ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಅಪ್ರಾಪ್ತರಿಂದ ಹತ್ಯೆ, ರೌಡಿಯ ಹೊಸ ಪ್ಲಾನ್!

|
Google Oneindia Kannada News

ಬೆಂಗಳೂರು, ಜುಲೈ 25: ಬೆಂಗಳೂರಿನಲ್ಲಿ ಭೀಕರವಾಗಿ ಯುವಕನ ಭೀಕರ ಹತ್ಯೆಯಾಗಿತ್ತು. ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸುವ ನೆಪದಲ್ಲಿ ಕರೆಸಿಕೊಂಡು ಹುಟ್ಟಿದ ದಿನವೇ ಹತ್ಯೆಯನ್ನು ಮಾಡಿದ್ದರು. ಹತ್ಯೆಗೆ ಹಾಕಲಾಗಿದ್ದ ಸ್ಕೆಚ್ ಮತ್ತು ಹತ್ಯೆಯ ಹಿಂದಿನ ಉದ್ದೇಶದ ಜೊತೆ ಹಂತಕರ ವಿವರವನ್ನು ಕೇಳಿದರೇ ವಿಚಿತ್ರ ಮತ್ತು ಅಚ್ಚರಿಗೆ ಸಂಗತಿ ಬೆಳಕಿಗೆ ಬಂದಿದೆ.

ರೌಡಿಸಂನಲ್ಲಿ ಹೊಸ ಹೊಸ ಐಡಿಯಾಗಳನ್ನು ಮಾಡುತ್ತಾರೆ. ಆದರೆ ಈ ಕೇಸ್ ನಲ್ಲಿ ಹೊಸ ಐಡಿಯಾ ಅಲ್ಲದಿದ್ದರೂ ಕ್ರೂರತೆಯ ಜೊತೆ ವಿಕೃತ ಮನೋಭಾವವನ್ನು ಮುಗ್ದ ಮನಸ್ಸಿನಲ್ಲಿ ತುಂಬಿ ಹಂತಕರನ್ನಾಗಿ ತಯಾರಿಸಿದ್ದು ಎದ್ದು ಕಾಣುತ್ತಿದೆ. ಸಿನಿಮಾದಲ್ಲಿ ಕ್ರೂರತೆಯನ್ನು ಮೀರುವಂತೆ ಕಾನೂನು ಸಂಘರ್ಘಕ್ಕೆ ಒಳಗಾದ ಬಾಲಕರು ಭೀಕರ ಹತ್ಯೆಯನ್ನು ಮಾಡಿದ್ದಾರೆ.

ರೌಡಿ ರಿಜ್ವಾನ್ ಶತ್ರು ಹತ್ಯೆಗೆ ಅಪ್ರಾಪ್ತ ಬಾಲಕರಿಗೆ ಸುಪಾರಿ: ಹುಟ್ಟುಹಬ್ಬ ಆಚರಣೆ ಹೆಸರಲ್ಲಿ ಮರ್ಡರ್ ! ರೌಡಿ ರಿಜ್ವಾನ್ ಶತ್ರು ಹತ್ಯೆಗೆ ಅಪ್ರಾಪ್ತ ಬಾಲಕರಿಗೆ ಸುಪಾರಿ: ಹುಟ್ಟುಹಬ್ಬ ಆಚರಣೆ ಹೆಸರಲ್ಲಿ ಮರ್ಡರ್ !

ಬೆಂಗಳೂರಿನ ಬಾಸ್ ವಿಚಾರವಾಗಿ ಹುಟ್ಟುಹಬ್ಬ‌‌ ದಿನದಂದೇ ಬರ್ಬರ ಹತ್ಯೆಗೊಳಗಾಗಿದ್ದ ಯುವಕ ಹೇಮಂತ್ ಕುಮಾರ್. ಈ ಕೊಲೆ‌‌ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೊಲೆಯನ್ನು ಮಾಡಿದ್ದು ಕುಳ್ಳ ರಿಜ್ವಾನ್ ಎನ್ನುತ್ತಿದ್ದ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಾಲಕರನ್ನು ಹತ್ಯೆಗೆ ಯಾವ ರೀತಿಯಲ್ಲಿ ಬಳಸಿಕೊಳ್ಳಲಾಯಿತು?, ಅಪ್ರಾಪ್ತರು ಹತ್ಯೆಯನ್ನು ಮಾಡಿದರೇ ಕಾನೂನು ಪ್ರಕಾರ ಶಿಕ್ಷೆಯ ಅವಧಿ ಕಡಿಮೆ ಎನ್ನುವುದೇ ಅವರನ್ನು ಬಳಸಿಕೊಳ್ಳೋಕೆ ಕಾರಣವಾಗಿದೆ.

ಕುಖ್ಯಾತ ರೌಡಿಶೀಟರ್ ರಿಜ್ವಾನ್ ಪಾಷಾ ಆಲಿಯಾಸ್ ಕುಳ್ಳು ರಿಜ್ವಾನ್ ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಮುಂದಿಟ್ಟು ಹತ್ಯೆ ಮಾಡಿಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಳ್ಳು ರಿಜ್ವಾನ್ ಸಹಚರ ಹರೀಶ್ ನನ್ನು ಬಂಧಿಸಿದರೆ ಕೃತ್ಯದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೆಂಪೇಗೌಡನಗರ‌ ಪೊಲೀಸರಿಂದ ಬಂಧಿತನಾಗಿರುವ ಕುಳ್ಳು ರಿಜ್ವಾನ್‌ನ ಮುಂದಿನ ದಿನಗಳಲ್ಲಿ ಬಾಡಿ ವಾರೆಂಟ್ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಆಕಸ್ಮಿಕ, ಕುಡಿತದ ಜಗಳ ಅನ್ನೋದು ಸುಳ್ಳು

ಆಕಸ್ಮಿಕ, ಕುಡಿತದ ಜಗಳ ಅನ್ನೋದು ಸುಳ್ಳು

ಜುಲೈ 16ರ ತಡರಾತ್ರಿ ಟಿ.ಗೊಲ್ಲಹಳ್ಳಿ ನಿವಾಸಿ ಹೇಮಂತ್ ಹಾಗೂ ಬಂಧಿತ‌ ಹರೀಶ್ ಗೆ ನಡುವೆ ಮಾತಿನ ಚಕಮಕಿಯಾಗಿತ್ತು. ಕುಳ್ಳು ರಿಜ್ವಾನ್ ನನ್ನ ಕುರಿತು‌ ಕೆಟ್ಟದಾಗಿ ಮಾತನಾಡಿದ್ದ‌.‌ ಇದನ್ನ ಸಹಿಸದ ಹರೀಶ್, ತಮ್ಮ ಗುರು ರಿಜ್ವಾನ್ ಗಮನಕ್ಕೂ ತಂದಿದ್ದ. ಇದರಿಂದ ಆಕ್ರೋಶಗೊಂಡು ಹೇಮಂತ್ ನನ್ನು ಮುಗಿಸುವಂತೆ ರಿಜ್ವಾನ್ ಸೂಚಿಸಿದ್ದ. ತಮ್ಮ ಗುರುವಿನ ಅಣತಿಯಂತೆ ಪ್ಲ್ಯಾನ್ ಮಾಡಿಕೊಂಡ ಹರೀಶ್ ತಮ್ಮ ಜೊತೆಯಿದ್ದ ನಾಲ್ವರು ಬಾಲಕರನ್ನು ಹತ್ಯೆಗೆ ಸಜ್ಜುಗೊಳಿಸಿದ್ದ. ಬಾಲಕ ಆರೋಪಿಗೆ ಹೆಚ್ಚು ಶಿಕ್ಷೆಯಾಗುವುದಿಲ್ಲ.‌ ಜೊತೆಗೆ ತಮಗೆ ಏನು ತೊಂದರೆಯಾಗುವುದಿಲ್ಲ ಎಂದು ಭಾವಿಸಿದ್ದ ಕಾರಣದಿಂದಾಗಿ ಇವರಿಂದಲೇ ಹತ್ಯೆಯನ್ನು ಮಾಡಿಸಲಾಗಿದೆ.

ಗುರುವಿನ ಆಜ್ಞೆಯಂತೆ ಕೊಲೆ

ಗುರುವಿನ ಆಜ್ಞೆಯಂತೆ ಕೊಲೆ

ಹತ್ಯೆಯಾಗಿದ್ದ ಹೇಮಂತ್ ನಾಲ್ಕು ತಿಂಗಳ ಹಿಂದೆ ಚಾಮರಾಜಪೇಟೆಯಿಂದ‌ ಟಿ.ಗೊಲ್ಲಹಳ್ಲಿಯ ಮನೆಗೆ ಶಿಫ್ಟ್ ಮಾಡಿದ್ದ. ಜುಲೈ 16ರಂದು ಹೇಮಂತ್ ಬರ್ತ್ ಡೇ ಸಲುವಾಗಿ ಚಾಮರಾಜಪೇಟೆಯಲ್ಲಿರುವ ಸ್ನೇಹಿತರೊಂದಿಗೆ ಬಂದು ಬಾರ್ ವೊಂದರಲ್ಲಿ ಪಾರ್ಟಿ ಮಾಡಿದ್ದ. ತಡರಾತ್ರಿವರೆಗೂ ಪಾರ್ಟಿ ಭಾಗಿಯಾಗಿ ನಂತರ ಹೇಮಂತ್, ಮನೆಗೆ ಹೋಗುವಾಗ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಡ್ರಾಪ್ ಕೊಡುವ ನೆಪದಲ್ಲಿ ಹೇಮಂತ್ ನನ್ನ ಗಾಡಿ ಹತ್ತಿಸಿಕೊಂಡಿದ್ದರು. ನೈಸ್ ರೋಡ್ ತಲುಪುತ್ತಿದ್ದಂತೆ ನಮ್ಮ ಗುರು ಕುಳ್ಳು‌‌ ರಿಜ್ವಾನ್ ಗೊತ್ತಿಲ್ವಾ ನಿನಗೆ ಎಂದ ಕ್ಯಾತೆ ತೆಗೆದಿದ್ದಾರೆ. ಯಾವ ಗುರು ಗೊತ್ತಿಲ್ಲ ಎಂದು ಹೇಮಂತ್ ಹೇಳಿದ್ದ. ಇದರಿಂದ‌ ಆಕ್ರೋಶಗೊಂಡ ಆರೋಪಿಗಳು ಪೂರ್ವಾ ಸಂಚಿನಂತೆ ಮಾರಕಾಸ್ತ್ರಗಳಿಂದ ತಲೆಭಾಗಕ್ಕೆ ಕೊಚ್ಚಿ ಕೊಲೆ‌ ಮಾಡಿ ಪರಾರಿಯಾಗಿದ್ದರು‌.

ಮೆದುಳಿಗಾಗಿ ಹುಡುಕಾಡುವ ಹಂತಕರು

ಮೆದುಳಿಗಾಗಿ ಹುಡುಕಾಡುವ ಹಂತಕರು

ಅಪ್ರಾಪ್ತರು ಹೇಮಂತ್‌ನನ್ನು ಭೀಕರವಾಗಿ ಹತ್ಯೆಯನ್ನು ಮಾಡಿ ಮುಗಿಸಿದ್ದರು. ತಮ್ಮ ಬಾಸ್ ಬಳಿಯಲ್ಲಿ ಶಹಬ್ಬಾಸ್ ಗಿರಿಯನ್ನು ಪಡೆಯುವ ಸಲುವಾಗಿ ಅವಾಚ್ಯ ಶಬ್ದಗಳನ್ನು ಬಳಸುತ್ತಲೇ ವಿಡಿಯೋವನ್ನು ಚಿತ್ರೀಕರಿಸಿ ಬಾಸ್‌ ಕುಳ್ಳು ರಿಜ್ವಾನ್‌ಗೆ ಕಳುಹಿಸಿದ್ದರು ಎನ್ನಲಾಗಿದೆ. ತಲೆಯನ್ನೇ ಪುಡಿಗೈದ ಹಂತಕರು ಭೀಕರವಾಗಿ ಹತ್ಯೆ ಮಾಡಿದ್ದರು. ಇಂಥ ಭೀಕರವಾಗಿ ಹತ್ಯೆಯನ್ನು ಅಪ್ರಾಪ್ತರ ಕೈಯಲ್ಲಿ ಮಾಡಿಸಲಾಗಿತ್ತು. ಅಪ್ರಾಪ್ತರ ವಯಸ್ಸು 15ರ ಅಸುಪಾಸುನಲ್ಲೇ ಇದೆ, ಹತ್ಯೆ ಮಾಡುವಂತೆ ಅವರನ್ನು ಪ್ರಚೋದಿಸಿ ಈ ಕೃತ್ಯ ಮಾಡಿಸಲಾಗಿದೆ.

ಬಾರ್ ಬಳಿ ಸ್ನೇಹಿತ ಜೊತೆಯಲ್ಲಿರುವ ಹೇಮಂತ

ಬಾರ್ ಬಳಿ ಸ್ನೇಹಿತ ಜೊತೆಯಲ್ಲಿರುವ ಹೇಮಂತ

ಹೇಮಂತನ ಹುಟ್ಟುಹಬ್ಬವಾಗಿದ್ದರಿಂದ ಕೆಲವು ಸ್ನೇಹಿತರಿಗೆ ಬಾರ್ ನಲ್ಲಿ ಎಣ್ಣೆಯನ್ನು ಕೊಡಿಸಿದ್ದ. ಬಾರ್ ನಲ್ಲಿ ಫುಲ್ ಚಿತ್ ಆಗಿದ್ದ ಹೇಮಂತ್ ಸ್ನೇಹಿತ ಜೊತೆಗೆ ಹೊರ ಬಂದಿದ್ದ. ಸ್ನೇಹಿತರ ಜೊತೆ ಬೈಕ್ ನಲ್ಲಿ ಹೊರಟಿದ್ದ ಇದನ್ನೆಲ್ಲಾ ಆರೋಪಿಗಳು ಗಮನಿಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಆ ಬಳಿಕ ಹೇಮಂತ್ ಭೀಕರವಾಗಿ ಹತ್ಯೆಯನ್ನು ಮಾಡಿದ್ದರು. ಇದೀಗ ಹರೀಶ್ ಮತ್ತು ಅಪ್ರಾಪ್ತರನ್ನು ಬ‍ಂಧಿಸಲಾಗಿದೆ. ಕುಳ್ಳು ರಿಜ್ವಾನ್ ನನ್ನು ಬಾಡಿ ವಾರೆಂಟ್ ಮೇಲೆ ಪಡೆದು ತನಿಖೆ ನಡೆಸುತ್ತೇವೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

Recommended Video

Tiger Crossing Road: ಹುಲಿಯನ್ನ ರಸ್ತೆ ದಾಟಿಸಿದ ಪೊಲೀಸ್ ಅಧಿಕಾರಿ | *India | OneIndia Kannada

English summary
Four minor boys arrested in Bengaluru in connection wi th the murder case. New ideas are made in rowdyism. But in this case, although not a new idea, it is evident that the innocent mind was filled with perverse attitude and brutality to make murderers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X