Lok Sabha Election 2024: ಪ್ರಚಾರಕ್ಕೆ ಅಡ್ಡಿ ಪಡಿಸುತ್ತಿದೆ ರಣಬಿಸಿಲು: ಧಗೆಗೆ ರಾಜಕಾರಣಿಗಳು ಕಾಂಗಾಲು
ದೇಶದಲ್ಲಿ ಈಗ ಚುನಾವಣೆಯ ಕಾವು ಏರುತ್ತಿದೆ. ಕರ್ನಾಟಕದಲ್ಲೂ ಇಲೆಕ್ಷನ್ ಬಿಸಿ ಏರುತ್ತಿದೆ. ಅಲ್ಲದೆ ರಣ ಬಿಸಿಲು ಸಹ ದಿನೇ ದಿನೇ ಏರುತ್ತಿದೆ. ಈ ನಡುವೆ ಚುನವಣಾ ಪ್ರಚಾರವನ್ನು ಸಹ ಅಭ್ಯರ್ಥಿಗಳು ಆರಂಭಿಸಿದ್ದಾರೆ. ಆದರೆ ರಾಜ್ಯದ ಹಲವೆಡೆ ಭಾರೀ ಬಿಸಿಲಿನಿಂದ ಪ್ರಚಾರಕ್ಕೆ ತೊಂದರೆ ಆಗಿದೆ.
ಬೆಳಗಾವಿಯಲ್ಲಿ ಈ ಭಾರಿ ಬಿಸಿಲು ಹೆಚ್ಚಾಗಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲು ಎಲೆಕ್ಷನ್ ಟೈಮ್ ನಿಜಕ್ಕೂ ಅಭ್ಯರ್ಥಿಗಳಿಗೆ ಇದು ಟೆಸ್ಟಿಂಗ್ ಟೈಮ್. ಏಸಿ ರೂಮ್, ಏಸಿ ಕಾರ್‌ಗಳಲ್ಲಿ ತಿರುಗಾಡುವ ಅಭ್ಯರ್ಥಿಗಳು ರಣ ಬಿಸಿಲಿನ ಹೊಡೆತಕ್ಕೆ ಹೈರಾಣಾಗಿದ್ದಾರೆ. ಬಿಸಿಲು ನಿಜಕ್ಕೂ ಈ ಭಾಗದಲ್ಲಿ ಪ್ರಚಾರಕ್ಕೆ ಅಡ್ಡಿ ಮಾಡಿದ್ದಂತೂ ಸುಳ್ಳಲ್ಲ.

ಬಿಸಿಲಿನ ಧಗೆ ತಡೆಯಲು ಪ್ಲ್ಯಾನ್
ಸಾಮಾನ್ಯವಾಗಿ ರಾಜಕಾರಣಿಗಳಿಗೆ ಐಶಾರಾಮಿ ವ್ಯವಸ್ಥೆಗಳು ಇದ್ದೆ ಇರುತ್ತವೆ. ಆದರೆ ಚುನಾವಣೆಯ ಸಮಯದಲ್ಲಿ ಇವುಗಳಿಗೆ ಕೊಂಚ ಬ್ರೇಕ್ ಬಿದ್ದಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿರುತ್ತಾರೆ. ಜನರನ್ನು ಸಂಪರ್ಕಿಸಲು ಈ ಟೈಮ್ ಅವರಿಗೆ ಬೆಸ್ಟ್. ಹೀಗಾಗಿ ಬಿಸಿಲನ್ನು ಲೆಕ್ಕಿಸದೆ ಪ್ರಚಾರ ನಡೆಸಿದ್ದಾರೆ. ಆದರೆ ರಣಬಿಸಿಲು ಇವರು ಮಾಡಿಕೊಂಡ ಪ್ಲ್ಯಾನ್ ಉಲ್ಟಾ ಮಾಡಿದೆ. ಚುನಾವಣಾ ರ್ಯಾಲಿಗಳಿಗೆ ಜನರನ್ನು ಕರೆತರಲು ಬಿಸಿಲು ಅಡಚಣೆ ಮಾಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಾಧಾರಣ ವಾತವರಣ ಇರುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಬಿಸಿಲು ವಸಂತ ಕಾಲದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ರಾಜಕೀಯ ಪಕ್ಷಗಳ ಹೊರಾಂಗಣ ಕೆಲಸಗಳಿಗೆ ಅಡಚಣೆ ಆಗಿದೆ. ಬಿಸಿಲಿನಲ್ಲಿ ತಿರುಗಾಡಿದ ಅಭ್ಯರ್ಥಿಗಳ ಬಣ್ಣ ಬದಲಾಗುತ್ತಿದೆ. ಬೆವರು ನಿಲ್ಲದಂತೆ ಇಳಿಯುತ್ತಲೇ ಇರುತ್ತಿದೆ. ಅಲ್ಲದೆ ತೂಕದಲ್ಲಿ ಏರಿಳಿತ ಆಗುತ್ತಿದೆ. ಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರಾಜಕೀಯ ಮುಖಂಡರು ಬೇರೆ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಜಿದ್ದು
ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಕ್ಕೆ ಘೋಷಣೆ ಮಾಡಿದೆ. ಈ ಕ್ಷೇತ್ರದಲ್ಲಿ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಫೈಟ್ ಇದೆ. ಹೀಗಾಗಿ ಈ ಎಲೆಕ್ಷನ್ ಶತಾಯಗತಾಯ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದ್ದಾರೆ. ಬಿಸಿ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ಸಮಯದಲ್ಲಿ ಅಭ್ಯರ್ಥಿಗಳು ಪ್ರಚಾರಕ್ಕೆ ವಿರಾಮ ನೀಡಿದ್ದಾರೆ. ಅಲ್ಲದೆ ಇಳಿ ಸಂಜೆಯ ಸಮಯವನ್ನು ಪ್ರಚಾರಕ್ಕೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ಬೆಳಗೆಯ ಸಮಯವನ್ನು ಸಹ ಇದಕ್ಕೆ ಮೀಸಲು ಇಡುತ್ತಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪೂರ್ತಿ ದಿನದ ಲಾಭವನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.

ಈ ಬಾರಿ ಸ್ಪರ್ಧೆ ತೀವ್ರವಾಗಿದೆ. ನಾವು ಪ್ರಚಾರವನ್ನು ಬೆಳಗ್ಗೆ ಹಾಗೂ ಸಾಯಂಕಾಲ ನಡೆಸುತ್ತಿದ್ದೇವೆ. ಈಗಾಗಲೇ ಕಾರ್ಯಕರ್ತರಿಗೆ ಕ್ಯಾಪ್‌ಗಳನ್ನು ನೀಡಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಇವು ಸಹಾಯಕವಾಗುತ್ತವೆ ಎಂದು ಬೆಳಗಾವಿ ಗ್ರಾಮಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಚುನಾವಣಾ ತಯಾರಿಗೆ ನಮಗೆ ಹೆಚ್ಚು ಸಮಯವಿಲ್ಲ. ಹೀಗಾಗಿ ಬಿಸಿಲಿನ ನಡುವೆಯೇ ಪ್ರಚಾರ ನಡೆಸುತ್ತಿದ್ದೇವೆ. ನಾವು ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ಬೆಳಗಾವಿ ಗ್ರಾಮಿಣ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ್ ಹೇಳಿದ್ದಾರೆ.
ದೇಶದ ಹಲವೆಡೆಯೂ ಇದೇ ಸ್ಥಿತಿ ಆಗಿದೆ. ಹಲೆವೆಡೆ ಬಿಸಿಲಿನ ಬಿಸಿ ಹೆಚ್ಚಾಗಿದ್ದು, ಪ್ರಚಾರಕ್ಕೆ ಅಡೆತಡೆ ಆಗಿದೆ. ಹೀಗಾಗಿ ಸೂರ್ಯ ತನ್ನ ಕೆಲಸವನ್ನು ಆರಂಭಿಸುವ ಮುನ್ನ ಪಕ್ಷಗಳು ಕಾರ್ಯಪ್ರವೃತ್ತರಾಗುತ್ತಿವೆ. ಇನ್ನು ಸಾಯಂಕಾಲದ ಸಮಯವನ್ನು ಪಕ್ಷಗಳು ಹೆಚ್ಚಾಗಿ ಬಳಸಿಕೊಳ್ಳುತ್ತಿವೆ.












Click it and Unblock the Notifications