ಬಿಜೆಪಿ ಕ್ಯಾನ್ಸರ್, ಜೆಡಿಎಸ್ ಮತ್ತು ಕಾಂಗ್ರೆಸ್ ಕೆಮ್ಮು ನೆಗಡಿ

Posted By: ಬೆಳಗಾವಿ ಪ್ರತಿನಿಧಿಯಿಂದ
Subscribe to Oneindia Kannada

ಬೆಳಗಾವಿ: ಸಮಾಜಕ್ಕೆ ಬಿಜೆಪಿ ಕ್ಯಾನ್ಸರ್ ಇದ್ದಂತೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೆಮ್ಮು-ನೆಗಡಿ ಇದ್ದಂತೆ. ಇದು ಪ್ರಮುಖ ರಾಜಕೀಯ ಪಕ್ಷಗಳನ್ನು ಬಹುಭಾಷಾ ನಟ ಪ್ರಕಾಶ್‌ ರೈ ಹೋಲಿಕೆ ಮಾಡಿದ ಪರಿ.

ಪ್ರಾಣಿಗಳು ಆಗಾಗ ಮೌನವಾಗಿರುತ್ತವೆ ಎಂದು ಪ್ರತಾಪ ಸಿಂಹ ಕಾಲೆಳೆದ ರೈ

ರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಅವಶ್ಯಕತೆ ಇಲ್ಲ. ಪ್ರಾದೇಶಿಕ ಪಕ್ಷಗಳು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟಿರುವ ಪ್ರಕಾಶ್ ರೈ, ಕಾವೇರಿ ನೀರು ವಿವಾದ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಯಾವ ಪಕ್ಷ ಅಥವಾ ರಾಜಕಾರಣಿ ಈ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಇದರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಜ್ಞರ ಜತೆ ಸಮಾಲೋಚನೆ ನಡೆಸಲಿ. ಎಲ್ಲರೂ ಕಳ್ಳರು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ರಾಜಕೀಯ ಪಕ್ಷಗಳನ್ನು ಪ್ರಶ್ನಿಸುವ #ಜಸ್ಟ್ ಆಸ್ಕಿಂಗ್ ಅಭಿಯಾನದ ಭಾಗವಾದ ಪ್ರತಿಷ್ಠಾನದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಯಾವ ಪಕ್ಷ ಬೆಂಬಲಿಸಿ ಎಂದು ಹೇಳುವುದಿಲ್ಲ. ಆದರೆ ಬಿಜೆಪಿ ವಿರೋಧಿಸಿ ಎಂದು ಮಾತ್ರ ಹೇಳುತ್ತೇನೆ ಎಂದು ಹೇಳಿದರು.

Prakash rai batted for region party

ಸಂವಿಧಾನ ಬದಲಿಸಿ ಎಂದು ಹೇಳುವ ಪಕ್ಷವನ್ನು ಹೇಗೆ ನಂಬಲಿ? ದೇಶದ ಸಂವಿಧಾನಕ್ಕೆ ಅವರು ಅಗೌರವ ತೋರಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿದ ಸಚಿವರ ಮೇಲೆ ಕ್ರಮ ಕೈಗೊಳ್ಳದ ಪಾರ್ಟಿ ನಮಗೆ ಯಾಕೆ ಬೇಕು? ಅದನ್ನು ಪ್ರಶ್ನಿಸಿದ ನನ್ನನ್ನು ಪಾಕಿಸ್ತಾನಕ್ಕೆ ಹೋಗು ಎನ್ನುತ್ತಾರೆ. ಕೋಮುವಾದದ ವಿರುದ್ಧ ಮಾತನಾಡಿದರೆ ಹಿಂದು ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಕೋಮುವಾದ ಜಾಸ್ತಿಯಾಗಿದೆ. ಗೌರಿ ಲಂಕೇಶ ಹತ್ಯೆ ಆಘಾತ ತಂದಿದೆ. ಕೋಮುವಾದದ ವಿರುದ್ಧ ಮಾತನಾಡುವವರನ್ನು ಸಾಯಿಸಲಾಗುತ್ತಿದೆ. ಇಂತಹ ಸಾವನ್ನು ವಿಜೃಂಭಿಸುವುದು ಸರಿಯಲ್ಲ. ನಾಗರಿಕರ ಸಮಾಜಕ್ಕೆ ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು ರೈ, ತಮ್ಮ ಹೋರಾಟ ರಾಜಕೀಯ ಸ್ವರೂಪ ಪಡೆಯುವುದಿಲ್ಲ. ಯಾವ ಪಕ್ಷಕ್ಕೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

2019ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ ಎಂದು ಭವಿಷ್ಯ ನುಡಿದರು.

ಜಸ್ಟ್ ಆಸ್ಕಿಂಗ್ ಅಭಿಯಾನ

ಎಲ್ಲ ಸಮಾನ ಮನುಷ್ಯರನ್ನು ಒಂದುಗೂಡಿಸಬೇಕು. ದೋಷಗಳನ್ನು ಪ್ರಶ್ನಿಸಲು, ಎಲ್ಲರೂ ಮಾತನಾಡಲು ಅರ್ಹರು ಎಂದು ಜಸ್ಟ್ ಆಸ್ಕಿಂಗ್ ಅಭಿಯಾನ ಮಾಡುತ್ತಿದ್ದೇನೆ. ಮಾತಿನ ಮೂಲಕ ಅಥವಾ ಹೋರಾಟದ ಮೂಲಕ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದು ತಪ್ಪು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾನು ಮಾಡುತ್ತಿರುವ ಅಭಿಯಾನದ ಉದ್ದೇಶ ಎಲ್ಲರೂ ಸ್ವತಂತ್ರರು ಮತ್ತು ಸಮಾನರು ಎಂದು ತೋರಿಸುವುದಾಗಿದೆ. ಎಲ್ಲರಿಗೂ ಪ್ರಶ್ನಿಸುವ ಹಕ್ಕು ಇದೆ. ಸಾಹಿತಿಗಳು ಹತ್ಯೆಯಾಗುತ್ತಿದ್ದಾರೆ. ಯಾಕೆ ಮಾಡುತ್ತಿದ್ದಾರೆ? ತಡೆಯುವುದು ಹೇಗೆ? ಎನ್ನುವುದರ ಕುರಿತು ಚರ್ಚಿಸುವುದನ್ನು ಬಿಟ್ಟು ರಾಜಕೀಯ ಮಾಡುವುದು ಎಷ್ಟು ಸರಿ? ಗೋ ಹತ್ಯೆ ತಡೆಯಲು ಕಾನೂನು ಮಾಡುವುದು ಬಿಟ್ಟು ಉಪದೇಶ ಮಾಡುವುದು ಹೇಗೆ? ಎಂದು ಪ್ರಶ್ನೆಗಳನ್ನು ತೆರೆದಿಟ್ಟರು.

ನಾನು ಹಿಂದೂ ವಿರೋಧಿ, ಕಾಂಗ್ರೆಸ್ ಏಜೆಂಟ್, ಎಡಪಂಥೀಯ ಎಂದೆಲ್ಲ ಬಿಂಬಿಸಲಾಗುತ್ತಿದೆ. ಆದರೆ, ನಾನು ಯಾವ ಪಕ್ಷಕ್ಕೆ ಸೇರಿದವನಲ್ಲ. ಇಂದು ಮಾಧ್ಯಮ ಕ್ಷೇತ್ರ ದೇಶದ ಶ್ರೀಮಂತ ಬಂಡವಾಳಶಾಹಿಯ ಕೈಗೆ ಸಿಕ್ಕಿದೆ. ಅವು ಬಲಪಂಥೀಯ ವಿಚಾರಗಳನ್ನೇ ಮಂಡಿಸುತ್ತವೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Prakash rai, who is leading #justasking Foundation batted for regional party in the state to solve the all the issues including cauvery water crisis.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ