ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC Bus Service : ಆತಂಕ ಬೇಡ, ಜ. 24ರಂದು ಬಿಎಂಟಿಸಿ ಬಸ್ ಸಂಚಾರ ಇರಲಿದೆ

|
Google Oneindia Kannada News

ಬೆಂಗಳೂರು, ಜನವರಿ 23; ಮಂಗಳವಾರ ಬಿಎಂಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲವೇ? ಎಂಬ ಆತಂಕ ಬೇಡ. ಬೆಂಗಳೂರು ನಗರದ ಜನರ ಜೀವನಾಡಿಯಾದ ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜನವರಿ 24ರ ಮಂಗಳವಾರ ಪ್ರತಿಭಟನೆಗೆ ಕರೆ ನೀಡಿದೆ ಈ ಹಿನ್ನಲೆಯಲ್ಲಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಆತಂಕವಿತ್ತು.

ಡಬಲ್‌ ಡೆಕ್ಕರ್‌ ಎಸಿ ಬಸ್‌ಗೆ ಟೆಂಡರ್‌ ಆಹ್ವಾನಿಸಿದ ಬಿಎಂಟಿಸಿಡಬಲ್‌ ಡೆಕ್ಕರ್‌ ಎಸಿ ಬಸ್‌ಗೆ ಟೆಂಡರ್‌ ಆಹ್ವಾನಿಸಿದ ಬಿಎಂಟಿಸಿ

ಸೋಮವಾರ ಪ್ರಕಟಣೆ ಮೂಲಕ ಬಿಎಂಟಿಸಿ ಮಾಹಿತಿ ನೀಡಿದ್ದು ಬೆಳಗ್ಗೆ 11 ರಿಂದ ಸಂಜೆ 5.30ರ ತನಕ ನಾಲ್ಕು ಸಾರಿಗೆ ಸಂಸ್ಥೆಗಳ ವ್ಯಾಪ್ತಿಯ ವಿಭಾಗೀಯ ಕಚೇರಿಗಳ ಮುಂದೆ ಸತ್ಯಾಗ್ರಹ ನಡೆಸಲು ಕರೆ ನೀಡಲಾಗಿದೆ.

ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ

BMTC Bus Service Will Not Disturb On January 24th

ಆದರೆ ಇದರಿಂದಾಗಿ ಬಸ್‌ಗಳ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗುವುದಿಲ್ಲ. ಬಸ್‌ಗಳ ಕಾರ್ಯಾಚರಣೆ ಎಂದಿನಂತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಬೈಕ್ ಸವಾರನಿಗೆ ಥಳಿಸಿದ್ದ ಬಿಎಂಟಿಸಿ ಬಸ್ ಚಾಲಕನ ಅಮಾನತು ಬೈಕ್ ಸವಾರನಿಗೆ ಥಳಿಸಿದ್ದ ಬಿಎಂಟಿಸಿ ಬಸ್ ಚಾಲಕನ ಅಮಾನತು

4 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಂಗಳವಾರ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದೆ.

ನೂರಾರು ಸಂಖ್ಯೆಯ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರಿಂದ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಪತ್ರಿಕಾ ಪ್ರಕಟಣೆ ಮೂಲಕ ಜನರ ಆತಂಕ ದೂರಗೊಳಿಸಲಾಗಿದೆ.

ksrtc

ಬಸ್ ಸಂಚಾರ ಎದಿನಂತೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ನೌಕರರು ಸಹ ಪಾಲ್ಗೊಳ್ಳಲಿದ್ದಾರೆ. ಆದರೆ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಕೆಎಸ್ಆರ್‌ಟಿಸಿ ಸಹ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

English summary
Due to strike by workers Bangalore Metropolitan Transport Corporation (BMTC) bus service will not disturb on January 24th said in press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X