂಪು ಕೋಟೆ ತಲೆ ಎತ್ತಿ ನಿಲ್ಲಲಿದೆ. ಇದರ ಜತೆಗೆ ಪ್ರತಿ ವರ್ಷದಂತೆ ಅಲಂಕಾರಿಕ ಹೂವುಗಳು, ಸಸ್ಯ ತೋಟಕ್ಕೆ ಭೇಟಿ ನೀಡಿದ ಗಣ್ಯರ ಛಾಯಾಚಿತ್ರ ಸಂಚಯ, ಪುಷ್ಪದಲ್ಲಿ ಅರಳಿರುವ ವಾದ್ಯ ಪರಿಕರಗಳು, ಹೂ ಕುಂಡಗಳು, ಔಷಧೀಯ ಗಿಡಗಳು, ಹಣ್ಣು ಹೀಗೆ ಹತ್ತು ಹಲವು ಸಂಗತಿಗಳು ಗಮನ ಸೆಳೆಯಲಿವೆ ಎಂದು ಮಾಹಿತಿ ನೀಡಿದರು.

ಜನವರಿ 17 ರಿಂದ ಆರಂಭ
ಜನವರಿ 17 ರಿಂದ 26 ರವರೆಗೆ ಪ್ರದರ್ಶನ ನಡೆಯಲಿದೆ. ವಯಸ್ಕರಿಗೆ ತಲಾ 40 ರೂ. ರಜಾ ದಿನಗಳಲ್ಲಿ 50 ರೂ. ಮತ್ತು 12 ವರ್ಷದ ಒಳಗಿನ ಮಕ್ಕಳಿಗೆ ತಲಾ 10 ರೂ. ಶುಲ್ಕ ವಿಧಿಸಲಾಗಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.[ಜಯನಗರ ಸೌತ್ ಎಂಡ್ ವೃತ್ತಕ್ಕೀಗ ಸಂಜೀವಿನಿ ಔಷಧ ವನ]

lalbagh 3
English summary
Republic Day Flower Exhibition at Lalbagh begins from January 17 People can book their tickets online to avoid the long queue at the ticket counter.The tickets can be booked for any of the days, and they will be delivered home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X